Sunday, 24th November 2024

Guddali Pooje: ಆಲಂಬಗಿರಿ ಕಲ್ಯಾಣಿ ಅಭಿವೃದ್ಧಿಗೆ ಉನ್ನತ ಶಿಕ್ಷಣ ಸಚಿವರಿಂದ ಗುದ್ದಲಿ ಪೂಜೆ

ಸಂಸದ ಕೆ.ಸುಧಾಕರ್‌ಗೆ ಮಾಹಿತಿಯ ಕೊರತೆ ಇದೆ ಬಿಡಿ

ಚಿಂತಾಮಣಿ: ತಾಲ್ಲೂಕಿನ ಇತಿಹಾಸ ಪ್ರಸಿದ್ದ ಆಲಂಬಗಿರಿಯ ಪುರಾತನ ಕಲ್ಯಾಣಿಯ ಅಭಿವೃದ್ಧಿಗೆ 37 ಲಕ್ಷ ವೆಚ್ಚದ ಕಾಮಗಾರಿಗೆ ಉನ್ನತ ಶಿಕ್ಷಣ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಚಿವ ಡಾ!ಎಂ.ಸಿ.ಸುಧಾಕರ್ ಗುದ್ದಲಿ ಪೂಜೆ ಯನ್ನು ನೆರವೇರಿಸಿ ಮಾತನಾಡಿ ಕಲ್ಯಾಣಿಗಳ ಅಭಿವೃದ್ಧಿಯಿಂದಾಗಿ ಅಂತರ್ಜಲದ ಮಟ್ಟ ಏರಿಕೆಯಾಗುತ್ತದೆ. ಅದರ ಮೂಲಕ ಬೋರ್‌ವೆಲ್‌ಗಳಲ್ಲಿ ನೀರು ಮರುಪೂರಣವಾಗುತ್ತದೆಯೆಂದರು.

220 ಹಳ್ಳಿಗೆ ಕುಡಿಯುವ ನೀರಿನ ಫಿಲ್ಟರ್‌ಗಳನ್ನು ಅಳವಡಿಸುವ ಉದ್ದೇಶವನ್ನು ಹೊಂದಿದ್ದು, ಈಗಾಗಲೇ 35 ಕ್ಕೂ ಹೆಚ್ಚು ಹಳ್ಳಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಮಾಡಿಸಿರುವುದಾಗಿ ತಿಳಿಸಿದರು. ಕೇವಲ ಸರ್ಕಾರದಿಂದ ಮಾತ್ರವೇ ಎಲ್ಲಾ ಕಾರ್ಯಗಳನ್ನು ಅನುಷ್ಠಾನಕ್ಕೆ ತರಲು ಸಾಧ್ಯವಿಲ್ಲ,ಇದರೊಂದಿಗೆ ವಿವಿಧ ವರ್ಗಗಳ ಸಂಘ ಸಂಸ್ಥೆಗಳ ಸಾರ್ವಜನಿಕ ಸಹಕಾರದೊಂದಿಗೆ ಜಿಲ್ಲಾ ಪಂಚಾಯತಿ,ತಾಲೂಕು ಪಂಚಾಯತಿ,ಗ್ರಾಮ ಪಂಚಾಯಿತಿ, ಅನುದಾನಗಳೊಂದಿಗೆ ಅಭಿವೃದ್ಧಿಗೆ ಪಣತೊಟ್ಟಿರುವುದಾಗಿ ನುಡಿದರು.

೨ ಕೋಟಿ ಶಾಸಕರ ಅನುದಾನದಲ್ಲಿ ವಿಕಲಚೇತನರಿಗೆ 200 ತ್ರಿಚಕ್ರವಾಹನಗಳನ್ನು ನೀಡುವುದು ಹಾಗೂ ೨೦೦ ಕಿಮೀ ಉದ್ದದ ಗ್ರಾಮಾಂತರ ರಸ್ತೆಗಳನ್ನು ಮಾಡಿಸುವ ಭರವಸೆಯನ್ನು ನೀಡಿದರು.

