Friday, 22nd November 2024

BBK 11: ಈ ವಾರ ಬಿಗ್ ಬಾಸ್ ಮನೆಯಲ್ಲಿ ಒಬ್ಬರಲ್ಲ ಇಬ್ಬರು ಕ್ಯಾಪ್ಟನ್: ತಲೆ ಕೆಡಿಸಿಕೊಂಡ ಸ್ಪರ್ಧಿಗಳು

BBK 11 Two Captains

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಮೊದಲ ಮೂರು ವಾರಗಳಲ್ಲಿ ಸಾಕಷ್ಟು ಜಗಳಗಳನ್ನು ಕಂಡಿದ್ದ ಮನೆಯಲ್ಲಿ ಈಗ ಕೊಂಚ ಶಾಂತಿಯ ವಾತಾವರಣ ಇದೆ. ಆದರೆ, ಇದು ಎಷ್ಟು ಸಮಯ ಎಂಬುದು ನೋಡಬೇಕಿದೆ. ಇದರ ನಡುವೆ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಹನುಮಂತ ಅವರು ಎಂಟ್ರಿ ಕೊಟ್ಟರು. ಬಿಗ್ ಬಾಸ್ ಇವರನ್ನು ತಾತ್ಕಾಲಿಕ ಕ್ಯಾಪ್ಟನ್ ಆಗಿ ನೇಮಕ ಮಾಡಿದರು. ಆದರೀಗ ಅಧಿಕೃತವಾಗಿ ವಾರದ ಕ್ಯಾಪ್ಟನ್ ಅನ್ನು ಆರಿಸುವ ಸಮಯ ಬಂದಿದೆ.

ಈ ವಾರ ಬಿಗ್ ಬಾಸ್ ಕ್ಯಾಪ್ಟನ್ ವಿಚಾರದಲ್ಲಿ ದೊಡ್ಡ ಟ್ವಿಸ್ಟ್ ಕೊಟ್ಟಿದ್ದಾರೆ. ಅದೇನೆಂದರೆ ಇಬ್ಬರು ಕ್ಯಾಪ್ಟನ್ಸ್. ಹೌದು, ಇಬ್ಬರು ನಾಯಕರ ನೇತೃತ್ವದಲ್ಲಿ ಈ ವಾರ ಬಿಗ್ ಬಾಸ್ ಜರ್ನಿ ಸಾಗಲಿದೆ. ಇದಕ್ಕಾಗಿಯೇ ಬಿಗ್ ಬಾಸ್ ಒಂದು ಟಾಸ್ಕ್ ಕೂಡ ಕೊಟ್ಟಿದ್ದಾರೆ. ಈ ಟಾಸ್ಕ್‌ಗಾಗಿಯೇ ಇಬ್ಬಿಬ್ಬರು ಸ್ಪರ್ಧಿಗಳು ಆಡುತ್ತಿದ್ದಾರೆ. ಇಲ್ಲಿ ಗೆದ್ದ ಜೋಡಿ ಮನೆಯಲ್ಲಿ ಕ್ಯಾಪ್ಟನ್ ಆಗಿರುತ್ತಾರೆ.

ವಿಶೇಷ ಎಂದರೆ ಬಿಗ್​ಬಾಸ್​ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಈ ವಾರ ದೊಡ್ಮನೆಯಲ್ಲಿ ಜೋಡಿ ಕ್ಯಾಪ್ಟನ್ ಆಯ್ಕೆ ಆಗಲಿದ್ದಾರೆ. ಕಳೆದ 10 ವರ್ಷದಲ್ಲಿ ಆಯಾ ವಾರ ಒಬ್ಬರೇ ಕ್ಯಾಪ್ಟನ್ ಆಗಿದ್ದಾರೆ. ಇಬ್ಬರು ಕ್ಯಾಪ್ಟನ್ ಅನ್ನುವ ಕಾನ್ಸೆಪ್ಟ್ ಇರಲೇ ಇಲ್ಲ. ಆದರೀಗ, ಬಿಗ್ ಬಾಸ್ ಸೀಸನ್-11ರಲ್ಲಿ ಸ್ವತಃ ಬಿಗ್ ಬಾಸ್ ಹೊಸ ಅಧ್ಯಾಯ ಶುರು ಮಾಡಿ ಸ್ಪರ್ಧಿಗಳ ತಲೆಗೆ ಹುಳಬಿಟ್ಟಿದ್ದಾರೆ.

ಒಂದು ಜೋಡಿ ಗಾರ್ಡನ್ ಏರಿಯಾದಲ್ಲಿ ಅಳವಡಿಸಲಾದ ಸಮಯ ಸೂಚಿಸುವ ಮುಳ್ಳುಗಳನ್ನು ತಳ್ಳುತ್ತಾ ಜೊತೆಗೆ ತಾವು ಸುತ್ತುತ್ತಾ, 17 ನಿಮಿಷಗಳನ್ನು ಏಣಿಸಬೇಕು. ಜೋಡಿಗಳು 17 ನಿಮಿಷ ಮುಗಿದಿದೆ ಎಂದು ಭಾವಿಸಿದರೇ ಗಡಿಯಾರದಿಂದ ಕಳೆಗೆ ಇಳಿದು ಪಕ್ಕದಲ್ಲಿ ಇರುವ ಗಂಟೆ ಬಾರಿಸಿಬೇಕು. ಆದರೆ ಇದರ ಮಧ್ಯೆ ಪ್ರತಿ ಸ್ಪರ್ಧಿಗಳು ಅವರ ಏಕಾಗ್ರತೆಯನ್ನು ಕಳೆದುಕೊಳ್ಳುವಂತೆ ಮಾಡಬಹುದು. ಸರಿಯಾಗಿ 17 ನಿಮಿಷ ಅಥವಾ ಇದರ ಆಸುಪಾಸಿನಲ್ಲಿ ಗಂಟೆ ಬಾರಿಸಿದ ಜೋಡಿ ಮನೆಯ ಕ್ಯಾಪ್ಟನ್ ಆಗುತ್ತಾರೆ.

BBK 11: ಜಗಳಗಳಿಂದ ಕೂಡಿದ್ದ ಬಿಗ್ ಬಾಸ್​ ಮನೆಯ ವಾತಾವರಣ ಬದಲಾಯಿಸಿದ ಹನುಮಂತ