Tuesday, 19th November 2024

Police Station: ಮಳೆ ಬಂದ್ರೆ ಸೋರುತ್ತೆ ಪೊಲೀಸ್ ಠಾಣೆ; ಗೃಹ ಸಚಿವರ ತವರು ಜಿಲ್ಲೆಯಲ್ಲೇ ದುಸ್ಥಿತಿ!

Police Station

ತುಮಕೂರು: ಗೃಹ ಸಚಿವ ಡಾ.ಜಿ.ಪರಮೇಶ್ವರ್ ತವರು ಜಿಲ್ಲೆಯಲ್ಲೇ ಪೊಲೀಸ್ ಠಾಣೆಯೊಂದು (Police Station) ಸಣ್ಣ ಮಳೆ ಬಂದರೆ ಸೋರುವ ದುಸ್ಥಿತಿಯಲ್ಲಿದೆ. ತುಮಕೂರು ನಗರದ ಜಯನಗರ ಪೊಲೀಸ್ ಠಾಣೆಯ (Jayanagara police station) ಪರಿಸ್ಥಿತಿ ಕಂಡು ಸಾರ್ವಜನಿಕರೆ ಇಂದೆಂಥ ಸ್ಥಿತಿ ಎಂದು ಅಸಮಾಧಾನ ಹೊರಹಾಕುತ್ತಿದ್ದಾರೆ.

ಸದ್ಯ ಸುಸಜ್ಜಿತವಾದ ಕಟ್ಟಡವಿಲ್ಲದೆ ನಗರದ ಜಯನಗರ ಪೊಲೀಸ್ ಠಾಣೆ ಸೋರುವ ಕಟ್ಟಡದಲ್ಲಿ ನಡೆಯುತ್ತಿದೆ. ಇದರಿಂದ ಸಣ್ಣ ಮಳೆಗೂ ನೀರು ಠಾಣೆಯ ಒಳಗೆ ನಿಲ್ಲುವಂತಾಗಿದೆ. ಮಳೆ ನೀರಿನಿಂದ ಠಾಣೆಯಲ್ಲಿನ ಕಂಪ್ಯೂಟರ್‌ಗಳು, ಯುಪಿಎಸ್ ಬ್ಯಾಟರಿಗಳು ಸೇರಿದಂತೆ ಕಡತಗಳು ಹಾಳಾಗುವ ಸ್ಥಿತಿ ಬಂದಿದೆ.

ಗೃಹ ಸಚಿವರ ತವರು ಜಿಲ್ಲೆಯಲ್ಲಿನ ಪೊಲೀಸ್ ಠಾಣೆಯ ಪರಿಸ್ಥಿತಿ ಹೀಗಾದರೆ ಬೇರೆ ಕಡೆ ಠಾಣೆಗಳ ಸ್ಥಿತಿ ಹೇಗಿದೆ ಎಂದು ಸಾರ್ವಜನಿಕರೆ ಪ್ರಶ್ನಿಸುವಂತಾಗಿದೆ. ಸದ್ಯ ಜಯನಗರ ಪೊಲೀಸ್ ಠಾಣೆ ನಡೆಯುತ್ತಿರುವ ಕಟ್ಟಡ ಹಳೆಯದಾಗಿದ್ದು, ಕಟ್ಟಡದ ಸಿಮೆಂಟ್ ಛಾವಣಿಯಿಂದಲೂ ಮಳೆಯ ನೀರು ಜಿನುಗುತ್ತಿದೆ. ಜನರಿಗೆ ರಕ್ಷಣೆ ನೀಡಬೇಕಾದ ಪೊಲೀಸರ ಕಟ್ಟಡದಲ್ಲಿ ಪೊಲೀಸರೆ ಮಳೆ ನೀರಿನಿಂದ ನಮ್ಮನ್ನು ರಕ್ಷಿಸಿ ಎನ್ನುವಂತಾಗಿದೆ.

