ಬಳ್ಳಾರಿ: ತಡೆಯಲಾಗದ ಬೆನ್ನು ನೋವಿನಿಂದ ನರಳುತ್ತಿರುವ ನಟ ದರ್ಶನ್ (Actor Darshan), ಕೊನೆಗೂ ಬಳ್ಳಾರಿಯಲ್ಲೇ ಎಂಆರ್‌ಐ ಸ್ಕ್ಯಾನಿಂಗ್ (Bellary Jail) ಪಡೆದುಕೊಳ್ಳಲು ಒಪ್ಪಿಗೆ ಸೂಚಿಸಿದ್ದಾರೆ. ನಿನ್ನೆಯವರೆಗೂ ನನ್ನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಎನ್ನುತ್ತಿದ್ದ ದರ್ಶನ್, ಇದೀಗ ಬಳ್ಳಾರಿಯಲ್ಲೇ ಇದನ್ನು ನಡೆಸಲು ಒಪ್ಪಿದ್ದಾರೆ.
ಚಿತ್ರದುರ್ಗದ ರೇಣುಕ ಸ್ವಾಮಿ ಕೊಲೆ (Renuka Swamy Murder Case)ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿರುವ ಆರೋಪಿ ದರ್ಶನ್‌ಗೆ ತೀವ್ರ ಬೆನ್ನು ನೋವು ಬಾಧಿಸುತ್ತಿರುವ ಹಿನ್ನೆಲೆಯಲ್ಲಿ ಎಂಆರ್‌ಐ ಸ್ಕಾನಿಂಗ್ ಮಾಡಿಸಲು ನಿರ್ಧರಿಸಲಾಗಿತ್ತು. ಬಳ್ಳಾರಿಯ ವಿಮ್ಸ್‌ನಲ್ಲಿ ಎಂಆರ್‌ಐ ಸ್ಕಾನಿಂಗ್ ಮಾಡಿಸಲು ಅಧಿಕಾರಿಗಳು ನಿರ್ಧರಿಸಿದ್ದರು. ಈಗಾಗಲೇ ಆರೋಪಿ ದರ್ಶನ್ ಜೊತೆಗೆ ಈ ಬಗ್ಗೆ ಮಾತನಾಡಿರುವ ಜೈಲು ಅಧಿಕಾರಿಗಳು, ತೀವ್ರ ಬೆನ್ನು ನೋವಿದೆ, ನೆಗ್ಲೆಕ್ಟ್ ಮಾಡಬೇಕಿಲ್ಲ, ಸ್ಕ್ಯಾನಿಂಗ್ ಮಾಡಿಸಲೇ ಬೇಕು ಎಂದಿದ್ದಾರೆ.
ಜೈಲಾಧಿಕಾರಿಗಳ ಮಾತಿಗೆ ದರ್ಶನ್ ಮೌನವಾಗಿಯೇ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ನಾಳೆ ದರ್ಶನ್ ಕುಟುಂಬಸ್ಥರು ಜೈಲಿಗೆ ಭೇಟಿ ನೀಡಲಿದ್ದಾರೆ. ಕುಟುಂಬಸ್ಥರೊಂದಿಗೆ ಮಾತನಾಡಿ ಸ್ಕ್ಯಾನಿಂಗ್‌ಗೆ ನಿರ್ಧಾರ ತಿಳಿಸಲಿದ್ದಾರೆ. ಮೀಡಿಯಾ ಹಾಗೂ ಸೆಕ್ಯೂರಿಟಿ ಪ್ರಾಬ್ಲಮ್ ಆಗುತ್ತೆ ಎಂದು ಸ್ಕ್ಯಾನಿಂಗ್ ಬೇಡ ಎನ್ನುತ್ತಿದ್ದ ದರ್ಶನ್, ಇಂದು ಜೈಲಾಧಿಕಾರಿಗಳ ಮಾತಿಗೆ ಮೌನದಲ್ಲೇ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಬಳ್ಳಾರಿ ವಿಮ್ಸ್ ನಿರ್ದೇಶಕರ ಜೊತೆ ಈ ಬಗ್ಗೆ ಜೈಲು ಅಧಿಕಾರಿಗಳು ಮಾತನಾಡಿದ್ದು, ನಾಳೆ ಎಂಆರ್‌ಐ ಸ್ಕ್ಯಾನಿಂಗ್ ಬಗ್ಗೆ ದಿನಾಂಕ ನಿರ್ಧರಿಸಲಿದ್ದಾರಂತೆ. ವಿಮ್ಸ್‌ನಲ್ಲಿ ಸೆಕ್ಯುರಿಟಿ ಬಗ್ಗೆ, ಸ್ಕ್ಯಾನಿಂಗ್ ಬಗ್ಗೆ ಚರ್ಚೆ ನಡೆಸಲಿದ್ದಾರೆ. ವಿಮ್ಸ್‌ನ ನ್ಯೂರೋ ವಿಭಾಗದಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ನಡೆಯಲಿದೆ.
ಇದನ್ನು ಓದಿ: Actor Darshan : ದರ್ಶನ್‌ಗಾಗಿ ಬಳ್ಳಾರಿ ಜೈಲಿಗೆ ಆರ್ಥೋ ಹಾಸಿಗೆ, ದಿಂಬು ಸರಬರಾಜು