ಉತ್ತಮ ಆರೋಗ್ಯಕ್ಕಾಗಿ ನೀವು ಆರೋಗ್ಯಕರವಾದ(Health Tips) ಆಹಾರ ಸೇವಿಸಿದರೆ ಸಾಕಾಗುವುದಿಲ್ಲ. ಜೊತೆಗೆ ಊಟ ಮಾಡಿದ ನಂತರ ಯಾವ ಕೆಲಸ ಮಾಡಿದರೆ ಜೀರ್ಣಕ್ರಿಯೆಗೆ ಒಳ್ಳೆಯದು ಎಂಬುದು ಗೊತ್ತಿರಬೇಕು. ಇಲ್ಲವಾದರೆ ನೀವು ಆರೋಗ್ಯಕರವಾದ ಆಹಾರ ಸೇವಿಸಿದರೂ ಕೂಡ ಅದರಿಂದ ಅನಾರೋಗ್ಯ ಸಮಸ್ಯೆ ಕಾಡುತ್ತದೆ. ಜೀರ್ಣಕ್ರಿಯೆಯನ್ನು ಕಾಪಾಡಿಕೊಳ್ಳಲು ಏನು ಮತ್ತು ಎಷ್ಟು ತಿನ್ನಬೇಕು ಎಂದು ತಿಳಿದುಕೊಳ್ಳುವುದು ಅತ್ಯಗತ್ಯ. ಹಾಗಾಗಿ ಪೌಷ್ಟಿಕತಜ್ಞರಾದ ಪೂಜಾ ಮಲ್ಹೋತ್ರಾ ಊಟದ ನಂತರ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ವಿವರಿಸುವ ವಿಡಿಯೊವನ್ನು ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಊಟದ ನಂತರ ಈ ಕೆಲಸಗಳನ್ನು ಮಾಡಬೇಡಿ:
ಚಹಾ ಅಥವಾ ಕಾಫಿ ಸೇವಿಸುವುದು ನಿಮ್ಮ ದೇಹಕ್ಕೆ ಹಾನಿಕಾರಕವಾಗಿದೆ. ಇವುಗಳಲ್ಲಿ ಕೆಫೀನ್ ಅಂಶವಿರುವುದರಿಂದ ಇವು ದೇಹಕ್ಕೆ ಪೋಷಕಾಂಶಗಳು ಸಿಗದಂತೆ ತಡೆಯುತ್ತವೆ. ಇದರಿಂದ ದೇಹದಲ್ಲಿ ಪೌಷ್ಟಿಕಾಂಶದ ಕೊರತೆ ಸಮಸ್ಯೆ ಕಾಡುತ್ತದೆ.
ಊಟದ ನಂತರವೂ, ಮದ್ಯಪಾನ, ಧೂಮಪಾನವನ್ನು ತಪ್ಪಿಸಬೇಕು. ಇದು ದೇಹಕ್ಕೆ ಆಹಾರದಲ್ಲಿರುವ ಪೋಷಕಾಂಶಗಳನ್ನು ಹೀರಿಕೊಳ್ಳಲು ಅಡ್ಡಿಪಡಿಸುತ್ತದೆ. ಇದರಿಂದ ದೇಹ ದುರ್ಬಲವಾಗುತ್ತದೆ.
ಊಟದ ನಂತರ ತಕ್ಷಣ ಹೋಗಿ ನಿದ್ರೆ ಮಾಡಬೇಡಿ. ಇದು ದೇಹದಲ್ಲಿ ಬೊಜ್ಜು ಹೆಚ್ಚಾಗಲು ಕಾರಣವಾಗುತ್ತದೆ. ಇದರಿಂದ ನಿಮ್ಮ ದೇಹದ ತೂಕ ಹೆಚ್ಚಾಗುತ್ತದೆ.
ಊಟವಾದ ನಂತರ ಹಣ್ಣುಗಳನ್ನು ತಿನ್ನಬೇಡಿ. ಇದು ಜೀರ್ಣಕ್ರಿಯೆಯಗೆ ಅಡ್ಡಿಪಡಿಸುತ್ತದೆ. ಇದು ಹೊಟ್ಟೆಯ ಸಮಸ್ಯೆಗೆ ಕಾರಣವಾಗಬಹುದು.
ಹಾಗೇ ಊಟವಾದ ತಕ್ಷಣ ದೀರ್ಘಕಾಲ ಕುಳಿತುಕೊಂಡೇ ಇರಬೇಡಿ. ಇದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ಹಾಗಾಗಿ ಸ್ವಲ್ಪ ವಾಕಿಂಗ್ ಮಾಡಿ.
ಊಟದ ನಂತರ ಏನು ಮಾಡಬೇಕು :
ಊಟದ 15-30 ನಿಮಿಷಗಳ ನಂತರ ನೀವು ಸ್ವಲ್ಪ ಗಿಡಮೂಲಿಕೆ ಚಹಾವನ್ನು ಸಹ ಸೇವಿಸಬಹುದು, ಏಕೆಂದರೆ ಅವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ ಎಂದು ಪೂಜಾ ಮಲ್ಹೋತ್ರಾ ಹೇಳುತ್ತಾರೆ.
ಊಟವಾದ ನಂತರ ಸುಮಾರು 10 ನಿಮಿಷಗಳ ಕಾಲ ನಿಮ್ಮ ಮನೆಯ ಸುತ್ತಮುತ್ತ ಸ್ವಲ್ಪ ಹೊತ್ತು ತಿರುಗಾಡಿ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ಇದನ್ನೂ ಓದಿ: ಭತ್ತದ ಗದ್ದೆಯಲ್ಲಿ10 ಅಡಿ ಉದ್ದದ ಹೆಬ್ಬಾವು; ರೈತರು ಮಾಡಿದ್ದೇನು? ವಿಡಿಯೊ ನೋಡಿ
ಊಟವಾದ ತಕ್ಷಣ ಹಾನಿಕಾರಕವಾದ ಯಾವುದೇ ಕೆಲಸ ಮಾಡುತ್ತಿದ್ದರೆ ಅದನ್ನು ಇಂದೇ ಬಿಟ್ಟುಬಿಡಿ. ಉತ್ತಮವಾದ ಸಲಹೆಗಳನ್ನು ಪಾಲಿಸುವ ಮೂಲಕ ಉತ್ತಮವಾದ ಆರೋಗ್ಯವನ್ನು ಹೊಂದಿರಿ.