Wednesday, 23rd October 2024

Kichcha Sudeep on Mother : ಅಮ್ಮನ ಅಗಲಿಕೆ ಕುರಿತು ಭಾವುಕ ಸಂದೇಶ ಬರೆದ ಕಿಚ್ಚ ಸುದೀಪ್‌

Kichcha Sudeep on Mother

ಬೆಂಗಳೂರು : ನಟ ಕಿಚ್ಚ ಸುದೀಪ್ (Kichcha Sudeep) ಅವರ ತಾಯಿ ಸರೋಜಾ ಸಂಜೀವ್ (Saroja Sanjeev) ಅವರು ಭಾನವಾರ ನಿಧನ ಹೊಂದಿದ್ದು, ಅಮ್ಮನ ಅಗಲಿಕೆಯ ನೋವಿನಲ್ಲಿಅವರು ಸಾಮಾಜಿಕ ಜಾಲತಾಣಗಳಲ್ಲಿ ಭಾವುಕ ಸಂದೇಶವೊಂದನ್ನು ಪೋಸ್ಟ್‌ ಮಾಡಿದ್ದಾರೆ. ಅಮ್ಮನ ಬಗ್ಗೆ ಅಪಾರ ಪ್ರೀತಿ ಇಟ್ಟಿದ್ದ ಕಿಚ್ಚ ಸುದೀಪ್ ಅವರು ತಾಯಿ ವಿಧಿವಶರಾದ ತಕ್ಷಣ ಸಣ್ಣ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತಿದ್ದರು. ಸೋಮವಾರ ಬೆಳಗ್ಗೆ ಅವರು ಈ ಬಗ್ಗೆ ಪೋಸ್ಟ್‌ ಮಾಡಿದ್ದಾರೆ. ಅದರಲ್ಲಿ ತಮ್ಮ ತಾಯಿಗೆ ಏನಾಯಿತು ಹಾಗೂ ಕೊನೇ ಕ್ಷಣದಲ್ಲಿ ತಾಯಿಯ ಹೋರಾಟ ಮತ್ತು ಆಗಿರುವ ನಷ್ಟವನ್ನು ಬರೆದುಕೊಂಡಿದ್ದಾರೆ.

ನನ್ನ ಜೀವನದ ಅತ್ಯಂತ ನಿಷ್ಪಕ್ಷಪಾತ, ಪ್ರೀತಿಯ , ಕ್ಷಮೆಯ , ಕಾಳಜಿ ವಹಿಸುವ ನನ್ನ ತಾಯಿ ಸದಾ ಗೌರವಕ್ಕೆ ಪಾತ್ರರಾದವರು. ಅವರು ನನಗೆ ಅತ್ಯಂತ ಮೌಲ್ಯಯುತವಾದವರು. ಏಕೆಂದರೆ ಅವರು ಮಾನವನ ರೂಪದಲ್ಲಿ ನನ್ನ ಪಕ್ಕದಲ್ಲೇ ಇದ್ದ ನಿಜವಾದ ದೇವರು.

ತಾಯಿಯೆಂದರೆ ನನ್ನ ಪಾಲಿಗೆ ನಿತ್ಯದ ಸಂಭ್ರಮ . ಆಕೆ ನನ್ನ ಪಾಲಿನ ಗುರು. ನನ್ನ ನಿಜವಾದ ಹಿತೈಷಿ. ನನ್ನ ಮೊದಲ ಅಭಿಮಾನಿ. ನನ್ನ ತಪ್ಪುಗಳನ್ನೂ ಆಕೆ ಇಷ್ಟಪಟ್ಟವಳು. ತಾಯಿಯೀಗ ಸುಂದರವಾದ ನೆನಪು.

ನಾನು ಈಗ ಅನುಭವಿಸುತ್ತಿರುವ ನೋವನ್ನು ವ್ಯಕ್ತಪಡಿಸಲು ನನಗೆ ಪದಗಳಿಲ್ಲ, ಸೃಷ್ಟಿಯಾಗಿರುವ ಶೂನ್ಯವನ್ನು ಒಪ್ಪಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. 24 ಗಂಟೆಗಳಲ್ಲಿ ಚಿತ್ರಣವೇ ಬದಲಾಗಿದೆ.

ಪ್ರತಿ ದಿನ ಬೆಳಗ್ಗೆ ನನಗೆ ಆಕೆಯಿಂದ ‘ಗುಡ್‌ಮಾರ್ನಿಂಗ್ ಕಂದಾ’ ಎಂಬ ಸಂದೇಶ ಬರುತ್ತಿತ್ತು. ಆದರೆ, ಅಕ್ಟೋಬರ್ 18ರಂದು ಆಕೆ ಕೊನೇ ಸಂದೇಶ ಕಳುಹಿಸಿದ್ದಳು. ಮರು ದಿನ ಬೆಳಗ್ಗೆ ಎದ್ದಾಗ ಆಕೆಯ ಸಂದೇಶ ಇರಲಿಲ್ಲ. ನಾನಾಗ ಬಿಸ್‌ಬಾಸ್‌ ಶೂಟಿಂಗ್‌ನಲ್ಲಿದ್ದೆ. ಹಲವು ವರ್ಷಗಳ ಬಳಿಕ ಇದು ಮೊದಲನೆ ಅನುಭವ. ಆಕೆಗೆ ಸಂದೇಶ ಕಳುಹಿಸಿ ಕರೆ ಮಾಡೋಣ ಅಂದುಕೊಂಡೆ. ಬಿಗ್‌ಬಾಸ್ ವಿಚಾರದಲ್ಲಿ ಚರ್ಚೆ ನಡೆಸುತ್ತಾ ವೇದಿಕೆಗೆ ಏರುವ ಮೊದಲು ಕರೆ ಮಾಡಿ ವಿಚಾರಿಸಿದೆ. ಈ ವೇಳೆ ಅವರು ಆಸ್ಪತ್ರೆಗೆ ದಾಖಲಾಗಿದ್ದ ವಿಷಯ ಗೊತ್ತಾಯಿತು. ತಕ್ಷಣ ತಂಗಿಗೆ ಕರೆ ಮಾಡಿದೆ. ಅಕೆ ಆಸ್ಪತ್ರೆಯಲ್ಲಿದ್ದಳು. ವೈದ್ಯರ ಬಳಿ ಮಾತನಾಡಿದ ಬಳಿಕ ವೇದಿಕೆಯೇರಿದೆ. ಈ ವೇಳೆ ಬೇರೆಯವ ಮೂಲಕ ಸಂದೇಶ ಬಂತು. ನನ್ನ ತಾಯಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು. ಸಂದಿಗ್ಥ ಪರಿಸ್ಥಿತಿಯಲ್ಲಿದ್ದೆ. ಶನಿವಾರದ ಎಪಿಸೋಡ್ ಮುಗಿಸಬೇಕಾಗಿತ್ತು. ಇಂಥ ಸ್ಥಿತಿ ನನಗೆ ಜೀವನದಲ್ಲಿ ಮೊದಲ ಬಾರಿಗೆ ಎದುರಾಯಿತು. ತಾಯಿಯ ಆರೋಗ್ಯ ಬಗ್ಗೆ ಭಯ ಶುರುವಾಗಿತ್ತು. ಕೆಲಸವನ್ನು ಮುಂದುವರಿಸಿದೆ. ಅದು ನನ್ನ ತಾಯಿಯೇ ಹೇಳಿದ ಪಾಠ. ಎಂಥ ಕಠಿಣ ಪರಿಸ್ಥಿತಿಯಲ್ಲೂ ನಿರಾಳವಾಗಿಬೇಕು ಹಾಗೂ ಶ್ರದ್ಧೆಯಿಂದ ಕೆಲಸ ಮಾಡಬೇಕು. ಆ ತತ್ವ ಅಮೂಲ್ಯ.

