ಚಿಕ್ಕನಾಯಕನಹಳ್ಳಿ : ಜೆಡಿಎಸ್ ಮುಖಂಡ ಲೋಕೇಶ್ ಹಾಗು ರೈತರ ಹೋರಾಟದ ಫಲವಾಗಿ ಮಲ್ಲಿಗೆರೆ-ತಿಪಟೂರು-ದುದ್ದ-ಹಾಸನ ಮಾರ್ಗವಾಗಿ ಕುಶಾಲನಗರಕ್ಕೆ ಬಸ್ ಸಂಚಾರ ಆರಂಭವಾಗಿದ್ದು ಮಲ್ಲಿಗೆರೆ ಗ್ರಾಮದ ಸ್ಥಳೀಯ ಮುಖಂಡರು, ರೈತರು ಮತ್ತು ಗ್ರಾಮಸ್ಥರು ಬಸ್‌ಗೆ ಹಾಗು ಶ್ರೀ ಕರಿಯಮ್ಮ ದೇವಿಗೆ ಪೂಜೆ ಸಲ್ಲಿಸಿ ಸ್ವಾಗತಿಸಿದರು.
ತಾಲ್ಲೂಕಿನ ಮಲ್ಲಿಗೆರೆ, ಕಾಮಾಲಾಪುರ ಸುತ್ತಲಿನ ಗ್ರಾಮಗಳಿಗೆ ಈ ಬಸ್ ಸಂಚಾರ ಸಂಪರ್ಕ ಕೊಂಡಿಯಾಗಿದೆ. ತಿಪಟೂರು, ಹಾಸನ ಕೇಂದ್ರಕ್ಕೆ ವಿದ್ಯಾರ್ಥಿಗಳು, ಸರಕಾರಿ, ಖಾಸಗಿ ಸಂಸ್ಥೆಗಳ ನೌಕರರು, ಕಾಯಿಲೆ ಪೀಡಿತರು, ವೃದ್ದರು ಪ್ರಯಾಣಿಸಲು ಸೂಕ್ತ ಸಾರಿಗೆ ಸೌಲಭ್ಯ ಇರಲಿಲ್ಲ. ಈ ಬಗ್ಗೆ ಜೆಡಿಎಸ್ ಯುವ ಮುಖಂಡ ಲೋಕೇಶ್ ಹಾಗು ರೈತರು ಶಾಸಕ ಸಿ.ಬಿ.ಸುರೇಶಬಾಬು ಅವರಿಗೆ ಮನವಿ ಸಲ್ಲಿಸಿ ಗಮನ ಸೆಳೆದಿದ್ದರು. ಅದಕ್ಕೆ ಶಾಸಕರು ಪತ್ರ ಬರೆದು ಬಸ್ ಸಂಚಾರ ಆರಂಭಿಸಲು ಘಟಕ ವ್ಯವಸ್ಥಾಪಕರಿಗೆ ಸೂಚಿಸಿದ್ದರು.
ಮನವಿಗೆ ಮಣಿದು ಘಟಕ ವ್ಯವಸ್ಥಾಪಕರು ತಿಪಟೂರು ಮಾರ್ಗವಾಗಿ ಕುಶಾಲ ನಗರಕ್ಕೆ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದಾರೆ. ಮಲ್ಲಿಗೆರೆ ಸುತ್ತಮುತ್ತಲಿನ ಗ್ರಾಮಸ್ಥರ ಬಹುದಿನಗಳ ಬೇಡಿಕೆ ಕೊನೆಗೂ ಈಡೇರಿದೆ. ಅರುಣ್‌ಕುಮಾರ್, ಉಮಾ ಮಹೇಶ್, ಸುರೇಶ್, ಪೂಜಾರಿ ನಟರಾಜ್ ಉಮೇಶ್ ಹಾಗು ಗ್ರಾಮಸ್ಥರಿದ್ದರು.
ಇದನ್ನೂ ಓದಿ: DL Track: ಚಾಲನಾ ಪರೀಕ್ಷೆಗೆ ಇಲ್ಲ ಡಿಎಲ್ ಟ್ರ್ಯಾಕ್ !