ಬೆಂಗಳೂರು : ಪರಭಾಷಿಕರು ಅದರಲ್ಲೂ ಹಿಂದಿ ಮಾತನಾಡುವವರು ಮತ್ತು ಕನ್ನಡಿಗರ ನಡುವಿನ ಸಂಘರ್ಷ ಮಹಾನಗರ ಬೆಂಗಳೂರಿನಲ್ಲಿ ನಿಧಾನವಾಗಿ ತಾರಕಕ್ಕೆ ಏರುತ್ತಿದೆ. ಕೆಲವರು ಕನ್ನಡೇತರರನ್ನು ಪರಕೀಯರು ಎಂದು ನೋಡಿದರೆ, ಕೆಲವು ಪರಭಾಷಿಕರು ಕನ್ನಡಿಗರನ್ನೇ ವಿಲನ್ಗಳ ರೀತಿ ಬಿಂಬಿಸುತ್ತಿದ್ದಾರೆ. ಯಾರದ್ದು ಸರಿ, ಯಾರದ್ದು ತಪ್ಪು ಎಂಬುದು ಮುಗಿಯದ ಚರ್ಚೆ. ಆದರೆ, ಬೇರೆ ಊರಲ್ಲಿ ಹೋಗಿ ನೆಲೆಸುವಾಗ ಅಲ್ಲಿನ ಭಾಷೆಯನ್ನು (Kannada Learning) ಕಲಿಯುವುದೇ ಉತ್ತಮ ಎಂಬುದು ಎಲ್ಲರ ಅಭಿಪ್ರಾಯ. ಅಲ್ಲಿನ ಜನರೊಂದಿಗೆ ಹೆಚ್ಚಿನ ಬಾಂಧವ್ಯ ಹೊಂದಬಹುದು ಹಾಗೂ ವ್ಯವಹಾರವೂ ಸುಲಭ.
Whoever is doing this, is doing a great job. This is how you should be propagating your language instead of other violent ways. Beautiful concept 👏👏🫡 pic.twitter.com/WDilTtVXFS
— Kishor Bhat (@IamKishorBhat) October 21, 2024
ಅಸ್ಮಿತೆ ವಿಚಾರಕ್ಕೆ ಬಂದಾಗ ಆಟೋ ಚಾಲಕರು ಕನ್ನಡದ ಕಾವಲುಗಾರರು. ಕೆಲವು ಚಾಲಕರು ಪರಭಾಷಿಕರು ಕನ್ನಡ ಕಲಿಯಲೇಬೇಕು ಎಂದು ಜಿದ್ದಿಗೆ ಬಿದ್ದು ನಾನಾ ಯಡವಟ್ಟುಗಳನ್ನು ಮಾಡಿಕೊಂಡರೆ ಇನ್ನೂ ಕೆಲವರು ಸೌಮ್ಯವಾಗಿ ಕನ್ನಡ ಕಲಿಯುವಂತೆ ಪ್ರೇರೇಪಿಸುತ್ತಾರೆ. ಅಂಥದ್ದೇ ಒಂದು ಸುದ್ದಿ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.
