Wednesday, 30th October 2024

Dark Circle: ಕಣ್ಣಿನ ಕೆಳಗಿನ ಕಪ್ಪು ವರ್ತುಲ ನಿಮ್ಮ ಅಂದ ಕೆಡಿಸುತ್ತದೆಯೇ? ಹಾಗಾದ್ರೆ ಈ ಮಾಸ್ಕ್ ಹಚ್ಚಿ ನೋಡಿ!

Dark Circle

ಕೆಲಸದ ಒತ್ತಡ, ಚಿಂತೆ, ಸರಿಯಾಗಿ ನಿದ್ರೆ ಮಾಡದಿದ್ದಾಗ ಕಣ್ಣಿನ ಕೆಳಭಾಗದಲ್ಲಿ ಡಾರ್ಕ್ ಸರ್ಕಲ್‍ಗಳು (Dark Circle) ಮೂಡುತ್ತವೆ. ಇದು ನಿಮ್ಮ ಸೌಂದರ್ಯವನ್ನು ಕೆಡಿಸುತ್ತದೆ. ನೀವು ಡಾರ್ಕ್ ಸರ್ಕಲ್ ಮರೆಮಾಚಲು ಎಷ್ಟೇ ಮೇಕಪ್ ಹಚ್ಚಿದರೂ ಕೂಡ ಅದನ್ನು ಮರೆಮಾಚಲು ಆಗುವುದಿಲ್ಲ. ಅದಕ್ಕಾಗಿ ನೀವು ಅನೇಕ ವಿಧದ ದುಬಾರಿ ಕ್ರೀಂಗಳನ್ನು ಹಚ್ಚಿ ಕಣ್ಣಿಗೆ ಹಾನಿಮಾಡಿಕೊಳ್ಳುವ  ಬದಲು ಈ ಐ ಮಾಸ್ಕ್‌ ಅನ್ನು ಹಚ್ಚಿ. ಇದರಿಂದ ನಿಮಗೆ ಉತ್ತಮ ಫಲಿತಾಂಶ ಸಿಗುತ್ತದೆ. ಮತ್ತು ಕಣ್ಣಿಗೂ ಯಾವುದೇ ಹಾನಿಯಾಗುವುದಿಲ್ಲ.

Dark Circle

ಐ ಮಾಸ್ಕ್ ತಯಾರಿಸುವ ವಿಧಾನ:
ಕಣ್ಣಿನ ಕೆಳಗೆ ಮೂಡಿರುವ ಡಾರ್ಕ್ ಸರ್ಕಲ್ ಅನ್ನು ತೆಗೆದುಹಾಕಲು ಸ್ವಲ್ಪ ಹಾಲನ್ನು ತೆಗೆದುಕೊಂಡು ಅದರಲ್ಲಿ 3 ಬಾದಾಮಿಯನ್ನು ಉಜ್ಜಿ ಪೇಸ್ಟ್ ತಯಾರಿಸಿ. ಅದಕ್ಕೆ 2 ವಿಟಮಿನ್ ಇ ಕ್ಯಾಪ್ಸುಲ್  ಹಾಗೂ ಎರಡು ಎಳೆ ಕೇಸರಿಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಈ ಐ ಮಾಸ್ಕ್‌ ಕಣ್ಣಿನ ಕೆಳಭಾಗಕ್ಕೆ ಹಚ್ಚಿ. ಒಣಗಿದ ಬಳಿಕ ಅದನ್ನು ಒದ್ದೆ ಬಟ್ಟೆಯಿಂದ ಒರೆಸಿಕೊಳ್ಳಿ. ಈ ಐ ಮಾಸ್ಕ್‌ ತಯಾರಿಸಿ 4 ದಿನಗಳ ಕಾಲ ಬಳಸಬಹುದು. ಇದು ಕಣ್ಣಿನ ಕೆಳಗಿರುವ ಡಾರ್ಕ್ ಸರ್ಕಲ್ ಅನ್ನು ನಿವಾರಿಸುವುದು ಮಾತ್ರವಲ್ಲ ಕಣ್ಣಿನ ಕೆಳಗೆ ಮೂಡಿರುವ ನೆರಿಗೆಗಳನ್ನು ಹೋಗಲಾಡಿಸುತ್ತದೆ.

ಹಾಲು: ಹಾಲಿನಲ್ಲಿ ಲ್ಯಾಕ್ಟಿಕ್ ಆಮ್ಲ ಮತ್ತು ಇತರ ಪೋಷಕಾಂಶಗಳಿವೆ. ಇದು ಡಾರ್ಕ್‌ ಸರ್ಕಲ್‍ಗಳು ಮತ್ತು ಕಪ್ಪು ಚರ್ಮವನ್ನು ತಿಳಿಯಾಗಿಸುತ್ತದೆ. ಅಲ್ಲದೇ ಹಾಲು ಹೊಸ ಜೀವಕೋಶಗಳ ಬೆಳವಣಿಗೆಯನ್ನು ಉತ್ತೇಜಿಸುವ ಮೂಲಕ ಡಾರ್ಕ್‌ ಸರ್ಕಲ್‍ಗಳು ಮತ್ತು ಹೈಪರ್‌ಪಿಗ್ಮಂಟೇಶನ್‌  ಕಡಿಮೆ ಮಾಡುತ್ತದೆ.

ಬಾದಾಮಿ: ಬಾದಾಮಿ ಕಣ್ಣುಗಳ ಕೆಳಗಿನ ಡಾರ್ಕ್‌ ಸರ್ಕಲ್‌ಗಳು ತಿಳಿಗೊಳಿಸಲು ಮತ್ತು ಕಣ್ಣಿನ ಕೆಳಗೆ ಉಬ್ಬುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬಾದಾಮಿಯಲ್ಲಿ  ವಿಟಮಿನ್ ಇ ಮತ್ತು ವಿಟಮಿನ್ ಕೆ ಸಹ ಇದೆ, ಇದು ನಿಮ್ಮ ಕಣ್ಣುಗಳ ಚರ್ಮಕ್ಕೆ ತುಂಬಾ ಒಳ್ಳೆಯದು.

ಇದನ್ನೂ ಓದಿ:  ರೀಲ್ಸ್ ಮಾಡಲು ಹೋಗಿ ಜೀವ ಕಳೆದುಕೊಂಡ ಯುವಕ; ವಿಡಿಯೊ ವೈರಲ್

ಕೇಸರಿ: ಕೇಸರಿಯ ನಿಯಮಿತ ಬಳಕೆಯು ಕ್ರಮೇಣ ಡಾರ್ಕ್‍ ಸರ್ಕಲ್‍ಗಳನ್ನು ತಿಳಿಗೊಳಿಸುತ್ತದೆ. ಅಲ್ಲದೇ ಕಣ್ಣುಗಳ ಕೆಳಗಿನ ಊತವನ್ನು ಕಡಿಮೆ ಮಾಡುತ್ತದೆ. ನೆರಿಗೆಗಳನ್ನು ನಿವಾರಿಸುತ್ತದೆ ಮತ್ತು ಕಣ್ಣಿನ ಕೆಳಗಿನ ಪ್ರದೇಶಕ್ಕೆ ವಿಶ್ರಾಂತಿ ಮತ್ತು ಪೋಷಣೆಯನ್ನು ಒದಗಿಸುತ್ತದೆ.