ಉತ್ತರಪ್ರದೇಶ: ಉತ್ತರ ಪ್ರದೇಶದ ನೋಯ್ಡಾದಲ್ಲಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ 42 ವರ್ಷದ ಮಹಿಳೆಗೆ ಪಿಕಪ್ ಟ್ರಕ್ ಡಿಕ್ಕಿ (Hit and Run Case)ಹೊಡೆದ ಪರಿಣಾಮ ಆಕೆ ಸಾವನ್ನಪ್ಪಿದ್ದಾಳೆ. ಈ ಘಟನೆಯ ವಿಡಿಯೊ ಅಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಹಿಳೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬಂದ ಪಿಕಪ್ ಟ್ರಕ್ ಆಕೆಗೆ ಡಿಕ್ಕಿ ಹೊಡೆದು ಬಹಳ ದೂರ ಎಳೆದುಕೊಂಡು ಹೋಗಿದೆ. ಅಲ್ಲಿದ್ದವರು ಒಮ್ಮೆಲೆ ಈ ದೃಶ್ಯವನ್ನು ಕಂಡು ದಂಗಾಗಿದ್ದಾರೆ.
नोएडा : रोड पर खड़ी महिला को पिकअप ने मारी टक्कर
— भारत समाचार | Bharat Samachar (@bstvlive) October 22, 2024
➡घटना में महिला की मौके पर दर्दनाक मौत
➡सीसीटीवी कैमरे में कैद हुआ सड़क हादसा
➡सदरपुर गांव में हंगामा, मौके पर पहुंची पुलिस
➡हंगामा कर रहे लोगों को समझाने में जुटी पुलिस
➡घटना को अंजाम देकर वाहन चालक मौके से फरार… pic.twitter.com/LMqfWKCYz6
ವರದಿಗಳ ಪ್ರಕಾರ, ಸೆಕ್ಟರ್ 39 ರ ಸದರ್ಪುರ್ ಗ್ರಾಮದ ಕಾಶಿರಾಮ್ ಜಂಕ್ಷನ್ ಬಳಿ ಸುಶೀಲಾ ಎಂದು ಗುರುತಿಸಲ್ಪಟ್ಟ ಮಹಿಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಘಟನೆ ನಡೆದ ನಂತರ ಅಲ್ಲಿದ್ದವರು ಅಪಘಾತ ಮಾಡಿದ ಡ್ರೈವರ್ ಜೊತೆ ಜಗಳಕ್ಕಿಳಿದಿದ್ದಾರೆ. ಆಗ ಡ್ರೈವರ್ ಸ್ಥಳದಿಂದ ಪರಾರಿಯಾಗಿದ್ದಾನೆ. ತಕ್ಷಣ ಅಲ್ಲಿದ್ದ ಜನರೆಲ್ಲಾ ಒಟ್ಟಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಗಲಾಟೆ ಮಾಡುತ್ತಿರುವ ಜನರನ್ನು ಸಮಾಧಾನಪಡಿಸಿದ್ದಾರೆ.
ಇದನ್ನೂ ಓದಿ: ಎಣ್ಣೆ ಹೊಡೆಯುವಂತೆ ಪತಿಗೆ ಚಿತ್ರಹಿಂಸೆ ಕೊಟ್ಟ ಮಹಿಳೆ! ಪೊಲೀಸ್ ಠಾಣೆ ಮೆಟ್ಟಿಲೇರಿದ ಕೇಸ್
ಸ್ಥಳೀಯ ಪೊಲೀಸರ ಹೇಳಿಕೆಯ ಪ್ರಕಾರ, ವೇಗವಾಗಿ ಬಂದ ವಾಹನ ಡಿಕ್ಕಿ ಹೊಡೆದ ನಂತರ ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಅಲ್ಲಿ ಆಕೆ ಚಿಕಿತ್ಸೆಯ ಸಮಯದಲ್ಲಿ ಮೃತಪಟ್ಟಿದ್ದಾಳೆ. ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂಬುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಯನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ವರದಿಗಳು ತಿಳಿಸಿವೆ.