Tuesday, 19th November 2024

Hassan Nasrallah: ಹೆಜ್ಬುಲ್ಲಾ ಉಗ್ರ ನಸ್ರಲ್ಲಾನ ಬಂಕರ್‌ನಲ್ಲಿ ಭಾರೀ ಚಿನ್ನ, ನಗದು ಪತ್ತೆ..ಇದರ ಮೌಲ್ಯ ಕೇಳಿದ್ರೆ ಶಾಕ್‌ ಆಗೋದು ಗ್ಯಾರಂಟಿ!

Hassan Nasrallah

ಟೆಲ್‌ ಅವಿವ್‌: ಕಳೆದ ತಿಂಗಳು ಇಸ್ರೇಲಿ ಸೇನೆ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ ಹತನಾದ ಹೆಜ್ಬುಲ್ಲಾ(Hezbollah) ಮುಖ್ಯಸ್ಥ ಹಸನ್‌ ನಸ್ರಲ್ಲಾ(Hassan Nasrallah) ಬಂಕರ್‌ನಲ್ಲಿ ಸುಮಾರು 500 ಮಿಲಿಯನ್‌ ಡಾಲರ್‌(4203.88ಕೋಟಿ ರೂ.) ಮೌಲ್ಯದ ಚಿನ್ನ ಮತ್ತು ನಗದು ಪತ್ತೆಯಾಗಿದೆ ಎಂದು ಇಸ್ರೇಲ್‌ ಹೇಳಿದೆ.

ಇಸ್ರೇಲ್ ಡಿಫೆನ್ಸ್ ಫೋರ್ಸ್ (IDF) ವಕ್ತಾರ, ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಈ ಬಗ್ಗೆ ವಿಡಿಯೋ ಸಂದೇಶ ಬಿಡುಗಡೆ ಮಾಡಿದ್ದು, ಇಸ್ರೇಲ್‌ನ ಬೈರುತ್‌ನಲ್ಲಿರುವ ಆಸ್ಪತ್ರೆಯ ಅಡಿಯಲ್ಲಿ ಹಿಂದೆ ಹಸನ್ ನಸ್ರಲ್ಲಾ ನಡೆಸುತ್ತಿದ್ದ ರಹಸ್ಯ ಬಂಕರ್‌ನಲ್ಲಿ ಹೆಜ್ಬುಲ್ಲಾ 4203.88ಕೋಟಿ ರೂ. ಮೌಲ್ಯದ ಚಿನ್ನ ಮತ್ತು ಹಣವನ್ನು ಬಚ್ಚಿಟ್ಟಿದೆ. ಬಂಕರ್ ಅನ್ನು ಉದ್ದೇಶಪೂರ್ವಕವಾಗಿ ಆಸ್ಪತ್ರೆಯ ಅಡಿಯಲ್ಲಿ ಇರಿಸಲಾಗಿದೆ ಮತ್ತು ಇದು ಅರ್ಧ ಶತಕೋಟಿ ಡಾಲರ್‌ಗಿಂತ ಹೆಚ್ಚು ನಗದು ಮತ್ತು ಚಿನ್ನವನ್ನು ಹೊಂದಿದೆ. ಆ ಹಣವನ್ನು ಲೆಬನಾನ್‌ಗೆ ಪುನರ್ವಸತಿ ಮಾಡಲು ಬಳಸಬಹುದಿತ್ತು ಎಂದು ಅವರು ಹೇಳಿದರು.

ಲೆಬನಾನಿನ ಅಧಿಕಾರಿಗಳು ಹೆಜ್ಬೊಲ್ಲಾ ವಿರುದ್ಧ ಕ್ರಮ ಕೈಗೊಳ್ಳಬೇಕು ಒತ್ತಾಯಿಸಿದರು. ನಾನು ಲೆಬನಾನಿನ ಸರ್ಕಾರ, ಲೆಬನಾನಿನ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದೇನೆ. ಹೆಜ್ಬುಲ್ಲಾಗಳ ಹಣವನ್ನು ಭಯೋತ್ಪಾದನೆಗಾಗಿ ಮತ್ತು ಇಸ್ರೇಲ್ ದಾಳಿಗೆ ಬಳಸಲು ಅನುಮತಿಸಬೇಡಿ ಎಂದು ಅವರು ಹೇಳಿದರು. ಹಮಾಸ್ ಜೊತೆಗೆ ಹೆಜ್ಬೊಲ್ಲಾ, ಆಸ್ಪತ್ರೆಗಳು, ಶಾಲೆಗಳು ಮತ್ತು ಇತರ ಸೂಕ್ಷ್ಮ ತಾಣಗಳನ್ನು ಶಸ್ತ್ರಾಸ್ತ್ರಗಳನ್ನು ಮರೆಮಾಡಲು ಮತ್ತು ಹೋರಾಟಗಾರರನ್ನು ಆಶ್ರಯಿಸಲು ಬಳಸುತ್ತಿದೆ ಎಂದು ಆರೋಪಿಸಿದ್ದಾರೆ.

ನಾಗರಿಕರಿಗೆ ಸೇವೆಗಳನ್ನು ಒದಗಿಸುವ ಮತ್ತು ಅದರ ಕಾರ್ಯಕರ್ತರಿಗೆ ಪಾವತಿಸುವ ಹೆಜ್ಬೊಲ್ಲಾದ ಆರ್ಥಿಕ ಅಂಗ ಸಂಸ್ಥೆ ಅಲ್-ಕರ್ದ್ ಅಲ್-ಹಸನ್, ಹೆಜ್ಬೊಲ್ಲಾದ ಪಾತ್ರವನ್ನು ಒಳಗೊಂಡಂತೆ ಇರಾನ್ ಹೆಜ್ಬೊಲ್ಲಾದ ಕಾರ್ಯಾಚರಣೆಗಳಿಗೆ ಹೇಗೆ ಹಣಕಾಸು ಒದಗಿಸುತ್ತದೆ ಎಂಬುದನ್ನು ಹಗರಿ ವಿಡಿಯೋದಲ್ಲಿ ವಿವರಿಸಿದ್ದಾರೆ. IDF ಪ್ರಕಾರ, ಬಂಕರ್ ಹಾಸಿಗೆಗಳು ಮತ್ತು ದೀರ್ಘಕಾಲ ಉಳಿಯಲು ಕೊಠಡಿಗಳನ್ನು ಹೊಂದಿದೆ, ಕಾರ್ಯಾಚರಣೆಗಳಿಗೆ ಕಮಾಂಡ್ ಸೆಂಟರ್ ಆಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಆರೋಪಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Hassan Nasrallah: ನಸ್ರಲ್ಲಾ ಸಾವಿಗೆ ಸಿರಿಯಾದಲ್ಲಿ ಸಂಭ್ರಮಾಚರಣೆ; ದೂರದ ಜಮ್ಮು-ಕಾಶ್ಮೀರದಲ್ಲೇಕೆ ಶೋಕಾಚರಣೆ?