ದಾವಣಗೆರೆ: ಮದುವೆಯಾಗಬೇಕಾದ ವಯಸ್ಸಿನಲ್ಲಿ ಇಬ್ಬರು ಜೈನ ಸಮುದಾಯದ (Jain Community) ಯುವತಿಯರು ಸಂಸಾರದಲ್ಲಿ ವೈರಾಗ್ಯವನ್ನು ಸಾರಿ, ಸನ್ಯಾಸ ಸ್ವೀಕರಿಸಿದ (Sannyasa Sweekara) ಘಟನೆ ದಾವಣಗೆರೆಯಲ್ಲಿ (Davanagere news) ನಡೆದಿದೆ. ಇವರ ಮೆರವಣಿಗೆಯ ಫೋಟೋಗಳು ಹಾಗೂ ಸುದ್ದಿ ಇದೀಗ ವೈರಲ್ (Viral News) ಆಗಿದೆ.
26 ವರ್ಷದ ಇಬ್ಬರು ಜೈನ್ ಯುವತಿಯರು ಸನ್ಯಾಸತ್ವ ಸ್ವೀಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ವಯಸ್ಸಿಗೇ ಇವರು ಲೌಕಿಕ ಜೀವನ ತೊರೆದು ಅಲೌಕಿಕ ಜೀವನದ ಕಡೆಗೆ ಮನಸ್ಸು ಮಾಡಿದ್ದು, ಅದಕ್ಕೆ ಬೇಕಾದ ಪ್ರಕ್ರಿಯೆಗಳಿಗೆ ಅಣಿಯಾಗಿದ್ದಾರೆ.
ಇಬ್ಬರೂ ಸುಶಿಕ್ಷಿತರು. ಇವರಲ್ಲಿ ಒಬ್ಬರು ದಾವಣಗೆರೆ ಯುವತಿ ಮಾನಸಿ ಕುಮಾರಿ. ಇವರು ಮನಶ್ಶಾಸ್ತ್ರದಲ್ಲಿ ಎಂಎ ಮಾಡಿದ್ದಾರೆ. ಇನ್ನೊಬ್ಬರು ಗೋಕಾಕದ ಮುಮುಕ್ಷ ಭಕ್ತಿ ಕುಮಾರಿ. ಇವರು ಬಿಎ ಎಲ್‌ಎಲ್‌ಬಿ ಮಾಡಿದ್ದಾರೆ.
ಮುಂದಿನ ತಿಂಗಳು 17ರಂದು ಜಾರ್ಖಂಡ್‌ನ ರುಜುಬಾಲಿಕ ಎಂಬಲ್ಲಿ ಸನ್ಯಾಸತ್ವ ಸ್ವೀಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಸನ್ಯಾಸತ್ವ ಸ್ವೀಕರಿಸಲು ಮುಂದಾದ ಯುವತಿಯರಿಗೆ ದಾವಣಗೆರೆಯಲ್ಲಿ ನಿನ್ನೆ ಗೌರವ ಸಲ್ಲಿಕೆ, ಅದ್ಧೂರಿ ಮೆರವಣಿಗೆ ನಡೆಸಲಾಯಿತು. ಇಬ್ಬರ ಕುಟುಂಬಸ್ಥರೂ ಔತಣಕೂಟ ಏರ್ಪಡಿಸಿದ್ದರು. ದಾವಣಗೆರೆಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿದ್ದು, ಸನ್ಯಾಸತ್ವ ಸ್ವೀಕಾರದ ಸಿದ್ಧತೆಯಲ್ಲಿರುವ ಯುವತಿಯರು ಸಂಭ್ರಮದಿಂದ ಇದರಲ್ಲಿ ಭಾಗವಹಿಸಿದರು.
ಇದನ್ನೂ ಓದಿ: Viral Video: ರೀಲ್ಸ್ ಮಾಡಲು ಹೋಗಿ ಜೀವ ಕಳೆದುಕೊಂಡ ಯುವಕ; ವಿಡಿಯೊ ವೈರಲ್