-ಶೀಲಾ ಸಿ. ಶೆಟ್ಟಿ, ಬೆಂಗಳೂರು
ದೀಪಾವಳಿಗೂ ಮುನ್ನವೇ ಆಚರಿಸುವ ಟ್ರೆಡಿಷನಲ್ ಕರ್ವಾಚೌತ್ ಹಬ್ಬಕ್ಕೆ ಬಾಲಿವುಡ್ ತಾರೆಯರು ಧರಿಸಿದ್ದ, ಅತ್ಯಾಕರ್ಷಕ ಗ್ರ್ಯಾಂಡ್ ಟ್ರೆಂಡಿ ಎಥ್ನಿಕ್ ಡಿಸೈನರ್‌ವೇರ್‌ಗಳು, ಫ್ಯಾಷನ್ ಪ್ರಿಯರನ್ನು ಆಕರ್ಷಿಸಿರುವುದು ಮಾತ್ರವಲ್ಲ, ಈಗಾಗಲೇ ಫ್ಯಾಷನ್ ಲೋಕದ (Stars Festive Season Fashion) ಟಾಪ್ ಟ್ರೆಂಡ್ ಲಿಸ್ಟ್‌ಗೆ ಸೇರಿಕೊಂಡಿವೆ. ಕರ್ವಾಚೌತ್‌ಗೂ ಇಲ್ಲಿಯ ಫ್ಯಾಷನ್‌ಗೂ ಏನು ಸಂಬಂಧ ಎಂದುಕೊಳ್ಳುತ್ತಿದ್ದೀರಾ! ಸಂಬಂಧವಿದೆ. ಬಾಲಿವುಡ್ ತಾರೆಯರು ಧರಿಸುವ ಒಂದೊಂದು ಹಬ್ಬದ ಸೀಸನ್ ಎಥ್ನಿಕ್ ಫ್ಯಾಷನ್‌ವೇರ್‌ಗಳು ಈಗಾಗಲೇ ಟ್ರೆಂಡಿಯಾಗಿವೆ. ಮುಂಬರುವ ದಿನಗಳಲ್ಲಿ, ರಾಷ್ಟ್ರದಾದ್ಯಂತ ಇವುಗಳ ರಿಪ್ಲಿಕಾ ಡಿಸೈನರ್‌ವೇರ್‌ಗಳು, ಮಾರುಕಟ್ಟೆಗೆ ಬಿಡುಗಡೆಗೊಂಡು, ಸಾಮಾನ್ಯ ವರ್ಗದ ಹುಡುಗಿಯರ ಹಾಗೂ ಮಹಿಳೆಯರ ಕೈ ಸೇರಲಿವೆ.
ಎಕ್ಸ್‌ಕ್ಲೂಸೀವ್ ಡಿಸೈನರ್‌ವೇರ್ಸ್
ಇದಕ್ಕೆ ಕಾರಣ ಇಷ್ಟೇ! ತಾರೆಯರ ಪ್ರತಿ ಡಿಸೈನರ್‌ವೇರ್ಸ್, ಎಕ್ಸ್‌ಕ್ಲೂಸಿವ್ ಡಿಸೈನ್ ಹೊಂದಿರುತ್ತವೆ, ಸೆಲೆಬ್ರೆಟಿ ಡಿಸೈನರ್‌ಗಳದ್ದಾಗಿರುತ್ತವೆ. ಗ್ರ್ಯಾಂಡ್ ಲುಕ್ ನೀಡುವ ಡಿಸೈನ್ಸ್ ಹೊಂದಿರುವ ಇವನ್ನು ತಾರೆಯರು ಧರಿಸಿದ ನಂತರ ಮಾನಿನಿಯರನ್ನು ಸೆಳೆಯುತ್ತವೆ. ಪರಿಣಾಮ, ಮುಂಬರುವ ದೀಪಾವಳಿಗೆ ನಾನಾ ಬ್ರಾಂಡ್ ಹೆಸರಲ್ಲಿ ಲಗ್ಗೆ ಇಡುತ್ತವೆ ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಪರ್ಟ್ ರಜತ್. ಹೀಗೆ ತಾರೆಯರು ಫೆಸ್ಟಿವ್ ಸೀಸನ್ ಡಿಸೈನರ್‌ವೇರ್ಸ್ ಟ್ರೆಂಡಿಯಾಗಲು ಕಾರಣಕರ್ತರಾಗುತ್ತಾರೆ ಎನ್ನುತ್ತಾರೆ.
