ಬೆಂಗಳೂರು: ಉತ್ತರ ಭಾರತದಲ್ಲಿ ವಿವಾಹಿತ ಮಹಿಳೆಯರು ಕರ್ವಾ ಚೌತ್ (Karwa Chauth) ಹಬ್ಬವನ್ನು ಕಡ್ಡಾಯವಾಗಿ ಆಚರಿಸುತ್ತಾರೆ. ತಮ್ಮ ಗಂಡಂದಿರಿಗೆ ದೀರ್ಘ ಆಯುಷ್ಯ ಮತ್ತು ಆರೋಗ್ಯಕರ ಜೀವನಕ್ಕಾಗಿ ಉಪವಾಸ ಮಾಡುತ್ತಾರೆ. ಕೊನೆಗೆ ಚಂದ್ರನನ್ನು ನೋಡಿ ಉಪವಾಸ ಕೊನೆಗೊಳಿಸುತ್ತಾರೆ. ಪೂಜೆಯ ಅಂತ್ಯದಲ್ಲಿ ಗಂಡನ ಮುಖವನ್ನು ಜಾಲರಿಯ ಮೂಲಕ ನೋಡುತ್ತಾರೆ. ಆದರೆ, ಇಲ್ಲೊಬ್ಬ ಮುದುಕ ತಾನು ಕರ್ವಾ ಚೌತ್ ಪೂಜೆಯಲ್ಲಿ ಪಾಲ್ಗೊಂಡು ಕೊನೆಯಲ್ಲಿ ಉಪವಾಸ ಮಿಯಾ ಖಲೀಫಾಳ ಚಿತ್ರ ನೋಡಿ ವ್ರತ ಕೊನೆಗೊಳಿಸಿದ್ದಾನೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾಸ್ಯದ ಮೂಲಕವೇ ಖ್ಯಾತಿ ಪಡೆದಿರುವ ಗುರು ಜಿ ಎಂಬುವರೇ ಈ ರೀತಿ ಮಾಡಿದ ವ್ಯಕ್ತಿ.
ಸಾಂಪ್ರದಾಯಿಕ ಥಾಲಿ ಮತ್ತು ಚನ್ನಿಯೊಂದಿಗೆ ಪೂಜೆಯಲ್ಲಿ ತೊಡಗಿರುವ ಗುರು ಜಿ. ಗೋಡೆಗೆ ಅಂಟಿಸಲಾದ ಮಿಯಾ ಖಲೀಫಾ ಚಿತ್ರವನ್ನು ನೋಡುತ್ತಿರುವುದನ್ನು ವೀಡಿಯೊ ಕಂಡಿದೆ. ಕೆಲವು ವೀಕ್ಷಕರು ಇದಕ್ಕೆ ಬಗೆಬಗೆಯಾಗಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: Aamir Khan : ಅನುರಾಗ್ ಬಸು ನಿರ್ದೇಶನದ ಕಿಶೋರ್ ಕುಮಾರ್ ಬಯೋಪಿಕ್‌ನಲ್ಲಿಆಮೀರ್ ಖಾನ್!
ವೀಡಿಯೊದಲ್ಲಿ ಭಿನ್ನ ಕಾಮೆಂಟ್‌ಗಳು ಬಂದಿವೆ. ಇಂತಹ ಸುಂದರ ಆಚರಣೆಗಳು ಗಮನ ಸೆಳೆಯುವ ಪ್ರದರ್ಶನಗಳಾಗಿ ಮಾರ್ಪಟ್ಟಿರುವುದು ದುರದೃಷ್ಟಕರ ಎಂದು ಬಳಕೆದಾರರೊಬ್ಬರು ನಿರಾಶೆ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬರು ವೃದ್ಧರು ತಮ್ಮ ಮೊಮ್ಮಕ್ಕಳಿಂದ ಪ್ರಭಾವಿತರಾಗಿರಬಹುದು ಎಂದು ಹೇಳಿದ್ದಾರೆ.
ಖಲೀಫಾಗೆ ಸಂಬಂಧಿಸಿದ ಹಿಂದಿನ ಘಟನೆಗಳು
ಮಿಯಾ ಖಲೀಫಾ ಅವರ ಚಿತ್ರಗಳ ಬಳಕೆ ವಿವಾದ ಹುಟ್ಟುಹಾಕುತ್ತಿರುವುದು ಇದೇ ಮೊದಲಲ್ಲ. ಆಗಸ್ಟ್‌ನಲ್ಲಿ ತಮಿಳುನಾಡಿನ ಕಾಂಚೀಪುರಂನಲ್ಲಿ ಆದಿ ಹಬ್ಬದ ಅಲಂಕಾರದ ಭಾಗವಾಗಿ ಹಾಕಿರುವ ಬೋರ್ಡ್ ಹಾಕಿದ್ದಾರೆ. ಅಮ್ಮನ್ (ಪಾರ್ವತಿ) ದೇವಿಯನ್ನು ಪೂಜಿಸಲಾಗುತ್ತದೆ.