Friday, 22nd November 2024

Terror attack: ಕಾಶ್ಮೀರ ಎಂದಿಗೂ ಪಾಕಿಸ್ತಾನಕ್ಕೆ ಸಿಗುವುದಿಲ್ಲ; ಖಡಕ್‌ ಎಚ್ಚರಿಕೆ ನೀಡಿದ ಫಾರೂಕ್ ಅಬ್ದುಲ್ಲಾ

Terror attack

ಶ್ರೀನಗರ: ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ(Farooq Abdullah) ಅವರು ಸೋಮವಾರ ಜಮ್ಮು ಮತ್ತು ಕಾಶ್ಮೀರದ ಗಗಾಂಗೀರ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದಾರೆ. ಭಾರತದಲ್ಲಿ ಭಯೋತ್ಪಾದನೆ ಚಟುವಟಿಕೆಗಳನ್ನು ನಿಲ್ಲಿಸುವಂತೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ. ಭಾರತದೊಂದಿಗೆ ಉತ್ತಮ ಬಾಂಧವ್ಯ ಬೇಕಾದರೆ ಪಾಕಿಸ್ತಾನ(Pakistana) ಈ ಚಟುವಟಿಕೆಗಳನ್ನು ನಿಲ್ಲಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ. “ಭಾರತದೊಂದಿಗೆ ಉತ್ತಮ ಬಾಂಧವ್ಯ ಬೇಕಾದರೆ ಪಾಕಿಸ್ತಾನ ಅನಣವಶ್ಯಕವಾಗಿ ಕಾಶ್ಮೀರದ ತಂಟೆಗೆ ಬರಬಾರದು. ಅವರು ಇದನ್ನು ಕೊನೆಗಾಣಿಸಬೇಕು ಎಂದು ಪಾಕಿಸ್ತಾನದ ನಾಯಕತ್ವಕ್ಕೆ ನಾನು ಹೇಳಲು ಬಯಸುತ್ತೇನೆ. ಕಾಶ್ಮೀರ ಪಾಕಿಸ್ತಾನ ಏನೇ ಮಾಡಿದರೂ ಕೂಡ ಕಾಶ್ಮೀರ ಎಂದಿಗೂ ಪಾಕಿಸ್ತಾನವಾಗುವುದಿಲ್ಲ. ನಾವು ಘನತೆಯಿಂದ ಬದುಕೋಣ ಮತ್ತು ಯಶಸ್ವಿಯಾಗೋಣ ಎಂದು ಹೇಳಿದ್ದಾರೆ.

ಪಾಕಿಸ್ತಾನವು ಭಾರತದ ನೆಲದಲ್ಲಿ ಭಯೋತ್ಪಾದನೆ ನಿಲ್ಲಿಸದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ನೀವು ಎಷ್ಟು ದಿನಗಳವರೆಗೆ ನಿಮ್ಮ ಪ್ರಯತ್ನವನ್ನು ಮುಂದುವರಿಸುತ್ತೀರಿ. 1947ರಿಂದ ಕಾಶ್ಮೀರವನ್ನು ಪಡೆಯಲು ಯತ್ನಿಸುತ್ತಲೇ ಇದ್ದೀರಿ. 75 ವರ್ಷಗಳಾದವು ಇನ್ನೂ ಪಾಕಿಸ್ತಾನದವರಿಗೆ ಕಾಶ್ಮೀರ ವಶಪಡಿಸಿಕೊಳ್ಳಲಾಗಲಿಲ್ಲ. ಇನ್ನು ಮುಂದೆ ಸಾಧ್ಯವೇ? ಇದು ಭಯೋತ್ಪಾದನೆಯನ್ನು ಕೊನೆಗೊಳಿಸುವ ಸಮಯ. ಇಲ್ಲದಿದ್ದರೆ ಫಲಿತಾಂಶವು ತುಂಬಾ ಗಂಭೀರವಾಗಿರುತ್ತದೆ. ಅವರು ನಮ್ಮ ಅಮಾಯಕರನ್ನು ಕೊಂದರೆ ಹೇಗೆ ಸುಮ್ಮನಿರಲು ಸಾಧ್ಯ, ಅವರ ಜೊತೆ ಮಾತುಕತೆ ನಡೆಸುವುದು ಹೇಗೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Terror Attack: ಜಮ್ಮು & ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸಕ್ಕೆ ನಾಗರಿಕ ಬಲಿ

ಜಮ್ಮು ಮತ್ತು ಕಾಶ್ಮೀರದ ಗಂದರ್‌ಬಾಲ್‌ ಜಿಲ್ಲೆಯಲ್ಲಿ ಭಾನುವಾರ ನಡೆದ ಉಗ್ರರ ದಾಳಿಯಲ್ಲಿ ಒಬ್ಬ ವೈದ್ಯ ಸೇರಿದಂತೆ ಆರು ವಲಸೆ ಕಾರ್ಮಿಕರು ಮೃತಪಟ್ಟಿದ್ದರು. ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾದ ಶಾಖೆಯಾದ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಅದರ ಹೊಣೆ ವಹಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಟಿಆರ್‌ಎಫ್‌ ಮುಖ್ಯಸ್ಥ ಶೇಖ್ ಸಜ್ಜಾದ್ ಗುಲ್ ಈ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದು, ಆತನ ಆದೇಶದ ಮೇರೆಗೆ ಗುಂಪಿನ ಸ್ಥಳೀಯ ಘಟಕವು ಕಾಶ್ಮೀರಿಗಳು ಮತ್ತು ಕಾಶ್ಮೀರೇತರರನ್ನು ಗುರಿಯಾಗಿಸಿಕೊಂಡು ಮೊದಲ ಬಾರಿ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಘಟನೆಯ ನಂತರ, ಭದ್ರತಾ ಪಡೆಗಳು ಗಗಂಗರ್, ಸೋನಮಾರ್ಗ್ ಮತ್ತು ಗಂದರ್‌ಬಾಲ್‌ನಲ್ಲಿ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಿದೆ.