ಮೆಲ್ಬರ್ನ್: ನಿರೀಕ್ಷೆಯಂತೆ 2026ರಲ್ಲಿ ಗ್ಲಾಸ್ಗೋದಲ್ಲಿ(Glasgow Commonwealth Games) ನಡೆಯಲಿರುವ ಕಾಮನ್ವೆಲ್ತ್ ಗೇಮ್ಸ್‌ನಿಂದ(Commonwealth 2026) ಹಾಕಿ, ಕ್ರಿಕೆಟ್, ಶೂಟಿಂಗ್, ಬ್ಯಾಡ್ಮಿಂಟನ್ ಸೇರಿದಂತೆ 10 ಕ್ರೀಡೆಗಳನ್ನು ಕೈಬಿಡಲಾಗಿದೆ ಎಂದು ತಿಳಿದುಬಂದಿದೆ. ಬಜೆಟ್ ಸ್ನೇಹಿಯಾಗಿಸುವ ಉದ್ದೇಶದಿಂದ ಕಾಮನ್ವೆಲ್ತ್ ಗೇಮ್ಸ್ ಫೆಡರೇಶನ್ (ಸಿಜಿಎಫ್) ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದೆ. 12 ವರ್ಷದ ನಂತರ ಗ್ಲಾಸ್ಗೋ ಈ ಕೂಟದ ಆತಿಥ್ಯವಹಿಸಿಕೊಂಡಿದೆ.
ಕ್ರೀಡಾಕೂಡ ಜುಲೈ 23ರಿಂದ ಆಗಸ್ಟ್ 2ರವರೆಗೆ ನಡೆಯಲಿದೆ. 2002ರ ಮ್ಯಾಂಚೆಸ್ಟರ್ ಆವೃತ್ತಿಯಿಂದ ಆರಂಭಗೊಂಡಿದ್ದ ಪ್ಯಾರಾ ಅಥ್ಲೀಟ್, 2026ರ ಆವೃತ್ತಿಯಲ್ಲೂ ಮುಂದುವರಿಯಲಿದೆ. ಇಡೀ ಕ್ರೀಡಾಕೂಟಕ್ಕೆ ಕೇವಲ ನಾಲ್ಕು ಕೇಂದ್ರಗಳನ್ನಷ್ಟೇ ಬಳಸಲಾಗುತ್ತಿದೆ. 2022ರ ಬರ್ಮಿಂಗ್‌ಹ್ಯಾಮ್ ಗೇಮ್ಸ್‌ನಲ್ಲಿ ಒಟ್ಟು 19 ಕ್ರೀಡಾ ವಿಭಾಗಗಳಿದ್ದವು. ಆದರೆ ಈ ಬಾರಿ ಕೇವಲ 10 ಕ್ರೀಡೆ ಮಾತ್ರ ಇರಲಿದೆ.
“ಕಾಮನ್‌ವೆಲ್ತ್ ಕ್ರೀಡೆಯಲ್ಲಿ ಹಲವು ಆಟಗಳು ಇರಬೇಕು ಎನ್ನುವುದು ನಮ್ಮ ಬಯಕೆಯೂ ಆಗಿದೆ. ಆದರೆ, ನಿರ್ವಹಣೆ ಮತ್ತು ಹಣಕಾಸು ವೆಚ್ಚವನ್ನೂ ತಗ್ಗಿಸಬೇಕಾಗಿದೆ. ಹೀಗಾಗಿ ಅಥ್ಲೆಟಿಕ್ಸ್ ಹಾಗೂ ಪ್ಯಾರಾ ಅಥ್ಲೆಟಿಕ್ಸ್ (ಟ್ರ್ಯಾಕ್ ಮತ್ತು ಫೀಲ್ಡ್), ಈಜು, ಪ್ಯಾರಾ ಈಜು, ಆರ್ಟಿಸ್ಟಿಕ್ ಜಿನ್ಮಾಸ್ಟಿಕ್, ಟ್ರ್ಯಾಕ್ ಸೈಕ್ಲಿಂಗ್ ಹಾಗೂ ಪ್ಯಾರಾ ಟ್ರ್ಯಾಕ್ ಸೈಕ್ಲಿಂಗ್, ನೆಟ್‌ಬಾಲ್, ವ್ಹೈಟ್ ಲಿಫ್ಟಿಂಗ್ ಮತ್ತು ಪ್ಯಾರಾ ಪವರ್‌ಲಿಫ್ಟಿಂಗ್, ಬಾಕ್ಸಿಂಗ್, ಜುಡೊ, ಬೌಲ್ಸ್ ಹಾಗೂ ಪ್ಯಾರಾ ಬೌಲ್ಸ್, 3X3 ಬಾಸ್ಕೆಟ್‌ಬಾಲ್, 3X3 ಗಾಲಿಕುರ್ಚಿ ಬಾಸ್ಕೆಟ್‌ಬಾಲ್’ ಇರಲಿದೆ ಎಂದು ಕಾಮನ್‌ವೆಲ್ತ್ ಗೇಮ್ಸ್ ಫೆಡರೇಷನ್ ಹೇಳಿದೆ. ಹಣಕಾಸು ಸಮಸ್ಯೆಯಿಂದ ಆಸ್ಟ್ರೇಲಿಯದ ವಿಕ್ಟೋರಿಯಾ 2026ರ ಕ್ರೀಡಾಕೂಟದಿಂದ ಹಿಂದೆ ಸರಿದ ಕಾರಣ ಆತಿಥ್ಯ ಗ್ಲಾಸ್ಗೋ ಪಾಲಾಗಿತ್ತು.
