ಬೆಂಗಳೂರು: ಬೆಂಗಳೂರು ನಗರದ ರಾಜಾಜಿನಗರ ಸಂಚಾರ ಪೊಲೀಸ್ ಠಾಣಾ ಸರಹದ್ದಿನ 10ನೇ ಮುಖ್ಯರಸ್ತೆ, ರಾಮಮಂದಿರ ರಸ್ತೆಯಲ್ಲಿರುವ ಶ್ರೀರಾಮಮಂದಿರ ದೇವಸ್ಥಾನದ ಬಳಿ ಶ್ರೀರಾಮಾಂಜನೇಯ ಪ್ರತಿಮೆಯ ಚರ ಪ್ರತಿಷ್ಠಾಪನಾ ಮಹೋತ್ಸವ ಇರುವುದರಿಂದ ಸುಮಾರು 20000 ಭಕ್ತಾದಿಗಳು ಸೇರುವುದರಿಂದ ಅ.21 ರಿಂದ ಅ.23 ರವರೆಗೆ ಇಂದಿನಿಂದ 3 ದಿನಗಳ ಕಾಲ (Bengaluru News) ರಾಜಾಜಿನಗರದ ಹಳೇ ಪೊಲೀಸ್ ಠಾಣಾ ಸರ್ಕಲ್ ಕಡೆಯಿಂದ ರಾಮಮಂದಿರದ ಕಡೆಗೆ (10ನೇ ಮುಖ್ಯ ರಸ್ತೆ, 3ನೇ ಬ್ಲಾಕ್ ರಾಜಾಜಿನಗರ) ಹೋಗುವ ಹಾಗೂ ರಾಜಾಜಿನಗರ ಎಂಟ್ರೆನ್ಸ್ ಕಡೆಯಿಂದ ರಾಮಮಂದಿರದ ಕಡೆಗೆ ಬರುವ ಎಲ್ಲಾ ವಾಹನಗಳ ಸಂಚಾರವನ್ನು ನಿರ್ಭಂದಿಸಲಾಗಿದ್ದು, ಸಂಚಾರ ಮಾರ್ಪಾಡು ಮಾಡಲಾಗಿದೆ.
ಈ ಸುದ್ದಿಯನ್ನೂ ಓದಿ | Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಅ.23ರಂದು ವಿದ್ಯುತ್ ವ್ಯತ್ಯಯ
ಇ.ಎಸ್.ಐ ಸಿಗ್ನಲ್ ಕಡೆಯಿಂದ ಬರುವ ಬಸ್ಗಳು/ವಾಹನಗಳು ಹಳೇ ಪೊಲೀಸ್ ಠಾಣಾ ಸರ್ಕಲ್ ಬಳಿ ಬಲ ತಿರುವು ಪಡೆದುಕೊಳ್ಳದೇ ಮುಂದೆ ಚಲಿಸಿ ಡಾ.ರಾಜ್ಕುಮಾರ್ ರಸ್ತೆಗೆ ಸೇರುವುದು. ರಾಜಾಜಿನಗರ ಎಂಟ್ರೆನ್ಸ್ ಕಡೆಯಿಂದ ಬರುವ ಬಸ್ಗಳು/ವಾಹನಗಳು ವಾಟಾಳ್ ನಾಗರಾಜ್ ರಸ್ತೆಯಲ್ಲಿ ಬಂದು ರಾಮಮಂದಿರದ ಬಳಿ (10ನೇ ಮುಖ್ಯ ರಸ್ತೆಯಲ್ಲಿ) ಬಲ ತಿರುವು ಪಡೆದುಕೊಳ್ಳದೆ ವಾಟಾಳ್ ನಾಗರಾಜ್ ರಸ್ತೆಯಲ್ಲಿ ಚಲಿಸಿ ಭಾಷ್ಯಂ ಸರ್ಕಲ್ ಕಡೆಗೆ ಚಲಿಸುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.