ಗ್ರಾಮಕ್ಕೆ ದೌಡಾಯಿಸಿ ಬಂದ ಗ್ರಾಮ ಪಂಚಾಯತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು
ಚಿಂತಾಮಣಿ: ತಾಲ್ಲೂಕಿನಾದ್ಯಂತ ಸುರಿದ ಭಾರಿ ಮಳೆಯಿಂದಾಗಿ ತಾಲೂಕಿನ ಕಸಬಾ ಹೋಬಳಿ ಆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಡ್ಡಬೊಮ್ಮನಹಳ್ಳಿ ಗ್ರಾಮದ ಸುಮಾರು ಮನೆಗಳಿಗೆ ನೀರು ಹಾಗೂ ಚರಂಡಿ ನೀರು ನುಗ್ಗಿ,ಗ್ರಾಮಸ್ಥರಿಗೆ ಪರದಾಡುವಂತಾಯಿತು!
ರಾತ್ರಿ ಬಿದ್ದ ಮಳೆಗೆ ಮನೆಗಳಿಗೆ ನುಗ್ಗಿದ ನೀರನ್ನು ಹೊರ ಹಾಕಲು ಹಾಗೂ ರಾತ್ರಿವಿಡೀ ನಿದ್ದೆ ಇಲ್ಲದಂತೆ ಗ್ರಾಮ ಸ್ಥರು ಹರಸಾಹಸಪಟ್ಟರು.
ಮಂಗಳವಾರ ಬೆಳಗ್ಗೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಮರಗಳು, ಮನೆಗಳ ಸಾಮಗ್ರಿಗಳು ರಸ್ತೆ ಮಧ್ಯದಲ್ಲಿ ಇಟ್ಟು ರಸ್ತೆ ತಡೆದು ಗ್ರಾಮಸ್ಥರು ಗ್ರಾಮ ಪಂಚಾಯತಿ ಅಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳ ವಿರುದ್ಧ ಧಿಕ್ಕಾರಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು.
ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಮಂಜುನಾಥ್ ಬಿಎಂ, ಮುಖಂಡರಾದ ವೆಂಕಟರೆಡ್ಡಿ, ವೇದಾವತಿ,ನೀಲಮ್ಮ,ಗ್ರಾಮದ ಎಲ್ಲಾ ಚರಂಡಿಗಳ ಕೊಳಚೆ ನೀರು ಮುಖ್ಯ ಕಾಲುವೆಗೆ ಹೋಗಿ ಅಲ್ಲಿಂದ ಹೊರಗೆ ಹೋಗುವ ಕಾಲುವೆ ಅವೈಜ್ಞಾನಿಕವಾಗಿದ್ದು ಅದರಲ್ಲಿ ಸರಾಗವಾಗಿ ನೀರು ಹೋಗಲು ಸಾದ್ಯವಾಗದೇ,ಹರಿಜನರು ವಾಸ ಮಾಡುವ ತಗ್ಗು ಪ್ರದೇಶಗಳಿಗೆ ನುಗ್ಗಿ ವಾಸದ ಮನೆಗಳು ಹಾಗೂ ಧನದ ಕೊಟ್ಟಿಗೆಗಳು,ದೇವಾಲಯಗಳ ಆವರಣಗಳಿಗೆ ನುಗ್ಗಿ ಗಲೀಜು ನೀರಿನಿಂದ ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು,ಮನೆಗಳಲ್ಲಿರುವ ದವಸ ಧಾನ್ಯ ಪಶು ಆಹಾರಗಳು ಗಲೀಜಾಗಿ ತುಂಬಾ ನಷ್ಟ ಅನುಭವಿಸುತ್ತಿದ್ದಾರೆ.
