ಬೆಂಗಳೂರು: ಐಸಿಸಿ ಟೆಸ್ಟ್ ಬ್ಯಾಟರ್‌ಗಳ ರ್ಯಾಂಕಿಂಗ್‌ನಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್ (Rishabh Pant) ಬುಧವಾರ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಆರನೇ ಸ್ಥಾನಕ್ಕೇರಿದ್ದಾರೆ. . ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ 99 ರನ್ ಗಳಿಸಿದ್ದಾರೆ . ಹೀಗಾಗಿ ರ್ಯಾಂಕಿಂಗ್‌ನಲ್ಲಿ ಮೂರು ಸ್ಥಾನ ಏರಿಕೆ ಕಂಡಿದ್ದಾರೆ. ಬೆಂಗಳೂರಿನಲ್ಲಿ 70 ರನ್ ಗಳಿಸಿದ್ದ ಕೊಹ್ಲಿ ಒಂದು ಸ್ಥಾನ ಕುಸಿದು ಎಂಟನೇ ಸ್ಥಾನಕ್ಕೆ ಇಳಿದಿದ್ದಾರೆ. ಬ್ಯಾಟರ್ ಯಶಸ್ವಿ ಜೈಸ್ವಾಲ್ ಭಾರತದ ನಾಲ್ಕನೇ ಶ್ರೇಯಾಂಕದ ಬ್ಯಾಟರ್ ಆಗಿ ಉಳಿದಿದ್ದಾರೆ. ಭಾರತದ ನಾಯಕ ರೋಹಿತ್ ಶರ್ಮಾ ಎರಡು ಸ್ಥಾನ ಕಳೆದುಕೊಂಡು ಶ್ರೀಲಂಕಾದ ದಿಮುತ್ ಕರುಣಾರತ್ನೆ ಅವರೊಂದಿಗೆ ಜಂಟಿ 15ನೇ ಸ್ಥಾನದಲ್ಲಿದ್ದಾರೆ.
ಇಂಗ್ಲೆಂಡ್ ಸ್ಟಾರ್ ಬ್ಯಾಟ್ಸ್ಮನ್ ಜೋ ರೂಟ್ ಅಗ್ರಸ್ಥಾನದಲ್ಲಿದ್ದು, ಭರ್ಜರಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಬೌಲರ್‌ಗಳ ವಿಭಾಗದಲ್ಲಿ ನ್ಯೂಜಿಲೆಂಡ್‌ನ ರಚಿನ್ ರವೀಂದ್ರ (36ಸ್ಥಾನ ಮೇಲೇರಿ 18ನೇ ಸ್ಥಾನ) ಮತ್ತು ಡೆವೊನ್ ಕಾನ್ವೇ (12 ಸ್ಥಾನ ಮೇಲೇರಿ 36ನೇ ಸ್ಥಾನ) ಉತ್ತಮ ಸಾಧನೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಭಾರತ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡ 8 ವಿಕೆಟ್ ಗೆಲುವು ಪಡೆದರೆ, ಸಹ ಆಟಗಾರ ವಿಲ್ ಒ’ರೂರ್ಕ್ (2 ಸ್ಥಾನ ಮೇಲೇರಿ 39ನೇ ಸ್ಥಾನ) ಇದೇ ಪಂದ್ಯದಲ್ಲಿ ಏಳು ವಿಕೆಟ್ ಕಬಳಿಸಿದ್ದರು.
ಇದನ್ನೂ ಓದಿ: Rishabh Pant : ನ್ಯೂಜಿಲ್ಯಾಂಡ್ ಸರಣಿಗೆ ಮೊದಲು ಗಲ್ಲಿ ಕ್ರಿಕೆಟ್ ಆಡಿದ ರಿಷಭ್ ಪಂತ್
ಇಂಗ್ಲೆಂಡ್ ವಿರುದ್ಧದ ಎರಡು ಇನಿಂಗ್ಸ್‌ನಲ್ಲಿ 11 ವಿಕೆಟ್ ಪಡೆದ ಪಾಕಿಸ್ತಾನದ ಸ್ಪಿನ್ನರ್ ನೋಮನ್ ಅಲಿ ಶ್ರೇಯಾಂಕದಲ್ಲಿ ಮತ್ತೆ 17 ನೇ ಸ್ಥಾನದಲ್ಲಿದ್ದಾರೆ. ಸಹ ಆಟಗಾರ ಸಾಜಿದ್ ಖಾನ್ 22 ಸ್ಥಾನಗಳ ಏರಿಕೆ ಕಂಡು 50ನೇ ಸ್ಥಾನಕ್ಕೆ ತಲುಪಿದ್ದಾರೆ.
ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ ಭಾರತದ ವೇಗದ ಬೌಲರ್ ಆರ್.ಅಶ್ವಿನ್ ಅಗ್ರಸ್ಥಾನದಲ್ಲಿದ್ದಾರೆ. ಏಳನೇ ಸ್ಥಾನವನ್ನು ಉಳಿಸಿಕೊಂಡಿರುವ ರವೀಂದ್ರ ಜಡೇಜಾ ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ.