Wednesday, 23rd October 2024

BBK 11: ಬಿಗ್ ಬಾಸ್ ಮನೆಯಲ್ಲಿ ಬುಗಿಲೆದ್ದ ಅಸಮಾಧಾನ: ಎರಡೇ ದಿನಕ್ಕೆ ಸುಸ್ತಾದ ಹನುಮಂತ

Hanumantha BBK 11

ಲಾಯರ್ ಜಗದೀಶ್ ನಿರ್ಗಮನದ ಬಳಿಕ ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಯಾವ ರೀತಿ ಇರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ. ಇನ್ನದಾರೂ ಮನೆ ಪ್ರಶಾಂತವಾಗಿ ಇರುತ್ತ ಎಂದು ನೋಡಲು ವೀಕ್ಷಕರು ಕಾದು ಕುಳಿತಿದ್ದರು. ಇದರ ನಡುವೆ ಮನೆಗೆ ಹನುಮಂತ ಅವರು ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಪಡೆದಿದ್ದಾರೆ. ಬಿಗ್​ ಮನೆಗೆ ಬರುತ್ತಿದ್ದಂತೆ ಹನುಮಂತ ಅವರಿಗೆ ಅದೃಷ್ಟ ಒಲಿದಿದ್ದು, ಬಿಗ್​ಬಾಸ್ ಇವರನ್ನು​ ಕ್ಯಾಪ್ಟನ್ ಎಂದು ಘೋಷಣೆ ಮಾಡಿದ್ದಾರೆ.

ಆದರೆ, ಕ್ಯಾಪ್ಟನ್ ಆದ ಎರಡೇ ದಿನಕ್ಕೆ ಹನಮಂತ ಅವರಿಗೆ ತಲೆಕೆಟ್ಟು ಹೋಗಿದೆ. ಬಿಗ್ ಬಾಸ್ ಮನೆಯಲ್ಲಿ ಅಸಮಾಧಾನ ಬುಗಿಲೆದ್ದಿದೆ. ಬಿಗ್​ ಬಾಸ್​ ಮನೆಯ ಕ್ಯಾಪ್ಟನ್​ ಹನುಮಂತ ಅವರಿಗೆ ಟಾಸ್ಕ್​​ ಕೊಟ್ಟಿದ್ದಾರೆ. ಮನೆಯ ಸ್ಪರ್ಧಿಗಳನ್ನು ನಂಬರ್​ ಆಧಾರದ ಮೇಲೆ ಸ್ಥಾನಗಳನ್ನು ನೀಡಬೇಕು ಎಂದು ಹೇಳಿದ್ದಾರೆ. ಆದರೆ ಹನುಮಂತು ನೀಡಿರುವ ಸ್ಥಾನದ ಕುರಿತು ಸ್ಪರ್ಧಿಗಳ ನಡುವೆ ಅಸಮಾಧಾನ ಉಂಟಾಗಿದೆ.

ಚೈತ್ರಾ ಕುಂದಾಪುರ, ಭವ್ಯ ಗೌಡ, ಕೀರ್ತಿ ಧರ್ಮರಾಜ್​, ತ್ರಿವಿಕ್ರಮ್​ ಹೀಗೆ ಕೆಲವರು ಹನುಮಂತು​ ಮೇಲೆ ಸಿಟ್ಟಿಗೆದ್ದಿದ್ದಾರೆ. ನನಗೆ ಈ ಸ್ಥಾನವನ್ನು ಯಾಕೆ ಕೊಟ್ಟೆ ಎಂದು ಕೋಪಿಸಿಕೊಂಡಿದ್ದಾರೆ. ಜೊತೆಗೆ ಹನುಮಂತ ಅವರನ್ನು ಪ್ರಶ್ನಿಸಿದ್ದಾರೆ. ಕ್ಯಾಪ್ಟನ್ಶಿ ಬಗ್ಗೆ ಏನೂ ಗೊತ್ತಿರದ ಸಿಂಗರ್ ಹನುಮಂತ ಕಂಗಾಲಾಗಿದ್ದಾರೆ. ಏನೂ ತಿಳಿಯದೆ ತಲೆ ಕೆರೆದುಕೊಳ್ಳುತ್ತಲೇ ಸ್ಪರ್ಧಿಗಳ ಎದುರು ಕುಳಿತು ಬಿಟ್ಟಿದ್ದಾರೆ. ಇವರೆಲ್ಲರ ಮಾತು ಕೇಳಿ ಹನುಮಂತ ಅವರು, ಈ ರೀತಿ ಜಗಳ ಆಡುತ್ತೀರಾ ಅಂದರೆ ಬರುತ್ತಿರಲಿಲ್ಲ. ನಾನು ಈ ಆಟದಲ್ಲಿ ಇಲ್ಲ. ಕ್ಯಾನ್ಸಲ್​, ಕ್ಯಾಪ್ಟನ್​ ಕ್ಯಾನ್ಸಲ್​ ಎಂದು ಬಿಗ್​ ಬಾಸ್​ ಬಳಿ ಹೇಳಿದ್ದಾರೆ.

