ಕಾಬೂಲ್: ಅಫ್ಘಾನಿಸ್ತಾನದ ಕಾಬೂಲ್ ಮೇಲೆ ಶನಿವಾರ ನಡೆದ ರಾಕೆಟ್ ದಾಳಿಯಲ್ಲಿ ಕನಿಷ್ಠ ಎಂಟು ಮಂದಿ ಮೃತಪಟ್ಟಿದ್ದಾರೆ.
ಉಗ್ರರು ಕಾಬೂಲ್ ನಗರದ ಮೇಲೆ ಸುಮಾರು 23 ರಾಕೆಟ್‌ಗಳನ್ನು ಉಡಾಯಿಸಿ ದ್ದಾರೆ. ಮೂಲಗಳ ಪ್ರಕಾರ ಎಂಟು ಮಂದಿ ಜೀವ ಕಳೆದುಕೊಂಡಿದ್ದಾರೆ. 31 ಮಂದಿ ಗಾಯಗೊಂಡಿದ್ದಾರೆ’ ಎಂದು ಆಂತರಿಕ ಸಚಿವಾಲಯದ ವಕ್ತಾರ ತಿಳಿಸಿದ್ದಾರೆ.
ಕೇಂದ್ರ ಮತ್ತು ಉತ್ತರ ಕಾಬೂಲ್‌ನ ವಿವಿಧ ಭಾಗಗಳಲ್ಲಿ ರಾಕೆಟ್ ದಾಳಿ ನಡೆದಿದೆ. ರಾಯಭಾರಿಗಳ ನಿವಾಸಗಳು ಮತ್ತು ಅಂತಾ ರಾಷ್ಟ್ರೀಯ ಕಂಪೆನಿ ಗಳಿರುವ ಗ್ರೀನ್ ಝೋನ್‌ನ ಭಾರಿ ಭದ್ರತೆಯ ಸ್ಥಳಗಳ ಮೇಲೆಯೂ ರಾಕೆಟ್ ಹಾರಿಸಲಾಗಿದೆ.
ದಾಳಿಯಿಂದ ಅನೇಕ ಕಟ್ಟಡಗಳ ಗೋಡೆ ಹಾಗೂ ಕಿಟಕಿಗಳಿಗೆ ಹಾನಿಯಾಗಿರುವ ವಿಡಿಯೋ ಮತ್ತು ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ತಾಲಿಬಾನ್ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದೆ.
ಕಳೆದ ಕೆಲವು ವಾರಗಳಲ್ಲಿ ಕಾಬೂಲ್‌ನ ಶಿಕ್ಷಣ ಸಂಸ್ಥೆಗಳ ಮೇಲೆ ಎರಡು ನಡೆದ ಭೀಕರ ದಾಳಿಗಳಲ್ಲಿ ಸುಮಾರು 50 ಮಂದಿ ಬಲಿಯಾಗಿದ್ದಾರೆ.