Saturday, 23rd November 2024

Bengaluru Power Cut: ಗಮನಿಸಿ, ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ಕರೆಂಟ್‌ ಇರಲ್ಲ

bengaluru power cut

ಬೆಂಗಳೂರು: 66/11 ಕೆ.ವಿ. ಆಲೂರು ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಕೈಗೊಳ್ಳುವುದರಿಂದ ವಿದ್ಯುತ್ ಸರಬರಾಜಾಗುತ್ತಿರುವ ನೆಲಮಂಗಲ ತಾಲೂಕಿನ ಹಲವು ಗ್ರಾಮಗಳಲ್ಲಿ ಅ.23 ರಂದು ಬುಧವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ (Bengaluru Power Cut) ಉಂಟಾಗಲಿದೆ.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ನೆಲಮಂಗಲ ತಾಲೂಕಿನ ಮಾಕಳಿ, ಮಂತ್ರಿ ಬಡಾವಣೆ, ನರಸೀಪುರ ಬಿಡಿಎ ಪ್ಲಾಟ್ಸ್, ಅಡಕಮಾರನಹಳ್ಳಿ, ದೊಂಬರಹಳ್ಳಿ, ರಾಜೇಶ್ವರಿ ನಗರ, ದಾಸನಪುರ, ದೇವಣ್ಣಪಾಳ್ಯ, ಹಾರೋಕ್ಯಾತನಹಳ್ಳಿ, ಗೌಡಹಳ್ಳಿ, ಹೆಗ್ಗಡದೇವನಪುರ, ಹುಸ್ಕೂರು ಮುಖ್ಯರಸ್ತೆ, ಗೆಜ್ಜದಹಳ್ಳಿ, ನ್ಯಾನೋ ಸೆಂಟರ್, ಟಾಟಾಹೌಸಿಂಗ್, ರಾಯಲ್ ಟೌನ್‌ಶಿಪ್, ಕೋಡಿಪಳ್ಯ ವಡೇರಹಳ್ಳಿ, ಎ.ಪಿ.ಎಂಸಿ, ಹೊನ್ನಸಂದ್ರ, ಮತ್ತಹಳ್ಳಿ, ನರಸೀಪುರ, ಗೋವಿಂದಪುರ, ಆಲೂರು, ಆಲೂರು ಪಾಳ್ಯ, ಮುನಿಯನಪಾಳ್ಯ, ನಗರೂರು, ಕೈಗಾರಿಕಾ ಪ್ರದೇಶಗಳು, ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಈ ಸುದ್ದಿಯನ್ನೂ ಓದಿ | CM Siddaramaiah: ರಾಜ್ಯದ ಜನ ನನ್ನ ಜತೆಗೆ ಇರುವವರೆಗೆ ಬಿಜೆಪಿ-ಜೆಡಿಎಸ್‌ ಷಡ್ಯಂತ್ರಕ್ಕೆ ಹೆದರಲಾರೆ ಎಂದ ಸಿದ್ದರಾಮಯ್ಯ

ಬೆಂಗಳೂರು ನಗರದ 66/11 ಕೆ.ವಿ. ವಿಡಿಯಾ ಸಬ್‌ಸ್ಟೇಷನ್ ಕೆಪಿಟಿಸಿಎಲ್‌ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಜಾಲಹಳ್ಳಿ ವಿಭಾಗದ ಎನ್-9 ಉಪ ವಿಭಾಗದ ಹಲವೆಡೆ ಅ.23 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ (Bengaluru Power Cut) ಉಂಟಾಗಲಿದೆ.

ಈ ಸುದ್ದಿಯನ್ನೂ ಓದಿ | Rekke Iddare Saake Book: ರೆಕ್ಕೆ ಇದ್ದರೆ ಸಾಕೆ?; ನಟಿ ಶ್ವೇತಾ ಶ್ರೀವಾಸ್ತವ್‌ ಸಿನಿಪಯಣದ ಅನುಭವ ಕಥನ

ವಿದ್ಯುತ್‌ ವ್ಯತ್ಯಯವಾಗುವ ಸ್ಥಳಗಳು

ನಗರದ ವಿನಾಯಕ ನಗರ, ವಿಕಾಸ್ ನಗರ, ಶೋಭಾ ಅಪಾರ್ಟ್‌ಮೆಂಟ್, 8ನೇ ಮೈಲ್ ರಸ್ತೆ, ರಾಮಯ್ಯ ಲೇಔಟ್, ಹಾವನೂರು ಎಕ್ಸ್‌ಟೆನ್. ನಾರಾಯಣ ಲೇಔಟ್, ವಿಡಿಯಾ ಸ್ಕೂಲ್, ಕುವೆಂಪು ನಗರ, ವಿಡಿಯಾ ಬಸ್ ಸ್ಟಾಪ್, ರಿಲಯನ್ಸ್ ಫ್ರೆಶ್, ಮುನಿಕೊಂಡಪ್ಪ ಲೇಔಟ್, ಅಶೋಕ್ ನಗರ, ವಿದ್ಯಾ ನಗರ, ಡಿಫೆನ್ಸ್ ಕಾಲೋನಿ, ಹಾವನೂರು ಎಕ್ಸ್, ಮಂಜುನಾಥ್ ನಗರ, ಮಹಾಲಕ್ಷ್ಮಿ ನಗರ, ಕಾಟರಾಯ ನಗರ, ಸೋಪ್ ಫ್ಯಾಕ್ಟರಿ ಲೇಔಟ್, ವಿಜಯಲಕ್ಷ್ಮಿ ಲೇಔಟ್, ಅಂದಾನಪ್ಪ ಲೇಔಟ್, ಬಿಟಿಎಸ್ ಲೇಔಟ್, ಸಿದ್ದೇಶ್ವರ ಲೇಔಟ್, ಸಾಸುವೆಘಟ್ಟ, ಸೋಲದೇವನಹಳ್ಳಿಯ ಭಾಗಶಃ, ತರಬನಹಳ್ಳಿ ಮುಖ್ಯ ರಸ್ತೆ, , ಹಾವನೂರು ಎಕ್ಸ್‌ಟಿಎನ್, ಹೆಸರಘಟ್ಟ ಮುಖ್ಯ ರಸ್ತೆ, ಸಿಡೇದಹಳ್ಳಿ, ಭಾಗಶಃ ವಿಶ್ವೇಶರಯ್ಯ ಲೇಔಟ್, ರಾಯಲ್ ಎನ್‌ಕ್ಲೇವ್, ಬೈರವೇಶ್ವರ ವೃತ್ತ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.