Wednesday, 23rd October 2024

Prabhas Birthday: ಇಂದು ಪ್ರಭಾಸ್ ಹುಟ್ಟುಹಬ್ಬ, ಡಿಜಿಟಲ್ ದಾಖಲೆಗೆ ಫ್ಯಾನ್ಸ್ ಸಜ್ಜು; ನಿಮ್ಮ ಶುಭಾಶಯ ಕಳುಹಿಸುವುದು ಹೇಗೆ?

prabhas birthday

ಬೆಂಗಳೂರು: ʼಬಾಹುಬಲಿʼ ಖ್ಯಾತಿಯ ನಟ, ಟಾಲಿವುಡ್‌ನ ಸೂಪರ್‌ಸ್ಟಾರ್ ಪ್ರಭಾಸ್‌ (Prabhas Birthday) ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಅದ್ಧೂರಿ ಆಚರಣೆಗೆ ಅವರ ಅಭಿಮಾನಿಗಳು ಸಜ್ಜಾಗಿದ್ದಾರೆ. ನಟನಿಗೆ ಶುಭಾಶಯ (Birthday Wish) ಕೋರುವ ವಿಶ್ವದಾಖಲೆ (World record) ಮಾಡಲು ಸಜ್ಜಾಗಿದ್ದು, ಇದಕ್ಕಾಗಿ ಡಿಜಿಟಲ್ ಶುಭಾಶಯ (Digital Wish) ಅಭಿಯಾನ ಹಮ್ಮಿಕೊಂಡಿದ್ದಾರೆ.

Fandemic ನೇತೃತ್ವದ ಈ ಉಪಕ್ರಮ, ಪ್ರಪಂಚದಾದ್ಯಂತದ ಅಭಿಮಾನಿಗಳು ತಮ್ಮ ಹುಟ್ಟುಹಬ್ಬದ ಶುಭಾಶಯಗಳನ್ನು ಡಿಜಿಟಲ್ ವೇದಿಕೆಯ ಮೂಲಕ ಪ್ರಭಾಸ್‌ಗೆ ಕಳುಹಿಸಲು ಅನುವು ಮಾಡಿಕೊಡುತ್ತದೆ. ಅವರ ಹುಟ್ಟುಹಬ್ಬದ ಕೆಲವೇ ದಿನಗಳ ಮೊದಲು ಪ್ರಾರಂಭಿಸಲಾದ ಅಭಿಯಾನ ಈಗಾಗಲೇ ಸಾಕಷ್ಟು ಪ್ರತಿಕ್ರಿಯೆ ಪಡೆದಿದೆ. ಮೊದಲ ಕೆಲವೇ ಗಂಟೆಗಳಲ್ಲಿ, ಜಾಗತಿಕವಾಗಿ ಅವರ ಅಭಿಮಾನಿಗಳಿಂದ 1,25,000 ಸಂದೇಶಗಳು ಬಂದಿವೆ. ಸಂಖ್ಯೆಗಳು ಏರುತ್ತಲೇ ಇವೆ. ಇದರ ಗುರಿ ಹತ್ತು ಲಕ್ಷ ಹುಟ್ಟುಹಬ್ಬದ ಶುಭಾಶಯಗಳನ್ನು ಸಂಗ್ರಹಿಸುವುದು. ಇದು ಭಾರತೀಯ ಚಿತ್ರರಂಗದ ʼಅಭಿಮಾನಿ ಸಂಸ್ಕೃತಿʼಯಲ್ಲಿ ಹೊಸ ಮಾನದಂಡವನ್ನು ಉಂಟುಮಾಡುವ ಗುರಿ ಹೊಂದಿದೆ.

ನಿಮ್ಮ ವಿಶ್‌ ಕಳಿಸುವುದು ಹೇಗೆ?

“ಡಿಜಿಟಲ್ ಪಾರ್ಟಿ” ಎಂದು ಕರೆಯಲ್ಪಡುವ ಈ ಡಿಜಿಟಲ್ ಅಭಿಯಾನವು ಲಕ್ಷಾಂತರ ಜನರನ್ನು ಸೇರಿಸಿ ಪ್ರಭಾಸ್‌ಗೆ ಸಲ್ಲಿಸುವ ಗೌರವ. ಅಭಿಮಾನಿಗಳು ಇದರಲ್ಲಿ ಸೇರಬಹುದು ಮತ್ತು ತಮ್ಮ ಶುಭಾಶಯಗಳನ್ನು Fandemic ಪ್ಲಾಟ್‌ಫಾರ್ಮ್ ಮೂಲಕ ಕಳುಹಿಸಬಹುದು. ಈ ಹೆಸರಿನ ವೆಬ್‌ಸೈಟ್‌ ಹಾಗೂ ಇನ್‌ಸ್ಟಗ್ರಾಂ ಪುಟಗಳಿದ್ದು, ಎಲ್ಲಿ ಬೇಕಿದ್ದರೂ ನಿಮ್ಮ ಶುಭಾಶಯವನ್ನು ಸಲ್ಲಿಸಬಹುದು.

ಪ್ರಭಾಸ್ ಅವರ ಹುಟ್ಟುಹಬ್ಬ ಇಂದು ಆಚರಿಸಿಕೊಳ್ಳುತ್ತಿದ್ದಂತೆ, ಅವರ ಮುಂಬರುವ ಚಿತ್ರಗಳ ಕುರಿತು ಇನ್ನಷ್ಟು ರೋಚಕ ಅಪ್‌ಡೇಟ್ಸ್‌ ಸಿಗುವ ನಿರೀಕ್ಷೆಯಿದೆ. ಇದು ಬರ್ತ್‌ಡೇ ಆಚರಣೆಯ ಥ್ರಿಲ್ ಅನ್ನು ಹೆಚ್ಚಿಸಲಿದೆ. ನೀವು ಈ ದಾಖಲೆಯನ್ನು ಸ್ಥಾಪಿಸುವ ಡಿಜಿಟಲ್ ಆಚರಣೆಯ ಭಾಗವಾಗಲು ಬಯಸಿದರೆ, ಈಗಲೇ ಫ್ಯಾಂಡೆಮಿಕ್‌ ಸೇರಿ ಮತ್ತು ನಿಮ್ಮ ಜನ್ಮದಿನದ ಶುಭಾಶಯಗಳನ್ನು ಪ್ರಭಾಸ್‌ಗೆ ಕಳುಹಿಸಿ.

ಇದನ್ನೂ ಓದಿ: Prabhas Birthaday: ಬರ್ತ್‌ಡೇ ಸಂಭ್ರಮದಲ್ಲಿ ಪ್ರಭಾಸ್‌; ಕೈಯಲ್ಲಿವೆ ಬಿಗ್‌ ಬಜೆಟ್‌ ಸಾಲು ಸಾಲು ಸಿನಿಮಾಗಳು