Thursday, 24th October 2024

North Indians: ಉ.ಭಾ ಯುವಕರಿಂದ ಕುಡಿದ ಮತ್ತಿನಲ್ಲಿ ಗಲಾಟೆ, ಪೋಲಿಸರ ಮೌನ? ಸಾರ್ವಜನಿಕರಿಂದ ಆಕ್ರೋಶ ?

ವರದಿ : ಅರಸನಕುಂಟೆ ಗುರುಪ್ರಸಾದ್ 

ಮಾದನಾಯಕನಹಳ್ಳಿ : ಬೆಂಗಳೂರು ಬೆಳೆದಂತೆ, ಬೆಂಗಳೂರು ಹೊರವಲಯವು ಬೆಳೆಯುತ್ತಾ ಹೋಗುತ್ತಿದೆ.

ಉದ್ಯೋಗ ಹರಸಿ ಉತ್ತರ ಭಾರತದ ಯುವಕರು ದಾಸನಪುರ ಹಾಗೂ ಮಾದನಾಯಕನಹಳ್ಳಿ ಭಾಗಗಳಿಗೆ ಲಗ್ಗೆ ಇಡುತ್ತಿದ್ದಾರೆ. ರಾವುತ್ತನಹಳ್ಳಿ ರಸ್ತೆ, ಹಾರೋಕ್ಯಾತನಹಳ್ಳಿಯಲ್ಲಿ ಕೆಲಸ ಹರಸಿ ಬಿಡುಬಿಟ್ಟಿದ್ದಾರೆ, ಇವರು ಯಾವ ಭಾಗಗಳಿಂದ ಬಂದಿದ್ದಾರೆ.

ಇವರುಗಳು ಎಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿಯು ಪೊಲೀಸ್ ಇಲಾಖೆಗೆ ಗೊತ್ತೇ ಇಲ್ಲ, ಇವರುಗಳ ಆರ್ಭಟಕ್ಕೆ ಈ ಭಾಗದ ಜನರುಗಳು ಬೇಸತ್ತಿದ್ದಾರೆ, ಪೊಲೀಸ್ ಇಲಾಖೆಗೆ ಹಿಡಿಶಾಪ  ಹಾಕುತ್ತಿದ್ದಾರೆ. ಕೆಲಸ ಮುಗಿಸಿ ಸುಮ್ಮನಿದ್ದರೆ ಸರಿ ಆದರೆ, ಇವರುಗಳ ವರ್ತನೆ ಮಿತಿಮೀರಿದೆ, ರಾತ್ರಿಯಾದರೆ ಸಾಕು ಇವರುಗಳ ಆರ್ಭಟ ಜೋರಾಗುತ್ತಿದೆ.

ಪ್ರತಿನಿತ್ಯ ಕುಡಿದು ರಸ್ತೆಯಲ್ಲಿ ಗಲಾಟೆ, ಹೊಡೆದಾಟಗಳು ನಡೆಯುತ್ತಾ ಇವೇ ,ಕೇಳಲು ಹೋದ ಸ್ಥಳೀಯರ ಮೇಲೆಯೂ ಗಲಾಟೆ ಮಾಡುತ್ತಿದ್ದಾರೆ, ಇವರ ದುಂಡಾವರ್ತನೆ ಮಿತಿಮೀರಿದ್ದು, ರಸ್ತೆಯಲ್ಲಿ ಓಡಾಡುತ್ತಿರುವ ಸಾರ್ವಜನಿಕರಿಗೆ, ಮಹಿಳೆಯರಿಗೆ ಕಿರಿಕಿರಿ ಉಂಟಾಗುತ್ತಿದೆ.

ಅದರಲ್ಲೂ ರಾತ್ರಿ ವೇಳೆಯಲ್ಲಿ ಮಹಿಳೆಯರು ಈ ರಸ್ತೆಗಳಲ್ಲಿ ಓಡಾಡಲು ಹಿಂಜರಿಯುತ್ತಿದ್ದಾರೆ, ಕುಡಿದ ಮತ್ತಿನಲ್ಲಿ ಗಲಾಟೆ ಮಾಡುತ್ತಾ ಕೇಳಲು ಹೋದ ಸ್ಥಳೀಯರ  ಮೇಲೆಯೂ ತಮ್ಮ ದುಂಡಾವರ್ತನೆ ತೋರುತ್ತಿದ್ದಾರೆ, ಕಾನೂನು ಕ್ರಮ ಕೈಗೊಳ್ಳಬೇಕಾದ ಮಾದನಾಯಕನಹಳ್ಳಿ ಪೊಲೀಸ್ ಇಲಾಖೆಯ ಅಧಿಕಾರಿಗಳು  ಮೌನಕ್ಕೆ ಶರಣಾಗಿದ್ದಾರೆ.

ಇದನ್ನೂ ಓದಿ: Nelamangala News: ನೆಲಮಂಗಲದಲ್ಲಿ ಕಾರ್ಮಿಕನ ಕೊಲೆ