Thursday, 24th October 2024

Bone Health: ಮೂಳೆ ಆರೋಗ್ಯಕರವಾಗಿರಬೇಕೆಂದರೆ ಈ ಜೀವಸತ್ವಗಳನ್ನು ತಪ್ಪದೇ ಸೇವಿಸಿ!

Bone Health

ವಯಸ್ಸಾದಂತೆ, ಮೂಳೆ ದುರ್ಬಲವಾಗುತ್ತದೆ. ಇದರಿಂದ ನಡೆಯಲು, ಓಡಾಡಲು ಕಷ್ಟವಾಗುತ್ತದೆ. ಮೂಳೆಗಳನ್ನು ಬಲಗೊಳಿಸಲು ಆಹಾರಗಳು ಬಹಳ ಮುಖ್ಯ.  ಹಾಗಾಗಿ ಮೂಳೆಗಳನ್ನು(Bone Health) ಗಟ್ಟಿಗೊಳಿಸುವಂತಹ ಆಹಾರಗಳನ್ನು ಸೇವಿಸಬೇಕು. ಇದರಿಂದ ಮೂಳೆಗಳ ಸಮಸ್ಯೆ ಕಾಡುವುದಿಲ್ಲ. ಮೂಳೆಗಳ ಆರೋಗ್ಯಕ್ಕೆ ಯಾವ ವಿಟಮಿನ್ ಅಗತ್ಯ? ಅದು ಯಾವ ಆಹಾರದಲ್ಲಿ ದೊರೆಯುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

ವಿಟಮಿನ್ ಡಿ
ವಿಟಮಿನ್ ಡಿ ದೇಹವು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಕ್ಯಾಲ್ಸಿಯಂ ಮೂಳೆಗಳ ಬೆಳವಣಿಗೆಗೆ ಅಗತ್ಯವಾಗಿಬೇಕು. ಸಾಕಷ್ಟು ವಿಟಮಿನ್ ಡಿ ಸಿಗದಿದ್ದರೆ ಮೂಳೆಗಳು ದುರ್ಬಲವಾಗಬಹುದು. ಇದರಿಂದ ಮೂಳೆ ಮುರಿತ ಉಂಟಾಗಬಹುದು. ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ವಿಟಮಿನ್ ಡಿ ಯನ್ನು ಪಡೆಯುವ  ನೈಸರ್ಗಿಕ ವಿಧಾನವಾಗಿದೆ.  ಮತ್ತು  ಕೊಬ್ಬಿನ ಮೀನುಗಳಲ್ಲಿ ಇದು ಕಂಡುಬರುತ್ತದೆ.

ವಿಟಮಿನ್ ಕೆ
ವಿಟಮಿನ್ ಕೆ ಕ್ಯಾಲ್ಸಿಯಂ ಅನ್ನು ಮೂಳೆಗಳು ಹೀರಿಕೊಳ್ಳಲು ಸಹಾಯ ಮಾಡುತ್ತದೆ, ಅವುಗಳನ್ನು ಬಲಪಡಿಸುತ್ತದೆ. ಪಾಲಕ್ ಹಾಗೂ ಇತರ ಸೊಪ್ಪುಗಳಲ್ಲಿ ವಿಟಮಿನ್ ಕೆ ಸಮೃದ್ಧವಾಗಿದೆ.

ವಿಟಮಿನ್ ಸಿ
ಕಾಲಜನ್ ಉತ್ಪಾದನೆಗೆ ವಿಟಮಿನ್ ಸಿ ಅತ್ಯಗತ್ಯ. ಇದು  ಮೂಳೆ ಕೋಶಗಳನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತದೆ. ಹೆಚ್ಚುವರಿಯಾಗಿ, ವಿಟಮಿನ್ ಸಿ ಮೂಳೆ ಅಂಗಾಂಶಗಳ ದುರಸ್ತಿ ಮತ್ತು ಬೆಳವಣಿಗೆಯನ್ನು ಬೆಂಬಲಿಸುತ್ತದೆ. ಸಿಟ್ರಸ್ ಹಣ್ಣುಗಳು, ಬೆರಿ ಹಣ್ಣುಗಳು ಮತ್ತು ಕ್ಯಾಪ್ಸಿಕಂನಲ್ಲಿ  ಈ ವಿಟಮಿನ್ ಸಿ ಸಮೃದ್ಧವಾಗಿದೆ.

ವಿಟಮಿನ್ ಎ
ವಿಟಮಿನ್ ಎ ಮೂಳೆಯ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಆದರೆ ಇದನ್ನು ಸಮ ಪ್ರಮಾಣದಲ್ಲಿ ಸೇವಿಸಬೇಕು. ಏಕೆಂದರೆ ಇದರ ಕೊರತೆಯಾದರೆ ಹಾಗೂ ಹೆಚ್ಚಾದರೆ ಎರಡೂ ಮೂಳೆಯ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತವೆ. ಇದನ್ನು ಸಿಹಿ ಗೆಣಸು, ಕ್ಯಾರೆಟ್‌ನಂತಹ ಆಹಾರಗಳಲ್ಲಿ ಸಮೃದ್ಧವಾಗಿದೆ.