ಇನ್ನೂ ಭಾಷಣದ ವೇಳೆ ಸಂಸದ ಕೆ.ಸುಧಾಕರ್ ವಿರುದ್ಧ ಕುಟುಕಿದ ಅವರು ಸಂಸದ ಕೆ.ಸುಧಾಕರ್ ಗೆ ಮಾಹಿತಿಯ ಕೊರತೆ ಇದೆ ಬಿಡಿ 3-4 ವರ್ಷ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದು ಕೆಲವು ಯೋಜನೆಗಳನ್ನು ನಾನೇ ಮಂಜೂರು ಮಾಡಿಸಿಕೊಂಡು ಬಂದಿದ್ದಾಗಿ ಹೇಳುತ್ತಾರಾದರೂ ಸಂಸದ ಸುಧಾಕರ್ ಅವರಿಗೆ ಮಾಹಿತಿ ಕೊರತೆಯಿದ್ದು ಇಂಟರ್‌ನೆಟ್‌ನಲ್ಲಿ ಹುಡುಕಿದರೆ ಎಲ್ಲಾ ಮಾಹಿತಿಯು ಲಭಿಸುತ್ತದೆ ಎಂಬುದನ್ನು ಅವರ ಮರೆತ್ತಿದ್ದಾರೆಂದು ಹೇಳಿದ ಅವರು 50 ಹಾಸಿಗೆ ಸಾಮರ್ಥ್ಯದ ಐಸಿಯು ಘಟಕವನ್ನು ಚಿಂತಾಮಣಿ ತೆಗೆದುಕೊಂಡು ಹೋಗಿದ್ದಾರೆಂದು ಆರೋಪಿಸುವುದರಲ್ಲಿ ಹುರಳಿಲ್ಲವೆಂದ ಡಾ.ಎಂ.ಸಿ.ಸುಧಾಕರ್ ಪೇರೆಸಂದ್ರದಲ್ಲಿ ಯಾವ ಪುರುಷಾರ್ಥಕ್ಕೆ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಿದ್ದೀರೆಂದು ಪ್ರಶ್ನಿಸಿದರು.

ಚಿಂತಾಮಣಿಯ ಸಾರ್ವಜನಿಕ ಆಸ್ಪತ್ರೆಗೆ 8 ಕೋಟಿ ಹಾಗೂ ಚಿಕ್ಕಬಳ್ಳಾಪುರದ ಸಾರ್ವಜನಿಕ ಆಸ್ಪತ್ರೆಗೆ 20 ಕೋಟಿ ಯನ್ನು -ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬಳಿ ಕೇಳಿದ್ದು ಅದನ್ನು ನೀಡುವ ಭರವಸೆಯನ್ನು ನೀಡಿದ್ದಾ ರೆಂದರು. ಚಿಕ್ಕಬಳ್ಳಾಪುರದ – ಆಸ್ಪತ್ರೆಯ 3ನೇ ಮತ್ತು 4ನೇ ಅಂತಸ್ಥಿಗೆ 20 ಕೋಟಿ ಕೇಳಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಪಂಗಡ ಕಸಬಾ ಹಾಗೂ ನಗರಾಧ್ಯಕ್ಷರಾದ ಮಾಡಿಕೆರೆ ಮಣಿಕಂಠ, ಗ್ರಾಮ ಪಂಚಾಯತಿ ಅಧ್ಯಕ್ಷ ಶಮಿಮ್ ತಾಜ್, ಉಪಾಧ್ಯಕ್ಷ ವೆಂಕಟರಾಮರೆಡ್ಡಿ, ಗೋವಿ0ಪ್ಪ, ಸಮಿಉಲ್ಲಾ, ರಾಮಣ್ಣ, ಶ್ರೀನಿವಾಸ್, ಕುರಟಹಳ್ಳಿ ಕೃಷ್ಣಮೂರ್ತಿ, ಅಂಬರೀಶ್, ಚ0ದ್ರಪ್ಪ, ಸೇರಿದಂತೆ ಮತ್ತಿತರರು ಇದ್ದರು.