Sunday, 24th November 2024

Kidney Stone: ಚಳಿಗಾಲದಲ್ಲಿ ಕಡಿಮೆ ನೀರು ಕುಡಿಯುವುದರಿಂದ ಈ ರೋಗ ಕಾಡಬಹುದು ಹುಷಾರು!

Kidney Stone

ಕಿಡ್ನಿಯಲ್ಲಿ ಕಲ್ಲುಗಳು(Kidney Stone) ರಚನೆಯಾಗುವುದನ್ನು  ತಡೆಯಲು ಸಾಕಷ್ಟು ನೀರನ್ನು ಕುಡಿಯಬೇಕಾಗುತ್ತದೆ. ಆದರೆ ಬೇಸಿಗೆ ಕಾಲದಲ್ಲಿ ಬಾಯಾರಿಕೆ ಹೆಚ್ಚಾಗಿ ಆಗುವುದರಿಂದ ಎಲ್ಲರೂ ಸಾಕಷ್ಟು ನೀರನ್ನು ಕುಡಿಯುತ್ತಾರೆ. ಆದರೆ ಚಳಿಗಾಲದಲ್ಲಿ ವಾತಾವರಣ ತುಂಬಾ ತಂಪಾಗಿರುವುದರಿಂದ ಬಾಯಾರಿಕೆ ಆಗುವುದಿಲ್ಲ. ಹಾಗಾಗಿ ಅನೇಕರು ಕಡಿಮೆ ನೀರನ್ನು ಕುಡಿಯುತ್ತಾರೆ. ಆದರೆ ಚಳಿಗಾಲದಲ್ಲಿ ಕಡಿಮೆ ನೀರು ಕುಡಿಯುವುದರಿಂದ ಕಿಡ್ನಿ ಸ್ಟೋನ್ ಉಂಟಾಗಬಹುದೇ? ಎಂಬ ಭಯ ಹಲವರಲ್ಲಿದೆ. ಇದಕ್ಕೆ  ಉತ್ತರ ಇಲ್ಲಿದೆ ನೋಡಿ.

Kidney Stone

ಚಳಿಗಾಲದಲ್ಲಿ ಕಡಿಮೆ ನೀರನ್ನು ಕುಡಿಯುವುದರಿಂದ  ಕಿಡ್ನಿಯಲ್ಲಿ ಕಲ್ಲುಗಳ ಸಮಸ್ಯೆ ಹೆಚ್ಚಾಗಬಹುದು  ಎಂದು ಇತ್ತೀಚಿನ ಅಧ್ಯಯನಗಳು ತೋರಿಸಿವೆ. ತಜ್ಞರು ತಿಳಿಸಿದ ಪ್ರಕಾರ, ದೇಹಕ್ಕೆ ಸಾಕಷ್ಟು ನೀರು ಸಿಗದಿದ್ದಾಗ ಮೂತ್ರ ವಿಸರ್ಜನೆ ಸರಿಯಾಗಿ ಆಗುವುದಿಲ್ಲ. ಇದರಿಂದ ದೇಹದಲ್ಲಿರುವ ಅನಗತ್ಯ ವಸ್ತುಗಳು ಮತ್ತು ಖನಿಜಗಳು ಹೊರಗೆ ಹೋಗದೆ ಅಲ್ಲೇ ಸಂಗ್ರಹವಾಗುತ್ತವೆ. ಇದು ಕಿಡ್ನಿಯಲ್ಲಿ  ಕಲ್ಲುಗಳ ರಚನೆಗೆ ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ.

ಸಂಶೋಧನೆಯೊಂದರ ಪ್ರಕಾರ,  ಚಳಿಗಾಲದಲ್ಲಿ ಪುರುಷರು ಮತ್ತು ಮಹಿಳೆಯರ ಮೂತ್ರದಲ್ಲಿ ಕ್ಯಾಲ್ಸಿಯಂ ಮಟ್ಟವು ಗಮನಾರ್ಹವಾಗಿ ಹೆಚ್ಚಾಗಿರುತ್ತದೆ. ಇದು ಕಲ್ಲು ರಚನೆಯ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಬಹಿರಂಗಪಡಿಸಿದೆ. ಹಾಗಾಗಿ ಚಳಿಗಾಲದಲ್ಲಿ ಸಾಕಷ್ಟು ನೀರನ್ನು ಕುಡಿಯಬೇಕು ಎಂಬುದಾಗಿ ತಿಳಿಸಿದೆ.

Kidney Stone

ಕಿಡ್ನಿಯಲ್ಲಿ  ಕಲ್ಲುಗಳ ರಚನೆಯನ್ನು ತಡೆಗಟ್ಟುವುದು ಹೇಗೆ?

ವೈದ್ಯರು ಪ್ರತಿದಿನ ಕನಿಷ್ಠ 2 ಲೀಟರ್ (8 ಗ್ಲಾಸ್) ನೀರನ್ನು ಕುಡಿಯಲು ಶಿಫಾರಸು ಮಾಡುತ್ತಾರೆ, ಆದರೆ ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆ ಇರುವವರು ದಿನಕ್ಕೆ 3 ಲೀಟರ್ (12 ಕಪ್) ನೀರನ್ನು ಕುಡಿಯಬೇಕೆಂಬುದಾಗಿ ಹೇಳಿದ್ದಾರೆ. ಈ ಸರಳ ಅಭ್ಯಾಸವು ಕಿಡ್ನಿಯಲ್ಲಿ ಕಲ್ಲುಗಳು ರಚನೆಯಾಗುವುದನ್ನು ತಡೆಯಬಹುದು ಎಂಬುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಳಗ್ಗೆ ಅರಿಶಿನ ನೀರನ್ನು ಕುಡಿಯುವುದರಿಂದ ಎಷ್ಟೊಂದು ಪ್ರಯೋಜನ!

ಹಾಗೇ ಕಿಡ್ನಿಯಲ್ಲಿ ಕಲ್ಲುಗಳ ಸಮಸ್ಯೆ ಇರುವವರು ನೀರಿನ ಜೊತೆಗೆ ಕೆಲವೊಂದು ಆಹಾರಗಳ ಸೇವನೆಯ ಬಗ್ಗೆ ತಿಳಿದುಕೊಳ್ಳಬೇಕು. ಈ ಸಮಸ್ಯೆ ಇರುವವರು  ಕ್ಯಾಲ್ಸಿಯಂ ಸಮೃದ್ಧ ಆಹಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.  ಏಕೆಂದರೆ ಕ್ಯಾಲ್ಸಿಯಂ ಆಕ್ಸಲೇಟ್ ಕಲ್ಲುಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಹೆಚ್ಚುವರಿಯಾಗಿ, ಮೆಗ್ನೀಸಿಯಮ್ ಮತ್ತು ಸಿಟ್ರೇಟ್ ಆಹಾರವನ್ನು ತಿನ್ನುವುದರಿಂದ  ಕಲ್ಲು ರಚನೆಯನ್ನು ತಡೆಯಬಹುದು ಎಂಬುದಾಗಿ  ವೈದ್ಯರು ತಿಳಿಸಿದ್ದಾರೆ.