ಬೆಂಗಳೂರು : ಸ್ಯಾಂಡಲ್ವುಡ್ ರೋರಿಂಗ್ ಸ್ಟಾರ್ ಶ್ರೀಮುರುಳಿ ಅಭಿನಯದ ‘ಬಘೀರ’ ಚಿತ್ರದ (Bagheera Movie Trailer) ಟ್ರೇಲರ್ ರಿಲೀಸ್ ಆಗಿದೆ. ಈ ಸಿನಿಮಾವನ್ನು ಡಾ. ಸೂರಿ ನಿರ್ದೇಶಿಸಿದ್ದಾರೆ. ನಿರೀಕ್ಷಿತ ‘ಬಘೀರ’ ಚಿತ್ರ ಈಗಾಗಲೇ ತನ್ನ ಟೀಸರ್ ಮೂಲಕವೇ ಕುತೂಹಲ ಮೂಡಿಸಿತ್ತು. ಇದೀಗ ಸಿನಿಮಾದ ಟೀಸರ್ ಬಿಡುಗಡೆಗೊಳ್ಳುವ ಮೂಲಕ ಸಿನಿಮಾ ಮಂದಿರಕ್ಕೆ ಜನರನ್ನು ಸೆಳೆಯುವ ಲಕ್ಷಣ ಮೂಡಿಸಿದೆ.
ಬಘೀರ ಚಿತ್ರಕ್ಕೆ ಪ್ರಶಾಂತ್ ನೀಲ್ ಕಥೆ ಬರೆದಿದ್ದು, ಡಾ ಸೂರಿ ನಿರ್ದೇಶನ ಮಾಡಿದ್ದಾರೆ. ಶ್ರೀಮುರಳಿ, ರುಕ್ಮಿಣಿ ವಸಂತ್, ಪ್ರಕಾಶ್ ರಾಜ್, ರಂಗಾಯಣ ರಘು, ಅಚ್ಯುತ್ ಕುಮಾರ್, ಗರುಡ ರಾಮ್ ಸಿನಿಮಾದಲ್ಲಿಪ್ರಮುಖ ಪಾತ್ರ ವಹಿಸಿದ್ದಾರೆ. ಎ.ಜೆ ಶೆಟ್ಟಿ ಛಾಯಾಗ್ರಹಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಮೋಡಿ ಮಾಡಿದ್ದಾರೆ.
ಟ್ರೇಲರ್ ಗುಟ್ಟೇನು?
“ಅಮ್ಮ.. ದೇವರು ಯಾಕೆ ರಾಮಾಯಣ, ಮಹಾಭಾರತ ಅಂತ ಬರ್ತಾನೆ. ದಿನಾ ಯಾಕೆ ಬಲ್ಲ ಎಂದು ಹುಡುಗನೊಬ್ಬ ಅಮನನ್ನು ಕೇಳುವ ಮೂಲಕ ಟ್ರೇಲರ್ ಆರಂಭವಾಗುತ್ತದೆ. ದೇವರು ಯಾವಾಗಲೂ ಬರಲ್ಲ. ಸಮಾಜದಲ್ಲಿ ಪಾಪಗಳ ಸಂಖ್ಯೆ ಮೀತಿ ಮೀರಿದಾಗ, ಒಳ್ಳೆಯದರ ಮೇಲೆ ಕೆಟ್ಟದ್ದು ಇಲ್ಲದೇ ಹೋದಾಗ ಸಮಾಜ ಕುಲಗೆಟ್ಟಾಗ, ಮನುಷ್ಯರು ಮೃಗಗಳಾದಾಗ ಅವತಾರ ಎತ್ತುತ್ತಾನೆ. ಅವನು ಯಾವಾಗಲೂ ದೇವರಾಗಿಯೇ ಬರಲ್ಲ, ರಾಕ್ಷಸನಾಗಿಯೂ ಬರಬಹುದು” ಎಂದು ಸಂಭಾಷಣೆ ಮುಂದುವರಿಯುತ್ತದೆ. ಈ ಮೂಲಕ ಟ್ರೇಲರ್ನಲ್ಲಿಮುರಳಿಯ ದ್ವಿಪಾತ್ರದ ಸುಳಿವು ನೀಡಲಾಗಿದೆ. ಕತೆಯ ಸುಳಿವನ್ನು ಬಹುತೇಕ ನೀಡಿದ್ದಾರೆ.
ಎರಡು ಶೇಡ್ನಲ್ಲಿ ಬಘೀರ
ಬಘೀರ ಸಿನಿಮಾದಲ್ಲಿ ಶ್ರೀಮುರುಳಿ ಎರಡು ಶೇಡ್ನಲ್ಲಿ ಕಾಣಿಸಿದ್ದಾರೆ. ಒಂದರಲ್ಲಿ ಪೊಲೀಸ್ ಅಧಿಕಾರಿಯಾದರೆ, ಮತ್ತೊಂದರಲ್ಲಿ ಮುಖಕ್ಕೆ ಮುಖವಾಡ ಧರಿಸಿದ ಬಘೀರನಾಗಿದ್ದಾನೆ. ಪೊಲೀಸ್ ವೇಷದಲ್ಲಿದ್ದುಕೊಂಡು, ಸಮಾಜದ ಕೆಟ್ಟ ಮುಖಗಳನ್ನು ಸರ್ವನಾಶ ಮಾಡಲು ಬಘೀರ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: Kichcha Sudeep on Mother : ಅಮ್ಮನ ಅಗಲಿಕೆ ಕುರಿತು ಭಾವುಕ ಸಂದೇಶ ಬರೆದ ಕಿಚ್ಚ ಸುದೀಪ್
ಮಾಸ್ ಅವತಾರದಲ್ಲಿ ಎದುರಾಗಿರುವ ಶ್ರೀಮುರಳಿ, ಅಬ್ಬರದ ಡೈಲಾಗ್ಗಳ ಮೂಲಕವೇ ಅಬ್ಬರ ಸೃಷ್ಟಿಸಿದ್ದಾರೆ. ” ಪ್ರತಿಯಾಗಿ, ಕನ್ನಡಿಯಲ್ಲಿ ನನ್ನನ್ನು ನಾನು ನೋಡಿಕೊಂಡರೇ ಭಯ ಪಡಲ್ಲ ” ಎಂಬ ಸಂಭಾಷಣೆಯಿದೆ.