-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಳೆಗಾಲ ಮುಗಿದರೂ ಆಗಾಗ ಮಳೆ ಸುರಿಯುವುದು ಮಾತ್ರ ನಿಂತಿಲ್ಲ. ಇಂತಹ ಸಮಯದಲ್ಲಿ ಹುಡುಗಿಯರ ಸ್ಟೈಲಿಂಗ್ಗೆ ಸಾಥ್ ನೀಡುವ ಫ್ಯಾಷನ್ವೇರ್ಗಳು (Rainy Season Fashionwear) ಮತ್ತೊಮ್ಮೆ ಪ್ರಚಲಿತಕ್ಕೆ ಬಂದಿವೆ. ಹಾಗಾದಲ್ಲಿ, ಇಂತಹ ದಿನಗಳಲ್ಲಿ ಸಾಥ್ ನೀಡುವ ಈ ಡ್ರೆಸ್ಗಳ್ಯಾವುವು? ಆಕ್ಸೆಸರೀಸ್ಗಳ್ಯಾವುವು? ಈ ಜಿಟಿಜಿಟಿ ಮಳೆಯಲ್ಲೂ, ಕಿರಿಕಿರಿ ಏನಿಸದೇ ಅವುಗಳಲ್ಲಿ ಆಕರ್ಷಕವಾಗಿ ಹೇಗೆ ಕಾಣಿಸಿಕೊಳ್ಳಬಹುದು? ಎಂಬುದರ ಬಗ್ಗೆ ಸ್ಟೈಲಿಸ್ಟ್ ರಾಘವ್ ಇಲ್ಲಿ ತಿಳಿಸಿದ್ದಾರೆ.
ವಾಟರ್ ಪ್ರೂಫ್ ಡ್ರೆಸ್ಗಳು
ಲೇಯರ್ ಲುಕ್ ನೀಡುವ ಜಾಕೆಟ್, ಕೋಟ್ ಹಾಗೂ ಕೆಲವು ಶೈಲಿಯ ವಾಟರ್ ಪ್ರೂಫ್ ಡ್ರೆಸ್ಗಳು ಮತ್ತೊಮ್ಮೆ ಮರಳಿವೆ. ಇನ್ನು ಹೊಸತನ್ನು ಖರೀದಿಸಲು ಸಾಧ್ಯವಾಗದಿದ್ದವರು, ದಪ್ಪನೆಯ ಉಡುಪನ್ನು ಆವಾಯ್ಡ್ ಮಾಡಿ, ಸಿಂಥೆಟಿಕ್ ಹಾಗೂ ಲೈಟ್ವೈಟ್ ಡ್ರೆಸ್ಗಳನ್ನು ಆಯ್ಕೆ ಮಾಡಿ, ಧರಿಸಿ. ಕಳೆದ ಸೀಸನ್ನಲ್ಲಿ ಟ್ರೆಂಡಿಯಾಗಿದ್ದ, ವೆಸ್ಟರ್ನ್ ಲುಕ್ ನೀಡುವ ರ್ಯಾಂಪರ್, ಟ್ರೆಂಚ್ ಕೋಟ್ ಡ್ರೆಸ್, ಮಿಡಿ ಡ್ರೆಸ್ ಕಂಟಿನ್ಯೂ ಮಾಡಿ.
ತ್ರೀಫೋರ್ತ್ ಔಟ್ಫಿಟ್ಸ್
ಮಳೆಯಲ್ಲಿ ಪಾದ ಮುಟ್ಟದ ತ್ರೀ ಪೋರ್ತ್ ಶೈಲಿಯ ಎಲ್ಲಾ ಡ್ರೆಸ್ಗಳಿಗೆ ಸೈ ಎನ್ನಿ. ಆದಷ್ಟೂ ಮಾರುದ್ದದ ಮ್ಯಾಕ್ಸಿ, ಗೌನ್ಗಳನ್ನು ಮರೆತು ಬಿಡಿ.