ಶನಿವಾರದ ಎಪಿಸೋಡ್‌ ಮುಗಿಸಿ ಆಸ್ಪತ್ರೆಗೆ ಓಡಿದೆ. ನಾನು ಅಲ್ಲಿಗೆ ತಲುಪುವ ಮೊದಲು ಆಕೆಯನ್ನು ವೆಂಟಿಲೇಟರ್‌ನಲ್ಲಿ ಇಡಲಾಗಿತ್ತು. ಆಕೆಯನ್ನು ನನಗೆ ನೋಡಲು ಸಾಧ್ಯವಾಗಲಿಲ್ಲ. ಆ ಹೊತ್ತಿನಲ್ಲೂ ತಾಯಿ ಪ್ರಜ್ಞೆಯಲ್ಲಿದ್ದರು. ಭಾನುವಾರ ಬೆಳಗ್ಗಿನವರೆಗೆ ಅಮ್ಮ ಹೋರಾಟ ಮುಂದುವರಿಸಿದರು. ಆದರೆ, ಕೆಲವೇ ಗಂಟೆಗಳಲ್ಲಿ ಚಿತ್ರಣವೇ ಬದಲಾಯಿತು.

ಇದನ್ನೂ ಓದಿ: Kichcha Sudeep: ಬೊಮ್ಮಾಯಿ ತೋಳಿನಲ್ಲಿ ಮಗುವಿನಂತೆ ಅತ್ತ ಕಿಚ್ಚ ಸುದೀಪ್‌

ಅತ್ಯಂತ ಆಘಾತಕಾರಿ ಸುದ್ದಿ ಬಂತು ಮತ್ತು ಅದನ್ನು ದೇಹ ಮತ್ತು ಹೃದಯಕ್ಕೆ ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ.ನನ್ನ ತಾಯಿ ಮಹಾನ್‌ ಶಕ್ತಿ. ನಾನು ಆಕೆಯನ್ನು ಮಿಸ್ ಮಾಡಿಕೊಳ್ಳುತ್ತೇನೆ. ತಾಯಿಯನ್ನು ಈ ಭೂಮಿಯಿಂದ ಆಕೆಯನ್ನು ಕರೆದೊಯ್ಯುವುದು ಪ್ರಕೃತಿ ಮತ್ತು ದೇವರ ಆಯ್ಕೆಯಾಗಿದೆ.

ತಾಯಿಗೆ ಗೌರವ ಸಲ್ಲಿಸಲು ಬಂದ ಪ್ರತಿಯೊಬ್ಬರಿಗೂ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇದು ನಿಜವಾಗಿಯೂ ನಿಮ್ಮೆಲ್ಲರ ಬಗ್ಗೆ ತುಂಬಾ ಕರುಣಾಮಯಿಯಾಗಿತ್ತು. ಪಠ್ಯಗಳು ಮತ್ತು ಟ್ವೀಟ್‌ಗಳ ಮೂಲಕ ನನಗೆ ಸಮಾಧಾನ ಹೇಳಿದ ಎಲ್ಲರಿಗೂ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ.

ನನ್ನ ತಾಯಿ, ನನ್ನ ಜೀವನದ ಅನರ್ಘ್ಯ ಮುತ್ತೊಂದು ಹೊರಟುಹೋಯಿತು. ಅವಳು ಶಾಂತಿಯಿರುವ ಸ್ಥಳವನ್ನು ತಲುಪಿದ್ದಾಳೆ ಎಂದು ನನಗೆ ಖಾತ್ರಿಯಿದೆ. ಚಿರಶಾಂತಿ ಸಿಗಲಿ ಅಮ್ಮ ಎಂದು ಸುದೀಪ್ ಬರೆದುಕೊಂಡಿದ್ದಾರೆ.