ಜೀ ಕನ್ನಡ ವಾಹಿನಿಯ ಸರಿಗಮಪ ಸೀಸನ್-15ರ ರನ್ನರ್ ಅಪ್ ಆದ ಹಾವೇರಿ ಜಿಲ್ಲೆಯ ಹನುಮಂತ ಅವರು ಭಾನುವಾರ ಬಿಗ್‌ ಬಾಸ್‌ಗೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದರು. ಬಿಗ್​ ಮನೆಗೆ ಬರುತ್ತಿದ್ದಂತೆ ಹನುಮಂತ ಅವರಿಗೆ ಅದೃಷ್ಟ ಕೂಡ ಒಲಿಯಿತು. ಮೂರನೇ ವಾರ ವೈಲ್ಡ್‌ ಕಾರ್ಡ್‌ ಆಗಿ ಬಂದ ಸ್ಪರ್ಧಿಯನ್ನೇ ಬಿಗ್​ಬಾಸ್​ ಕ್ಯಾಪ್ಟನ್ ಎಂದು ಘೋಷಣೆ ಮಾಡಿದರು. ಹನುಮಂತ ಅವರು ಈಗಾಗಲೇ ಸಾಕಷ್ಟು ಹೆಸರು ಮಾಡಿದ್ದಾರೆ. ಗಾಯನ ಹಾಗೂ ಮುಗ್ಧತೆಯಿಂದಲೇ ಫೇಮಸ್ ಆಗಿದ್ದ ಇವರು ಗ್ರಾಮೀಣ ಪ್ರದೇಶ ಜನಪದ ಹಾಡುಗಳನ್ನು ಹಾಡುತ್ತ ಎಲ್ಲರ ಪ್ರೀತಿಯನ್ನು ಗಳಿಸಿದ್ದರು.

ಸಾಕಷ್ಟು ಜನಪ್ರಿಯತೆ ಸಿಕ್ಕ ಹಿನ್ನೆಲೆಯಲ್ಲಿ ನಂತರ ಜೀ ಕನ್ನಡದ ಹಲವು ಶೋಗಳಲ್ಲಿ ಅವರು ಕಾಣಿಸಿಕೊಂಡರು. ಡಾನ್ಸ್ ಕರ್ನಾಟಕ ಡಾನ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ಅಲ್ಲಿಯೂ ಹನುಮಂತ ಮಸ್ತ್​ ಡ್ಯಾನ್ಸ್​ ಮಾಡಿದ್ದರು. ಇದಾದ ಬಳಿಕ ಭರ್ಜರಿ ಬ್ಯಾಚುಲರ್ಸ್​ನಲ್ಲೂ ಮೋಡಿ ಮಾಡಿ ವೀಕ್ಷಕರನ್ನು ನಕ್ಕು ನಲಿಸಿದ್ದರು.

BBK 11: ಬಂದ ದಿನವೇ ಸಂಚಲನ ಸೃಷ್ಟಿಸಿದ ವೈಲ್ಡ್‌‌ ಕಾರ್ಡ್‌‌ ಸ್ಪರ್ಧಿ ಹನುಮಂತ