ನಟಿಯರ ಅತ್ಯಾಕರ್ಷಕ ಡಿಸೈನರ್‌ವೇರ್ಸ್
ಈ ಬಾರಿ ಕರ್ವಾಚೌತ್‌ನಲ್ಲಿ ಬಾಲಿವುಡ್ ನಟಿಯರಾದ ರವೀನಾ ಟಂಡನ್, ಶಿಲ್ಪಾ ಶೆಟ್ಟಿ, ನೀಲಂ, ಸೋನಂ ಕಪೂರ್ ಸೇರಿದಂತೆ ಮತ್ತೊಂದಿಷ್ಟು ನಟಿಯರು ನಟ ಅನಿಲ್ ಕಪೂರ್ ಮನೆಯಲ್ಲಿ ಆಯೋಜಿಸಿದ್ದ ಫೆಸ್ಟಿವ್ ಕಾರ್ಯಕ್ರಮದಲ್ಲಿ ಭಿನ್ನ-ವಿಭಿನ್ನ ಡಿಸೈನರ್‌ವೇರ್ಸ್‌ನಲ್ಲಿ ಕಾಣಿಸಿಕೊಂಡರು. ಅವರೆಲ್ಲರೂ ಧರಿಸಿದ್ದ ರೆಡ್, ಪಿಂಕ್ ಹಾಗೂ ಕ್ರೀಮಿಶ್ ಮತ್ತು ಗೋಲ್ಡ್ ಶೇಡ್‌ನ ಡಿಸೈನರ್‌ವೇರ್‌ಗಳು ಈಗಾಗಲೇ ಫ್ಯಾಷನ್‌ಲೋಕದಲ್ಲಿ ಹಂಗಾಮ ಎಬ್ಬಿಸಿವೆ.
ಟ್ರೆಂಡಿಯಾಗಲಿವೆ ಸ್ಟಾರ್ಸ್ ಡಿಸೈನರ್‌ವೇರ್ಸ್
ಇನ್ನು, ಹಬ್ಬಕ್ಕೆ ಧರಿಸಿದ್ದ ನಟಿ ಕತ್ರೀನಾ ನೆಟ್ಟೆಡ್ ಶೀರ್ ಸೀರೆ, ರೂಪಾಲಿ ಗಂಗೂಲಿಯ ಡಿಸೈನರ್ ಸೀರೆ, ರಕುಲ್ ಪ್ರೀತ್ ಸಿಂಗ್‌ರ ಸಲ್ವಾರ್ ಸೂಟ್ ಸೇರಿದಂತೆ ಹಲವು ಸೆಲೆಬ್ರಿಟಿಗಳ ಡಿಸೈನರ್‌ವೇರ್ಸ್ ಈಗಾಗಲೇ ಆನ್‌ಲೈನ್ ಶಾಪ್‌ಗಳಲ್ಲಿ ಫ್ಯಾಷನ್ ಪ್ರಿಯರನ್ನು ಸೆಳೆದಿವೆ. ತಾರೆಯರು ಧರಿಸಿದ ಲೆಹೆಂಗಾ, ಗಾಗ್ರಾ ಹಾಗೂ ಶರಾರಾ ಸೂಟ್‌ಗಳು ಈ ಜನರೇಷನ್ ಯುವತಿಯರನ್ನು ಆಕರ್ಷಿಸಿವೆ ಎನ್ನುತ್ತಾರೆ ಸ್ಟೈಲಿಸ್ಟ್ ಜಿಯಾನ್.
ಲೋಕಲ್ ಬ್ರಾಂಡ್‌ಗಳಲ್ಲಿ ಬಿಡುಗಡೆಯಾಗುವ ಡಿಸೈನರ್‌ವೇರ್ಸ್
ಪ್ರತಿ ಸಾಲಿನಂತೆ ಈ ಬಾರಿಯು ತಾರೆಯರು ಧರಿಸಿದ ಒಂದೊಂದು ಉಡುಪುಗಳು, ಈಗಾಗಲೇ ಲೋಕಲ್ ಬ್ರಾಂಡ್‌ಗಳಲ್ಲಿ ಸಿದ್ಧಗೊಳ್ಳುತ್ತಿವೆ. ಸದ್ಯದಲ್ಲೆ ಕೈಗೆಟಕುವ ಬೆಲೆಯಲ್ಲಿ ದೊರೆಯಲಿವೆ ಎನ್ನುತ್ತಾರೆ ಫ್ಯಾಷನಿಸ್ಟಾ ರಿಚಾ.
(ಲೇಖಕಿ ಫ್ಯಾಷನ್ ಪತ್ರಕರ್ತೆ)