ಕೇಪ್ರೀಸ್-ಆಂಕೆಲ್ ಲೆಂಥ್ ಪ್ಯಾಂಟ್ಸ್
ಕೇಪ್ರೀಸ್ ಹಾಗೂ ಆಂಕೆಲ್ ಲೆಂಥ್ ಕ್ರಾಪ್ಡ್ ಪ್ಯಾಂಟ್ಗಳನ್ನು ಆಯ್ಕೆ ಮಾಡಿ ಧರಿಸಿ. ಇವು ನೋಡಲು ಸ್ಟೈಲಿಶ್ ಆಗಿ ಕಾಣಿಸುವುದರೊಂದಿಗೆ ಮಳೆಯಲ್ಲೂ ಕಿರಿಕಿರಿ ಉಂಟು ಮಾಡುವುದಿಲ್ಲ! ಸದ್ಯಕ್ಕೆ ಬೂಟ್ಕಟ್, ಪಲ್ಹಾಜೋ, ಶರರಾ, ಘರಾರ ಧರಿಸದಿರಿ.
ಪಾಕೆಟ್ ರೈನ್ಕೋಟ್ಸ್
ಕಳೆದ ಸೀಸನ್ನಲ್ಲಿ ಟ್ರೆಂಡಿಯಾಗಿದ್ದ ಬಣ್ಣಬಣ್ಣದ ಮಾನೋಕ್ರೋಮ್ ಹಾಗೂ ಪ್ರಿಂಟ್ಸ್ ಇರುವಂತಹ ಪಾಕೆಟ್ ಕಾಂಪಾಕ್ಟ್ ರೈನ್ಕೋಟ್ಸ್ ಜತೆಗಿರಿಸಿಕೊಳ್ಳಿ. ಅಗತ್ಯವಿದ್ದಾಗ, ಸ್ಟೈಲಿಶ್ ಆಗಿ ಧರಿಸಿ.
ಬಣ್ಣ ಬಣ್ಣದ ಛತ್ರಿ ಮ್ಯಾಚಿಂಗ್
ಮಳೆಯಲ್ಲಿ ಕ್ಲಿಕ್ಕಿಸಿದ ಯಾವುದೇ ಫೋಟೋಶೂಟ್ ನೋಡಿದರೂ ಪಾರದರ್ಶಕ ಹಾಗೂ ಕಲರ್ಫುಲ್ ಛತ್ರಿಗಳು ಹೈಲೈಟಾಗಿರುತ್ತವೆ. ನೀವೂ ಕೂಡ ನಿಮ್ಮ ಔಟ್ಫಿಟ್ ಜತೆ ಬಣ್ಣ ಬಣ್ಣದ ಛತ್ರಿ ಹಿಡಿದು ಮಳೆಯನ್ನು ಎಂಜಾಯ್ ಮಾಡಬಹುದು.
ಈ ಸುದ್ದಿಯನ್ನೂ ಓದಿ | Prabhas Birthaday: ಬರ್ತ್ಡೇ ಸಂಭ್ರಮದಲ್ಲಿ ಪ್ರಭಾಸ್; ಕೈಯಲ್ಲಿವೆ ಬಿಗ್ ಬಜೆಟ್ ಸಾಲು ಸಾಲು ಸಿನಿಮಾಗಳು
ಲೈಟ್ವೈಟ್ ಪ್ರಿಂಟೆಡ್ ಎಥ್ನಿಕ್ ವೇರ್ಸ್
ಈ ಮಳೆಯಲ್ಲಿ, ಎಥ್ನಿಕ್ವೇರ್ ಧರಿಸಲೇಬೇಕಿದ್ದಲ್ಲಿ, ಆದಷ್ಟೂ ಲೈಟ್ವೈಟ್ ಪ್ರಿಂಟ್ಸ್ ಇರುವಂತಹ ಡಿಸೈನರ್ವೇರ್ ಧರಿಸಿ. ಹೆವ್ವಿ ಡಿಸೈನ್ನವನ್ನು ಆವಾಯ್ಡ್ ಮಾಡಿ. ಎಥ್ನಿಕ್ ಶಾರ್ಟ್ ಕುರ್ತಾ, ಪೆಪ್ಲಂ, ಶಾರ್ಟ್ ಅನಾರ್ಕಲಿಯಂತವನ್ನು ಧರಿಸಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)