ಯಾವಾಗಲೂ ಮೊಬೈಲ್‍ನಲ್ಲಿ ಪೋರ್ನ್ ವಿಡಿಯೊ ನೋಡುವ ಚಟವಿರುವ ಮಹಿಳೆಯೊಬ್ಬಳು ಪತಿಯ ಬಳಿ ಪ್ರತಿ ರಾತ್ರಿ ತನ್ನೊಂದಿಗೆ ಮೂರು ಬಾರಿ 10ರಿಂದ 15 ನಿಮಿಷಗಳ ಕಾಲ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿದ್ದಾಳಂತೆ. ಇದಕ್ಕೆ ಒಪ್ಪದ ಪತಿಯನ್ನು ನಪುಂಸಕ ಎಂದು ಹೀಯಾಳಿಸುತ್ತಾಳಂತೆ. ಪತ್ನಿಯ ಕಾಟಕ್ಕೆ ಬೇಸತ್ತಿರುವ ಪತಿಯು ಪಂಜಾಬ್ ಹರಿಯಾಣ ಹೈಕೋರ್ಟ್‍ಗೆ ವಿಚ್ಛೇದನದ ಅರ್ಜಿ(Divorce Case) ಸಲ್ಲಿಸಿದ್ದಾನೆ!
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಸುಧೀರ್ ಸಿಂಗ್ ಮತ್ತು ನ್ಯಾಯಮೂರ್ತಿ ಜಸ್ಜಿತ್ ಸಿಂಗ್ ಬೇಡಿ ಅವರ ನ್ಯಾಯಪೀಠವು ವಿಚ್ಛೇದನ ಪ್ರಕರಣದ ವಿಚಾರಣೆ ನಡೆಸಿದೆ. ಹಾಗೂ ಈಗ ಈ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹೆಂಡತಿ ತನ್ನ ಗಂಡನನ್ನು ನಪುಂಸಕ ಎಂದು ಕರೆದರೆ ಅದು ಮಾನಸಿಕ ಕ್ರೌರ್ಯಕ್ಕೆ ಸಮನಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಇದಕ್ಕೂ ಮುನ್ನ ಜುಲೈ 12 ರಂದು ಕೌಟುಂಬಿಕ ನ್ಯಾಯಾಲಯವು ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿತ್ತು. ಮಹಿಳೆಯ ಅತ್ತೆ “ಸೊಸೆ ನನ್ನ ಮಗನನ್ನು ನಪುಂಸಕ” ಎಂದು ಕರೆದಿದ್ದಾಳೆ ಎಂದು ಆರೋಪಿಸಿದ್ದರು. ಗಂಡನನ್ನು ನಪುಂಸಕ ಎಂದು ಕರೆಯುವುದು ಅಥವಾ ಅವಳು ನಪುಂಸಕನಿಗೆ ಜನ್ಮ ನೀಡಿದ್ದಾಳೆ ಎಂದು ತಾಯಿಗೆ ಹೇಳುವುದು ಕ್ರೂರವಾದದ್ದು ಎಂದು ನ್ಯಾಯಾಲಯ ಹೇಳಿದೆ. ಅದೇ ಸಮಯದಲ್ಲಿ, ಪತಿ ಮತ್ತು ಅತ್ತೆಯ ಹೇಳಿಕೆಯನ್ನು ಕುಟುಂಬ ನ್ಯಾಯಾಲಯವು ಒಪ್ಪಿಕೊಂಡು, ಪತಿಯ ಪರವಾಗಿ ತೀರ್ಪು ನೀಡಿತ್ತು. ಹಾಗಾಗಿ ಪತ್ನಿ ಹೈಕೊರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದಾಳೆ.
ಇದನ್ನೂ ಓದಿ: ಅಬ್ಬಬ್ಬಾ ಭೀಕರ ಅಪಘಾತ; ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಪಿಕ್‌ಅಪ್ ಟ್ರಕ್
ಈಗ ಪಂಜಾಬ್ ಹರಿಯಾಣ ಹೈಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸಿ ಕಳೆದ 6 ವರ್ಷಗಳಿಂದ ಗಂಡ ಮತ್ತು ಹೆಂಡತಿ ಪ್ರತ್ಯೇಕವಾಗಿ ವಾಸಿಸುತ್ತಿರುವ ಕಾರಣ ಅವರನ್ನು ಒಂದಾಗಿಸುವುದು ಅಸಾಧ್ಯ. ಅಂತಹ ಪರಿಸ್ಥಿತಿಯಲ್ಲಿ, ಹೆಂಡತಿಯ ಮೇಲ್ಮನವಿಯನ್ನು ವಜಾಗೊಳಿಸಲಾಗುತ್ತದೆ ಮತ್ತು ಕುಟುಂಬ ನ್ಯಾಯಾಲಯದ ನಿರ್ಧಾರವನ್ನು ಎತ್ತಿಹಿಡಿಯಲಾಗುತ್ತದೆ ಎಂದು ಹೈಕೋರ್ಟ್ ತಿಳಿಸಿದೆ.