ಪುಣೆ: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಬೌನ್ಸಿ ಪಿಚ್ ನಿರ್ಮಿಸಿ ಸೋಲು ಕಂಡಿದ್ದ ಭಾರತ ಪುಣೆಯಲ್ಲಿ(pune test match) ನಡೆಯುವ 2ನೇ ಪಂದ್ಯದಲ್ಲಿ(IND vs NZ 2nd Test) ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಆಡಲಿದೆ ಎಂದು ವರದಿಯಾಗಿದೆ. ಇತ್ತಂಡಗಳ ನಡುವಿನ ಟೆಸ್ಟ್ ಪಂದ್ಯ ಅಕ್ಟೋಬರ್ 24 ರಿಂದ ಆರಂಭವಾಗಲಿದೆ.
ವರ್ಷಾಂತ್ಯದಲ್ಲಿ ನಡೆಯುವ ಆಸ್ಟ್ರೆಲಿಯಾ ಪ್ರವಾಸಕ್ಕೆ ಪೂರ್ವಭಾವಿಯಾಗಿ ಭಾರತ ತಂಡ ವೇಗದ ಬೌಲಿಂಗ್ ಸ್ನೇಹಿ ಪಿಚ್ಗಳಲ್ಲಿ ಆಡಲು ಬಯಸಿತ್ತು. ಬಾಂಗ್ಲಾದೇಶ ವಿರುದ್ಧ ಇದು ಕ್ಲಿಕ್ ಆದರೂ ಕಿವೀಸ್ ವಿರುದ್ಧ ವಿಫಲವಾಯಿತು. ಮೊದಲ ಪಂದ್ಯದ ಸೋಲಿನಿಂದಾಗಿ ಸರಣಿ ಸೋಲಿನ ಭೀತಿಯಲ್ಲಿರುವ ಭಾರತ ಉಳಿದೆರಡು ಪಂದ್ಯಗಳಲ್ಲಿ ಗೆದ್ದು ಸರಣಿಯನ್ನು ವಶಪಡಿಸಿಕೊಳ್ಳುವ ಒತ್ತಡದಲ್ಲಿದೆ. ಇದೇ ಕಾರಣಕ್ಕೆ ಸ್ಪಿನ್ ಪಿಚ್ ಮೊರೆ ಹೋದಂತಿದೆ. ಇದೇ ಕಾರಣಕ್ಕೆ ಪಂದ್ಯಕ್ಕೂ ಮುನ್ನ ಚೆನ್ನೈಯ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಅವರನ್ನು ದಿಢೀರ್ ಆಗಿ ತಂಡಕ್ಕೆ ಸೇರ್ಪಡೆಗೊಳಿಸಿದ್ದು.
ಇದನ್ನೂ ಓದಿ IND vs NZ 2nd Test: ದ್ವಿತೀಯ ಟೆಸ್ಟ್‌ಗೂ ಕೇನ್ ವಿಲಿಯಮ್ಸನ್ ಅಲಭ್ಯ
ಕಪ್ಪು ಮಣ್ಣಿನಿಂದ ತಯಾರಿಸಲಾದ ಪಿಚ್ ಇದಾಗಿರುವ ಕಾರಣ ಪಿಚ್ ನಿಧಾನಗತಿಯಲ್ಲಿ ವರ್ತಿಸುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಬೌನ್ಸಿ ಪಿಚ್ ಮಾಡಿದರೂ ಕೂಡ ಮೂವರು ಸ್ಪಿನ್ನರ್‌ಗಳನ್ನು ಆಡಿಸಲಾಗಿತ್ತು. ಇದೇ ಕಾರಣದಿಂದ ಭಾರತ ಎಡವಿತ್ತು. ಆದರೆ ಪುಣೆಯಲ್ಲಿ ಸ್ಪಿನ್ ಟ್ರ್ಯಾಕ್ ಆದ ಕಾರಣ ಮತ್ತೆ ಮೂವರು ಸ್ಪಿನ್ನರ್‌ಗಳು ಕಾಣಿಸಿಕೊಳ್ಳುವುದು ಖಚಿತ.
ಪುಣೆಯಲ್ಲಿ ಭಾರತ ಈವರೆಗೆ ಕೇವಲ 2 ಟೆಸ್ಟ್ ಪಂದ್ಯಗಳನ್ನು ಆಡಿದ್ದು ತಲಾ ಒಂದು ಸೋಲು ಮತ್ತು ಗೆಲುವು ಕಂಡಿದೆ. 2017 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 333 ರನ್‌ಗಳ ಹೀನಾಯ ಸೋಲನ್ನು ಅನುಭವಿಸಿದ್ದ ಭಾರತ, 2019 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇನ್ನಿಂಗ್ಸ್ ಗೆಲುವು ಸಾಧಿಸಿತ್ತು.
ಆಯ್ಕೆ ಗೊಂದಲ
ಅನುಭವಿ ಆರ್.ಅಶ್ವಿನ್ ಮತ್ತು ರವೀಂದ್ರ ಜಡೇಜಾ ಜತೆ ಮೂರನೇ ಸ್ಪಿನ್ನರ್ ಸ್ಥಾನಕ್ಕೆ ಮೂರು ಮಂದಿಯಾದ ಕುಲ್‌ದೀಪ್, ಅಕ್ಷರ್ ಮತ್ತು ವಾಷಿಂಗ್ಟನ್ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಬ್ಯಾಟಿಂಗ್‌ನಲ್ಲಿ ನರೆವಾಗಬಲ್ಲರು ಎಂಬ ಕಾರಣಕ್ಕೆ ವಾಷಿಂಗ್ಟನ್ ಸುಂದರ್ ಅಥವಾ ಅಕ್ಷರ್‌ಗೆ ಸ್ಥಾನ ಸಿಗಬಹುದು. ಕುಲ್‌ದೀಪ್‌ಗೆ ಬೆಂಗಳೂರು ಟೆಸ್ಟ್‌ನಲ್ಲಿ ಅವಕಾಶ ನೀಡಿದ್ದರೂ ಕೂಡ ನಿರೀಕಗಷಿತ ಪ್ರದರ್ಶನ ಕಂಡು ಬಂದಿರಲಿಲ್ಲ.
ತಂಡಗಳು
ಭಾರತ: ರೋಹಿತ್ ಶರ್ಮ (ನಾಯಕ), ಜಸ್‌ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್. ಸಿರಾಜ್, ಆಕಾಶ್ ದೀಪ್, ವಾಷಿಂಗ್ಟನ್ ಸುಂದರ್.
ನ್ಯೂಜಿಲೆಂಡ್: ಟಾಮ್ ಲ್ಯಾಥಮ್ (ನಾಯಕ), ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್),ಡೆವೊನ್ ಕಾನ್ವೆ, ಡೆರಿಲ್ ಮಿಚೆಲ್,ವಿಲ್ ಓರೊರ್ಕ್,ಅಜಾಜ್ ಪಟೇಲ್,ಗ್ಲೆನ್ ಪಿಲಿಪ್ಸ್,ರಚಿನ್ ರವೀಂದ್ರ,ಮಿಚೆಲ್ ಸ್ಯಾಂಟ್ನರ್,ಬೆನ್ ಸೀರ್ಸ್,ಟಿಮ್ ಸೌಥಿ,ವಿಲ್ ಯಂಗ್, ಐಶ್ ಸೋಧಿ, ಮಾರ್ಕ್ ಚಾಪ್‌ಮನ್.