Saturday, 23rd November 2024

Huligemma Temple : ಇತಿಹಾಸ ಪ್ರಸಿದ್ಧ ಹುಲಿಗೆಮ್ಮ ದೇಗುಲದಲ್ಲಿ ಹುಂಡಿ ಎಣಿಕೆ: ಭರ್ಜರಿ ಕಾಣಿಕೆ ಸಂಗ್ರಹ

Huligemma Temple

ಕೊಪ್ಪಳ: ಇತಿಹಾಸ ಪ್ರಸಿದ್ಧ ಹುಲಿಗೆಮ್ಮ ದೇವಸ್ಥಾನದಲ್ಲಿ (Huligemma Temple) ಹುಂಡಿಗೆ ಬಿದ್ದಿರುವ ಕಾಣಿಕೆಗಳ ಎಣಿಕೆ ನಡೆಯುತ್ತಿದೆ. ಕಳೆದ 55 ದಿನಗಳಲ್ಲಿ 1.12 ಕೋಟಿ ರೂಪಾಯಿ ಸಂಗ್ರಹಗೊಂಡಿದೆ. ಅದೇ ರೀತಿ 134 ಗ್ರಾಂ ಚಿನ್ನಾಭರಣ, ಹತ್ತು ಕಿಲೋ ಬೆಳ್ಳಿ ಆಭರಣಗಳು ದೇವಿಗೆ ಕಾಣಿಕೆ ರೂಪದಲ್ಲಿ ಬಿದ್ದಿದೆ. ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದಲ್ಲಿ ನೆಲೆಸಿರುವ ಹುಲಿಗೆಮ್ಮನಿಗೆ ರಾಜ್ಯಾದ್ಯಂತ ಕೋಟ್ಯಂತರ ಭಕ್ತರಿದ್ದಾರೆ.

ದೇವಸ್ಥಾನಕ್ಕೆ ಬಂದ ಹಣ, ಚಿನ್ನಾಭರಣ ಎಣಿಕೆ ಕಾರ್ಯ ಬುಧವಾರ ರಾತ್ರಿ ತನಕ ದೇವಸ್ಥಾನದ ಆವರಣದಲ್ಲಿ ನಡೆಯಿತು. ಅರಗು, ಹರಳು ಮುತ್ತು ಸೇರಿದಂ ತೆ 134 ಗ್ರಾಂ ಚಿನ್ನ, 10 ಕೆ.ಜಿ. ಕಚ್ಚಾ ಬೆಳ್ಳಿ ಭಕ್ತರಿಂದ ದೇವಸ್ಥಾನಕ್ಕೆ ಬಂದಿದೆ. ಆ. 28ರಂದು ಕೊನೆಯ ಬಾರಿಗೆ ಹುಂಡಿ ತೆರೆಯಲಾಗಿತ್ತು. ಅಂದಿನಿಂದ ಅಕ್ಟೋಬರ್ 22ರ ತನಕದ ಅವಧಿಯಲ್ಲಿ ದಸರಾ ಹಬ್ಬವೂ ಇದ್ದಿದ್ದರಿಂದ ಪ್ರತಿ ದಿನ ರಾಜ್ಯ ಹಾಗೂ ಹೊರರಾಜ್ಯಗಳ ಲಕ್ಷಾಂತರ ಭಕ್ತರು ದೇ ವಸ್ಥಾನಕ್ಕೆ ಭೇಟಿ ನೀಡಿದ್ದರು.

ಇದನ್ನೂ ಓದಿ: Faith: ರಾಜೇಂದ್ರ ಭಟ್‌ ಅಂಕಣ: ದೇವರ ನಂಬಿಕೆಯು ದೊಡ್ಡದಾ? ವಿಜ್ಞಾನದ ಸಿದ್ಧಾಂತಗಳು ದೊಡ್ಡದಾ?

ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಹುಣ್ಣಿಮೆ ದಿನಗಳಂದು ಲಕ್ಷಾಂತರ ಭಕ್ತರು ಹುಲಿಗಿಗೆ ಬರುವುದು ಸಾಮಾನ್ಯ. ಬಸ್‌ನಲ್ಲಿ ಉಚಿತ ಪ್ರಯಾಣದ ‘ಶಕ್ತಿ ಯೋಜನೆ’ ಜಾರಿಯಾದ ಬಳಿಕ ಮಹಿಳಾ ಭಕ್ತರು ಕೂಡ ದೇವಸ್ಥಾನಕ್ಕೆ ಬರುವುದು ಹೆಚ್ಚಾಗಿದೆ. ಧಾರ್ಮಿ ಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿರುವ ದೇ ವಾಲಯದ ಆದಾಯವೂ
ಹೆಚ್ಚಾಗುತ್ತಲೇ ಇದೆ.