ಈ ಸುದ್ದಿಯನ್ನೂ ಓದಿ | School Bus Problem: ಹುಲಿ, ಕರಡಿ ಓಡಾಡುವ ದಟ್ಟ ಕಾಡು ದಾಟಿ ಶಾಲೆಗೆ ಹೋಗ್ಬೇಕಿದೆ; ಬಸ್‌ ವ್ಯವಸ್ಥೆ ಮಾಡಿ; ಸಿಎಂಗೆ ಮಕ್ಕಳ ಮನವಿ

ಯುವಕರಿಂದ ಕುಡಿದ ಮತ್ತಿನಲ್ಲಿ ಗಲಾಟೆ, ಪೋಲಿಸರ ಮೌನ?

| ಅರಸನಕುಂಟೆ ಗುರುಪ್ರಸಾದ್ , ಮಾದನಾಯಕನಹಳ್ಳಿ
ಉದ್ಯೋಗ ಹರಸಿ ಉತ್ತರ ಭಾರತದ ಯುವಕರು ದಾಸನಪುರ ಹಾಗೂ ಮಾದನಾಯಕನಹಳ್ಳಿ ಭಾಗಗಳಿಗೆ ಲಗ್ಗೆ ಇಡುತ್ತಿದ್ದಾರೆ. ರಾವುತ್ತನಹಳ್ಳಿ ರಸ್ತೆ, ಹಾರೋಕ್ಯಾತನಹಳ್ಳಿಯಲ್ಲಿ ಕೆಲಸ ಹರಸಿ ಬಿಡುಬಿಟ್ಟಿದ್ದಾರೆ, ಇವರು ಯಾವ ಭಾಗಗಳಿಂದ ಬಂದಿದ್ದಾರೆ.

ಇವರುಗಳು ಎಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿಯು ಪೊಲೀಸ್ ಇಲಾಖೆಗೆ ಗೊತ್ತೇ ಇಲ್ಲ, ಇವರುಗಳ ಆರ್ಭಟಕ್ಕೆ ಈ ಭಾಗದ ಜನರುಗಳು ಬೇಸತ್ತಿದ್ದಾರೆ, ಪೊಲೀಸ್ ಇಲಾಖೆಗೆ ಹಿಡಿಶಾಪ  ಹಾಕುತ್ತಿದ್ದಾರೆ. ಕೆಲಸ ಮುಗಿಸಿ ಸುಮ್ಮನಿದ್ದರೆ ಸರಿ ಆದರೆ, ಇವರುಗಳ ವರ್ತನೆ ಮಿತಿಮೀರಿದೆ, ರಾತ್ರಿಯಾದರೆ ಸಾಕು ಇವರುಗಳ ಆರ್ಭಟ ಜೋರಾಗುತ್ತಿದೆ.

ಪ್ರತಿನಿತ್ಯ ಕುಡಿದು ರಸ್ತೆಯಲ್ಲಿ ಗಲಾಟೆ, ಹೊಡೆದಾಟಗಳು ನಡೆಯುತ್ತಾ ಇವೇ ,ಕೇಳಲು ಹೋದ ಸ್ಥಳೀಯರ ಮೇಲೆಯೂ ಗಲಾಟೆ ಮಾಡುತ್ತಿದ್ದಾರೆ, ಇವರ ದುಂಡಾವರ್ತನೆ ಮಿತಿಮೀರಿದ್ದು, ರಸ್ತೆಯಲ್ಲಿ ಓಡಾಡುತ್ತಿರುವ ಸಾರ್ವಜನಿಕರಿಗೆ, ಮಹಿಳೆಯರಿಗೆ ಕಿರಿಕಿರಿ ಉಂಟಾಗುತ್ತಿದೆ.

ಇದನ್ನೂ ಓದಿ: Nelamangala News: ನೆಲಮಂಗಲದಲ್ಲಿ ಕಾರ್ಮಿಕನ ಕೊಲೆ

ಅದರಲ್ಲೂ ರಾತ್ರಿ ವೇಳೆಯಲ್ಲಿ ಮಹಿಳೆಯರು ಈ ರಸ್ತೆಗಳಲ್ಲಿ ಓಡಾಡಲು ಹಿಂಜರಿಯುತ್ತಿದ್ದಾರೆ, ಕುಡಿದ ಮತ್ತಿನಲ್ಲಿ ಗಲಾಟೆ ಮಾಡುತ್ತಾ ಕೇಳಲು ಹೋದ ಸ್ಥಳೀಯರ  ಮೇಲೆಯೂ ತಮ್ಮ ದುಂಡಾವರ್ತನೆ ತೋರುತ್ತಿದ್ದಾರೆ, ಕಾನೂನು ಕ್ರಮ ಕೈಗೊಳ್ಳಬೇಕಾದ ಮಾದನಾಯಕನಹಳ್ಳಿ ಪೊಲೀಸ್ ಇಲಾಖೆಯ ಅಧಿಕಾರಿಗಳು  ಮೌನಕ್ಕೆ ಶರಣಾಗಿದ್ದಾರೆ.