ಗಲೀಜು ನೀರಿನಲ್ಲಿರುವ ಕೀಟಗಳು ನಾನಾ ವಿಧದ ವಿಷಪೂರಿತ ಸರಿಸೃಪಗಳು ಮನೆಗಳಿಗೆ ನುಗ್ಗಿ ತೊಂದರೆ ನೀಡು ತ್ತಿದ್ದು,ಇದರ ಬಗ್ಗೆ ನಾವುಗಳು ಈಗಾಗಲೇ ಪಂಚಾಯ್ತಿ ಅಭಿವೃಧಿ ಅಧಿಕಾರಿಗಳು ಹಾಗೂ ಕಾರ್ಯ ನಿರ್ವಹಣಾಧಿ ಕಾರಿಗಳಿಗೆ ಲಿಖಿತ ಮೂಲಕ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
ಗ್ರಾಮದಿಂದ ನೀರು ಸರಾಗವಾಗಿ ಹೋಗಲು ಹಿಂದೆ ಕೆರೆ ಅಂಗಳಕ್ಕೆ ಎರಡು ಕಾಲುವೆಗಳು ಇದ್ದು,ಈ ಕಾಲುವೆಗಳನ್ನು ಕೆಲವರು ಒತ್ತುವರಿ ಮಾಡಿಕೊಂಡು ಕಾಲುವೆಗಳನ್ನು ಮುಚ್ಚಿಹಾಕಿದ್ದು ಅಧಿಕಾರಿಗಳು ಅವರಿಗೆ ಭಯ ಬಿದ್ದು, ಒತ್ತುವರಿ ಬಿಡಿಸದೆ.ಸಾರ್ವಜನಿಕರು ಓಡಾಡುವ ಮುಖ್ಯ ರಸ್ತೆ ಪಕ್ಕದಲ್ಲಿ ಗ್ರಾಮದಿಂದ ಎತ್ತರ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ಕಾಲುವೆ ನಿರ್ಮಾಣ ಮಾಡಿದ್ದು,ಅದರಲ್ಲಿ ನೀರು ಹೋಗಲು ಸಾಧ್ಯವಿಲ್ಲ ಈ ತೊಂದರೆಯಿAದ ನಮ್ಮ ಮನೆಗಳಿಗೆ ವಿಷಪೂರಿತ ಗಲೀಜು ನೀರು ನುಗ್ಗುತ್ತಿದ್ದು,ಸಾಂಕ್ರಾಮಿಕ ರೋಗಗಳು ಹರಡುವ ಬೀತಿ ಇದೆ ಎಂದು ಹೇಳಿದವರು ಸಾರ್ವಜನಿಕರ ಆರೋಗ್ಯದ ಹಿತ ದೃಷ್ಟಿಯಿಂದ ಮೊದಲು ಇದ್ದ ಕಾಲುವೆಗಳ ಒತ್ತುವರಿ ಬಿಡಿಸಿ ಅಲ್ಲಿಯೇ ಮುಖ್ಯ ಕಾಲುವೆ ನಿರ್ಮಾಣ ಮಾಡಿದರೆ ಸರಾಗವಾಗಿ ನೀರು ಕೆರೆ ಅಂಗಳಕ್ಕೆ ಹೋಗುತ್ತದೆ. ನಮಗೂ ಏನೂ ತೊಂದರೆ ಇರುವುದಿಲ್ಲ ಎಂದು ವಿವರಿಸಿದರು.
ಪ್ರತಿಭಟನೆಯ ಮಾಹಿತಿ ತಿಳಿದು ತಕ್ಷಣ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿ ಗಳು ಗ್ರಾಮಕ್ಕೆ ದೌಡಾಯಿಸಿ ಬಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹರೀಶ್ ಹಾಗೂ ಸಿಬ್ಬಂದಿ ಗ್ರಾಮಸ್ಥರ ಸಮಸ್ಯೆಗಳನ್ನು ಕೇಳಿ ಕ್ಷಣಾರ್ಧದಲ್ಲಿ ಕೆರೆ ಕಾಲುವೆ ಒತ್ತುವರಿ ಮಾಡಿಕೊಂಡಿದ್ದ ಸ್ಥಳವನ್ನು ಜೆಸಿಬಿ ಮುಖಾಂತರ ಸ್ವಚ್ಛತೆ ಮಾಡಿ ಕೊಳಚೆ ಹಾಗೂ ಮಳೆ ನೀರು ಸರಾಗವಾಗಿ ಹರಿಯಲು ಅನುಕೂಲ ಮಾಡಿಕೊಟ್ಟ ನಂತರ ಗ್ರಾಮಸ್ಥರು ರಸ್ತೆಗೆ ಅಡ್ಡಲಾಗಿ ಹಾಕಿದ್ದ ಮರ,ಹಾಗೂ ಮನೆಗಳ ಸಾಮಗ್ರಿಗಳನ್ನು ತೆಗೆಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.
ಪ್ರತಿಭಟನೆಯಲ್ಲಿ ರೂಪಮ್ಮ, ನಾಗೇಶ್, ಸುಶೀಲಮ್ಮ, ಮುನಿವೆಂಕಟಸ್ವಾಮಿ, ಕೃಷ್ಣಪ್ಪ, ವೀರಭದ್ರ, ಬಾಬು, ಗಂಗಮ್ಮ, ಸೇರಿದಂತೆ ಮತ್ತಿತರರು ಇದ್ದರು.
ಇದನ್ನೂ ಓದಿ: Chikkaballapur: ಸೋರುತ್ತಿರುವ ಅಂಗನವಾಡಿ ಕೇಂದ್ರ; ಆತಂಕದಲ್ಲಿ ಮಕ್ಕಳು