ಆಟೋ ಚಾಲಕರೊಬ್ಬರು ಪರಭಾಷಿಕರಿಗೆ ಕನ್ನಡ ಕಲಿಸುವ ಯತ್ನ ಎಂಬ ಶೀರ್ಷಿಕೆ ಇರುವ ಬೋರ್ಡ್ ಆಟೋದಲ್ಲಿ ನೇತು ಹಾಕಿದ್ದಾರೆ. ಅದರಲ್ಲಿ ಅವರು ಕೆಲವೊಂದು ಅಗತ್ಯ ಸಂಭಾಷಣೆಗಳನ್ನು ಹೇಗೆ ಮಾಡುವುದು ಎಂದು ಬರೆಯಲಾಗಿದೆ. ಅದರಲ್ಲಿ ಆಟೊದ ಒಳಗಡೆ ಹೇಗೆ ಮಾತನಾಡುವುದು ಹಾಗೂ ಆಟೊದ ಹೊರಗಡೆ ಹೇಗೆ ಮಾತನಾಡುವುದು ಎಂಬುದನ್ನು ಬರೆಯಲಾಗಿದೆ. ನಮಸ್ಕಾರ ಸರ್ (Namaskara Sir) , ನಾನು ಕನ್ನಡ ಕಲಿತಾ ಇದ್ದೇನೆ (Naanu Kannada kalitha Idden) ಎಂಬ ಸರ್ ಸ್ವಲ್ಪ ಬೇಗ ಹೋಗಿ, ಸರ್ ಇನ್ನೂ ಸ್ವಲ್ಪ ಮುಂದೆ ಹೋಗಿ ರೈಟ್/ ಲೆಫ್ಟ್ ತೆಗೊಳ್ಳಿ, ಸರ್ ಇಲ್ಲೇ ನಿಲ್ಸಿ, ಸರ್ ಯುಪಿಐ ಇದೆಯಾ, ಅಥವಾ ಕ್ಯಾಶ್ ನಿಮ್ಮ ಹತ್ತರ ಇಷ್ಟು ರೂಪಾಯಿಗೆ ಚೇಂಜ್ ಇದೆಯಾ ಎಂದರೆಲ್ಲ ಬರೆಯಾಗಿದೆ.
ಆಟೋ ರಿಕ್ಷಾದ ಹೊರಗಡೆಯಾದರೆ, ಸರ್ ಎಲ್ಲಿ ಇದ್ದೀರಾ? ಎಲ್ಲಿಗೆ ಹೋಗ್ತೀರಾ? ನಂಗೆ ತುಂಬಾ ಅರ್ಜೆಂಟ್ ಇದೆ, ಸ್ವಲ್ಪ ಬನ್ನಿ, ಪ್ಲೀಸ್ ವೇಟ್ ಮಾಡಿ, ಎರಡು ನಿಮಿಷ ಅಲ್ಲಿ ಇರ್ತಿರಿ, ಬುಕಿಂಗ್ ಕ್ಯಾನ್ಸಲ್ ಮಾಡಿ ಎಂದೆಲ್ಲ ಬರೆಯಲಾಗಿದೆ.
ಎಲ್ಲೆಡೆ ಮೆಚ್ವುಗೆ
ಪರಭಾಷಿಕರೇ ಇರಲಿ, ಸ್ವ ಭಾಷಿಕರೆ ಇರಲಿ. ಆಟೋ ಚಾಲಕರ ದರ್ಪ ಸ್ವಲ್ಪ ಹೆಚ್ಚೇ ಇರುತ್ತದೆ. ಹೀಗಾಗಿ ಕನ್ನಡ ಮಾತನಾಡುವ ಅಥವಾ ಕಲಿಸುವ ವಿಚಾರಕ್ಕೆ ಬಂದಾಗ ಆಟೋ ಚಾಲಕರ ವರ್ತನೆ ಸ್ವಲ್ಪ ಕಿರಿಕಿರಿ ತರಿಸುತ್ತದೆ. ಆದರೆ, ಕನ್ನಡ ಕಲಿಸಲು ಸುಲಭ ವಿಧಾನ ಕಂಡುಕೊಂಡ ಆಟೋ ಚಾಲಕನ ಬಗ್ಗೆ ದೊಡ್ಡ ಮಟ್ಟಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಪರಭಾಷಿಕರ ಮೇಲೆ ದಬ್ಬಾಳಿಕ ಮಾಡುವ ಬದಲು ಇಂಥ ಸುಲಭ ಸಲಹೆಗಳೇ ಸೂಕ್ತ ಎಂಬುದಾಗಿ ಸಾಕಷ್ಟು ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಆಟೋ ಚಾಲಕರು ಮತ್ತು ಪರಭಾಷಿಕರ ನಡುವೆ ಸಾಕಷ್ಟು ಬಾರಿ ಜಗಳಗಳು ನಡೆದಿರುವ ಕಾರಣ ಆಟೋ ಚಾಲಕನ ತಂತ್ರ ಹೆಚ್ಚು ಜನಮೆಚ್ಚುಗೆಗೆ ಕಾರಣವಾಗಿದೆ.