ಬೆಂಗಳೂರು: ನಗರದಲ್ಲಿ ದಿನೇ ದಿನೇ ಸೈಬರ್ ಕ್ರೈಂ(Cyber Crime) ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಲಾಂಜ್‌ನಲ್ಲಿ (Banglore International Airport) ಮಹಿಳೆಯೊಬ್ಬರು ವಂಚನೆಗೆ ಒಳಗಾಗಿದ್ದಾರೆ. ಭಾರ್ಗವಿ ಮಣಿ ವಂಚನೆಗೊಳಗಾದ ಮಹಿಳೆ. ವಿಮಾನ ಪ್ರಯಾಣಕ್ಕೂ ಮೊದಲು ಆಕೆ ಲಾಂಜ್‌ನಲ್ಲಿ ವಿಶ್ರಾಂತಿ ಪಡೆದಿದ್ದು, ಅಲ್ಲೇ 87,000 ರೂ ವಂಚನೆ ಆಗಿರಬಹುದು ಎಂದು ಹೇಳಿಕೊಂಡಿದ್ದಾರೆ. ಆಕೆ ತನಗಾದ ಮೋಸದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ(Social Media) ವಿವರ ಹಂಚಿಕೊಂಡಿದ್ದು, ಸೈಬರ್ ಖದೀಮರಿಂದ ಎಚ್ಚರಿಕೆ ವಹಿಸಿ ಎಂದಿದ್ದಾರೆ.
ಘಟನೆಯೇನು?
ಭಾರ್ಗವಿ ಮಣಿ ಎಂಬ ಮಹಿಳೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಪ್ರಯಣ ಬೆಳೆಸುವರಿದ್ದರು. ವಿಮಾನ ಪ್ರಯಾಣಕ್ಕೂ ಮೊದಲು ವಿಶ್ರಾಂತಿ ತೆಗೆದುಕೊಳ್ಳಲು ಲಾಂಜ್ ಪ್ರವೇಶಿಸಿದಾಗ ಅಲ್ಲಿನ ಸಿಬ್ಬಂದಿ ಮಹಿಳೆಗೆ ತಮ್ಮ ಕ್ರೆಡಿಟ್ ಕಾರ್ಡ್ ನೀಡುವಂತೆ ಕೋರಿದ್ದಾರೆ. ಆದರೆ ಆಕೆ ತನ್ನ ಕ್ರೆಡಿಟ್ ಕಾರ್ಡನ್ನು ಮರೆತು ಬಂದಿದ್ದರಿಂದ ಆಕೆ ತನ್ನ ಬಳಿ ಇದ್ದ ಕ್ರೆಡಿಟ್ ಕಾರ್ಡ್ ಫೋಟೊ ತೋರಿಸಿದ್ದಾರೆ. ನಂತರ ಅಲ್ಲಿನ ಸಿಬ್ಬಂದಿ ಲೌಂಜ್ ಪಾಸ್ ಅಪ್ಲಿಕೇಶನ್‌ಗಳನ್ನು ಡೌನ್ಲೋಡ್ ಮಾಡುವಂತೆ ಸೂಚಿಸಿ, ಫೇಶಿಯಲ್ ರೆಕಗ್ನೈನೇಶನ್ ಸಲುವಾಗಿ ಸ್ಕಾನಿಂಗ್ ಮಾಡುವಂತೆ ಹೇಳಿದ್ದಾರೆ. ಎನೋ ಸರಿ ಇಲ್ಲ ಎಂದೆಸಿದರೂ ಅವರು ಅವರ ಸೂಚನೆಯನ್ನು ಪಾಲಿಸಿದ್ದರು.
ಈ ಘಟನೆಯಾಗಿ ಕೆಲವು ದಿನಗಳ ನಂತರ ಆಕೆಯ ಸ್ನೇಹಿತರು ಕರೆ ಮಾಡಲು ಯತ್ನಿಸಿದ್ದು, ಫೋನ್‌ಗೆ ಕರೆ ಮಾಡಿದರೆ ಬೇರೆ ಕಡೆಗೆ ಹೋಗುತ್ತಿತ್ತು. ಭಾರ್ಗವಿ ಮಣಿ ಕೂಡ ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ನೆಟ್‌ವರ್ಕ್ ಸಮಸ್ಯೆ ಎಂದು ಸುಮ್ಮನಾಗಿದ್ದರು. ನಂತರ ಆಕೆಯ ಕ್ರೆಡಿಟ್ ಕಾರ್ಡ್‌ನಿಂದ 87,000 ರೂ ಸಾವಿರ ರೂ. ವರ್ಗಾವಣೆಗೊಂಡಿವುದನ್ನು ನೋಡಿ ಗಾಬರಿಯಾಗಿದ್ದರು. ಇದೀಗ ಅವರು ಸೈಬರ್ ಖದೀಮರು ತನ್ನ ಫೋನನ್ನು ಲಾಂಜ್ ಪಾಸ್ ಅಪ್ಲಿಕೇಶನ್ ಮೂಲಕ ಹ್ಯಾಕ್ ಮಾಡಿರಬಹುದು ಎಂದು ಸೈಬರ್ ಕ್ರೈಂ ಪೋಲಿಸರಿಗೆ ದೂರು ನೀಡಿದ್ದಾರೆ. ಸದ್ಯ ಮಹಿಳೆ ನೀಡಿದ ದೂರನ್ನು ದಾಖಲಿಸಿಕೊಂಡಿರುವ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Cyber Security: ಆನ್‌ಲೈನ್ ವಂಚನೆ ತಡೆಯಲು ಕೇಂದ್ರ ಸರ್ಕಾರದಿಂದ 5000 ಸೈಬರ್ ಕಮಾಂಡೊಗಳ ನೇಮಕ!
ತನಗಾದ ವಂಚನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿರುವ ಮಹಿಳೆ, “ನಾನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಬ್ಬಂದಿಯ ಬಗ್ಗೆ ಎನನ್ನೂ ದೂರುವುದಿಲ್ಲ. ಈ ಘಟನೆಯ ನಂತರ ನಿರಂತರವಾಗಿ ನನ್ನ ಜೊತೆ ಸಂಪರ್ಕದಲ್ಲಿದ್ದಾರೆ. ಹಾಗೂ ಲಾಂಜ್ ಸಿಬ್ಬಂದಿಯ ಫೋಟೊವನ್ನು ಗುರುತಿಸಲು ಹೇಳಿದ್ದಾರೆ. ಆದರೆ ನಾನು ಪ್ರಯಾಣದ ಸುಸ್ತಿನಲ್ಲಿದ್ದ ಕಾರಣ ನನಗೆ ಗುರುತಿಸಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ನನ್ನ ಬ್ಯಾಂಕ್ ಖಾತೆಯನ್ನು ಕೂಡ ಬ್ಲಾಕ್ ಮಾಡಿಸಿದ್ದೇನೆ. ಸೈಬರ್ ವಂಚಕರಿಂದ ಆದಷ್ಟು ಜಾಗರೂಕರಾಗಿರಿ ಹೇಗೆ ಬೇಕಾದರೂ ನಿಮಗೆ ವಂಚನೆಯಾಗಬಹುದು ಎಂದು ಹೇಳಿದ್ದಾರೆ.