ವಿಟಮಿನ್ ಬಿ 6
ವಿಟಮಿನ್ ಬಿ 6 ಕಾಲಜನ್ ರಚನೆಯನ್ನು ಹೆಚ್ಚಿಸುತ್ತದೆ. ಮತ್ತು ಇದು ಮೂಳೆ ರಚನೆಗೆ ಬೇಕಾದ ಅಮೈನೋ ಆಮ್ಲಗಳನ್ನು ಒದಗಿಸುತ್ತದೆ. ಅಲ್ಲದೇ ಇದು ಹೆಚ್ಚಾದಾಗ, ದುರ್ಬಲ ಮೂಳೆಗಳಿಗೆ ಕಾರಣವಾಗಬಹುದು. ಹಾಗಾಗಿ ಮಿತವಾಗಿ ಸೇವಿಸಿ. ಕಡಲೆ, ಬಾಳೆಹಣ್ಣು ಮತ್ತು ಚಿಕನ್‌ಗಳಲ್ಲಿ ವಿಟಮಿನ್ ಬಿ 6 ಹೇರಳವಾಗಿದೆ.

ವಿಟಮಿನ್ ಬಿ 12
ಸರಿಯಾದ ಮೂಳೆ ಸಾಂದ್ರತೆಯನ್ನು ಕಾಪಾಡಿಕೊಳ್ಳಲು ವಿಟಮಿನ್ ಬಿ 12 ಅವಶ್ಯಕ. ವಿಶೇಷವಾಗಿ ವಯಸ್ಸಾದವರಲ್ಲಿ ಬಿ 12 ನಲ್ಲಿ ಕೊರತೆಯು ಕಂಡುಬರುತ್ತದೆ. ಮಾಂಸ, ಡೈರಿ ಮತ್ತು ಮೊಟ್ಟೆಗಳಂತಹ ಪ್ರಾಣಿ ಉತ್ಪನ್ನಗಳಲ್ಲಿ ವಿಟಮಿನ್ ಬಿ 12 ಸಮೃದ್ಧವಾಗಿವೆ, ಇದು ಮೂಳೆಯ ಆರೋಗ್ಯಕ್ಕೆ ಉತ್ತಮವಾಗಿದೆ.

ಫೋಲೇಟ್ (ವಿಟಮಿನ್ ಬಿ 9)
ಫೋಲೇಟ್ ಬಲವಾದ ಮತ್ತು ಆರೋಗ್ಯಕರ ಮೂಳೆಗಳನ್ನು ಕಾಪಾಡಿಕೊಳ್ಳಲು ಅಗತ್ಯವಾಗಿದೆ.  ಇದು ಮೂಳೆಯ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವಂತಹ ಹೋಮೋಸಿಸ್ಟೈನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಫೋಲೇಟ್ ಸಮೃದ್ಧ ಆಹಾರಗಳಲ್ಲಿ ಸೊಪ್ಪುಗಳು, ದ್ವಿದಳ ಧಾನ್ಯಗಳು ಸೇರಿವೆ.

ವಿಟಮಿನ್ ಇ
ವಿಟಮಿನ್ ಇ ಮೂಳೆ ಕೋಶಗಳನ್ನು ಹಾನಿಯಿಂದ ರಕ್ಷಿಸುವ ಆ್ಯಂಟಿ ಆಕ್ಸಿಡೆಂಟ್‍ಗಳಾಗಿ ಕಾರ್ಯನಿರ್ವಹಿಸುತ್ತದೆ. ಇದು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಬೀಜಗಳು, ಧಾನ್ಯಗಳು ಮತ್ತು ವೆಜಿಟೇಬಲ್ ಆಯಿಲ್‍ನಲ್ಲಿ  ವಿಟಮಿನ್ ಇ ಸಮೃದ್ಧವಾಗಿದೆ.

ಇದನ್ನೂ ಓದಿ: ನಿಮ್ಮ ಥೈರಾಯ್ಡ್ ಹಾರ್ಮೋನುಗಳನ್ನು ಸಮತೋಲನಗೊಳಿಸಲು ಈ ಆಹಾರ ಸೇವಿಸಿ

ನಿಮ್ಮ ಮೂಳೆಯ ಆರೋಗ್ಯವನ್ನು ಹೆಚ್ಚಿಸಲು ಈ ಜೀವಸತ್ವಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ. ಇದರಿಂದ ನಿಮಗೆ ವೃದ್ಧಾಪ್ಯದಲ್ಲಿ ಮೂಳೆಗಳ ಸಮಸ್ಯೆ ಕಾಡುವುದಿಲ್ಲ.