ನವದೆಹಲಿ: ಮಹಾರಾಷ್ಟ್ರ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆ(Baba Siddiqui) ಬಳಿಕ ದೇಶಾದ್ಯಂತ ಭಾರೀ ಸುದ್ದಿಯಲ್ಲಿರುವ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್(Lawrence Bishnoi)ನನ್ನು ಎನ್ಕೌಂಟರ್ ಮಾಡುವಂತೆ ಕರಣಿ ಸೇನೆ ರಾಷ್ಟ್ರೀಯ ಅಧ್ಯಕ್ಷ ಒತ್ತಾಯಿಸಿದ್ದು, ಅದಕ್ಕಾಗಿ ಪೊಲೀಸರಿಗೆ 1,11,11,111 ರೂ. ಬಹಮಾನ ಘೋಷಿಸಿದೆ. ಈ ಬಗ್ಗೆ ಕರಣಿ ಸೇನಾ(Karni Sena) ಅಧ್ಯಕ್ಷ ಡಾ. ರಾಜ್ ಶೆಖಾವತ್(Dr Raj Shekhawat) ಇನ್ಸ್ಟಾಗ್ರಾಂನಲ್ಲಿ ವಿಡಿಯೋ ರಿಲೀಸ್ ಮಾಡಿದ್ದು, ಭಾರೀ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಲಾರೆನ್ಸ್ ಬಿಷ್ಣೋಯ್ ದೇಶಕ್ಕೆ ಬಹಳ ಅಪಾಯಕಾರಿ ಎಂದಿರುವ ಶೇಖಾವತ್ ಬಿಜೆಪಿ ಮತ್ತು ಗುಜರಾತ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಲಾರೆನ್ಸ್ ಬಿಷ್ಣೋಯ್ ಇಡೀ ದೇಶಕ್ಕೆ ಅಪಾಯಕಾರಿ ವ್ಯಕ್ತಿ. ಆತನನ್ನು ಎನ್ಕೌಂಟರ್ನಲ್ಲಿ ಹತ್ಯೆ ಮಾಡಿ. ಆತನನ್ನು ಹತ್ಯೆಗೈದ ಯಾವುದೇ ಪೊಲೀಸ್ ಅಧಿಕಾರಿಗೆ 1,11,11,111 ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
“ನಮ್ಮ ಅಮೂಲ್ಯ ರತ್ನ ಮತ್ತು ಪರಂಪರೆಯ ಸುಖದೇವ್ ಸಿಂಗ್ ಗೊಗಮೆಡಿಯ ಹಂತಕ ಲಾರೆನ್ಸ್ ಬಿಷ್ಣೋಯ್ ಅವರನ್ನು ಎನ್ಕೌಂಟರ್ ಮಾಡಿದ ಪೊಲೀಸರಿಗೆ ಕ್ಷತ್ರಿಯ ಕರ್ಣಿ ಸೇನೆಯು 1,11,11,111. ಮತ್ತು ಆ ವೀರ ಪೋಲೀಸರ ಕುಟುಂಬದ ಭದ್ರತೆ ಮತ್ತು ಸಂಪೂರ್ಣ ವ್ಯವಸ್ಥೆಗಳ ಜವಾಬ್ದಾರಿಯೂ ನಮ್ಮದಾಗಿರುತ್ತದೆ ಎಂದು ಶೇಖಾವತ್ ಭರವಸೆ ನೀಡಿದ್ದಾರೆ.
ಕರ್ಣಿ ಸೇನೆಯ ಮಾಜಿ ಮುಖ್ಯಸ್ಥ ಬಿಷ್ಣೋಯ್ ಗ್ಯಾಂಗ್ನಿಂದ ಹತ್ಯೆ
ಕರ್ಣಿ ಸೇನೆಯ ಮಾಜಿ ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಮೆಡಿ ಅವರನ್ನು ಡಿಸೆಂಬರ್ 5, 2023 ರಂದು ಕೆಲವು ಅಪರಿಚಿತ ದಾಳಿಕೋರರು ಗುಂಡಿಕ್ಕಿ ಕೊಂದಿದ್ದರು. ಗುಂಡಿನ ದಾಳಿಯ ನಂತರ, ಶೂಟರ್ಗಳು ಸ್ಥಳದಿಂದ ಪರಾರಿಯಾಗಿದ್ದರು. ಗೊಗಮೆಡಿ ಹತ್ಯೆಯ ಕೆಲವು ಗಂಟೆಗಳ ನಂತರ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಅದರ ಹೊಣೆ ಹೊತ್ತುಕೊಂಡಿತ್ತು. ಗೋಗಮೇಡಿ ಹತ್ಯೆ ಪ್ರಕರಣದಲ್ಲಿ ಈ ವರ್ಷ ಜೂನ್ 5 ರಂದು ವಿಶೇಷ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿದ್ದು, ಅದರಲ್ಲಿ ರೋಹಿತ್ ಗೋಡಾರಾ ಮಾಸ್ಟರ್ ಮೈಂಡ್ ಎಂದು ಬಣ್ಣಿಸಲಾಗಿತ್ತು. ಇದಲ್ಲದೆ, ಗೋಲ್ಡಿ ಬ್ರಾರ್ ಮತ್ತು ವೀರೇಂದ್ರ ಚರಣ್ ಸೇರಿದಂತೆ ಇತರರು ಕೊಲೆಗೆ ಸಂಚು ರೂಪಿಸಿದ ಆರೋಪ ಹೊತ್ತಿದ್ದಾರೆ. ಇವರೆಲ್ಲರೂ ಬಿಷ್ಣೋಯ್ ಗ್ಯಾಂಗ್ ಜತೆ ನಂಟು ಹೊಂದಿರುವ ಆರೋಪ ಇದೆ.
ಈ ಸುದ್ದಿಯನ್ನೂ ಓದಿ: Rahul Gandhi: ಲಾರೆನ್ಸ್ ಬಿಷ್ಣೋಯ್ ಮುಂದಿನ ಟಾರ್ಗೆಟ್ ರಾಹುಲ್ ಗಾಂಧಿ!