ಇದನ್ನೂ ಓದಿ IND vs NZ 2nd Test: ಕಿವೀಸ್ ಕಟ್ಟಿಹಾಕಲು ಸ್ಪಿನ್ ಟ್ರ್ಯಾಕ್ ಮೊರೆ ಹೋದ ಭಾರತ?
ಹಾಕಿ ಮತ್ತು ಶೂಟಿಂಗ್ ಕೈಬಿಟ್ಟ ಕಾರಣ ಭಾರತಕ್ಕೆ ಭಾರೀ ನಷ್ಟ ಸಂಭವಿಸಿದೆ. ಏಕೆಂದರೆ ಈ ಕ್ರೀಡಾಕೂಟದಲ್ಲಿ ಭಾರತದ ಪುರುಷರ ತಂಡ ಈವರೆಗೆ 5 ಪದಕ ಗೆದ್ದಿದ್ದಾರೆ. ಇದರಲ್ಲಿ 3 ಬೆಳ್ಳಿ, 2 ಕಂಚು ಒಳಗೊಂಡಿದೆ. ಮಹಿಳಾ ತಂಡ 3 ಪದಕ ಗೆದ್ದಿದೆ. ಇದರಲ್ಲಿ ಒಂದು ಚಿನ್ನ ಒಳಗೊಂಡಿದೆ. 2000ದ ಆವೃತ್ತಿಯ ಚಿನ್ನ ಒಲಿದಿತ್ತು. ಬರ್ಮಿಂಗ್‌ಹ್ಯಾಮ್ ಕ್ರೀಡಾಕೂಟದಲ್ಲಿ ಶೂಟಿಂಗ್ ಕೈಬಿಡಲಾಗಿತ್ತು. ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಹೆಚ್ಚು ಪದಕ ಜಯಿಸಿದ್ದ ಶೂಟಿಂಗ್‌ನಲ್ಲಿ ಹೀಗಾಗಿ ಕಾಮನ್ವೆಲ್ತ್ ಗೇಮ್ಸ್‌ನಲ್ಲಿಯೂ ಭಾರತ ಶೂಟಿಂಗ್‌ನಲ್ಲಿ ಪದಕ ನಿರೀಕ್ಷೆ ಮಾಡಿತ್ತು. ಈ ನಿರೀಕ್ಷೆ ಹುಸಿಯಾಗಿದೆ.
ಬ್ಯಾಡ್ಮಿಂಟನ್‌ನಲ್ಲಿ ಭಾರತ ಈವರೆಗೂ 10 ಜಿನ್ನ ಸೇರಿದಂತೆ 31 ಪದಕಗಳನ್ನು ಪಡೆದಿದೆ. ಶೂಟಿಂಗ್‌ನಲ್ಲಿ 135 ಪದಕ ಜಯಿಸಿದೆ. ಇದರಲ್ಲಿ 63 ಚಿನ್ನದ ಪದಕ ಒಳಗೊಂಡಿದೆ. ಕುಸ್ತಿಯಲ್ಲಿ 114 ಪದಕ ಭಾರತಕ್ಕೆ ಲಭಿಸಿದೆ. ಕ್ರಿಕೆಟ್‌ನಲ್ಲಿ ಮಹಿಳೆಯರ ತಂಡವು ಬೆಳ್ಳಿ ಪದಕ ಜಯಿಸಿದೆ. ಆದರೆ ಈ ಕ್ರೀಡೆಗಳು ಕೈಬಿಟ್ಟ ಕಾರಣ ಈ ಭಾರತದ ಪದಕ ಬೇಟೆಗೆ ಅಡ್ಡಿಯಾಗಿದೆ.