Sunday, 24th November 2024

Viral Video: ಇಂಡಿಯಾ ಗೇಟ್‌ ಬಳಿ ರೀಲ್ಸ್ ಮಾಡುತ್ತಾ ರಷ್ಯಾದ ಯುವತಿಗೆ ಕಿರುಕುಳ; ಯುವಕನ ವರ್ತನೆಗೆ ಆಕ್ರೋಶ

Viral Video

ನವದೆಹಲಿ: ಭಾರತದಲ್ಲಿ ಅನೇಕ ಪ್ರಸಿದ್ಧ ಪ್ರವಾಸಿ ತಾಣಗಳಿದ್ದು, ಸಾವಿರಾರು ವಿದೇಶಿ ಪ್ರವಾಸಿಗರನ್ನು ಸೆಳೆಯುತ್ತವೆ. ಇನ್ನು ಭಾರತದಲ್ಲಿ ಅತಿಥಿಗಳನ್ನು ದೇವರಂತೆ ಪರಿಗಣಿಸುವ ನಂಬಿಕೆ ಇದೆ. ಆದರೆ ದೆಹಲಿಯ ಇಂಡಿಯಾ ಗೇಟ್‍ ಬಳಿ ವ್ಯಕ್ತಿಯೊಬ್ಬ ರಷ್ಯಾ ಪ್ರವಾಸಿ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ್ದಾನೆ. ಈ ಘಟನೆಗೆ ಸಂಬಂಧಪಟ್ಟ ವಿಡಿಯೊ  ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದ್ದು, ಇದು  ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ವೈರಲ್ ಆಗಿರುವ ವಿಡಿಯೊದಲ್ಲಿ ವ್ಯಕ್ತಿಯೊಬ್ಬ ವಿದೇಶಿ ಮಹಿಳೆಯೊಬ್ಬರಿಗೆ ತೊಂದರೆ ನೀಡಿದ್ದಾನೆ. ಮಹಿಳೆಗೆ ಇಷ್ಟವಿಲ್ಲದಿದ್ದರೂ ತನ್ನ ಜೊತೆ ನೃತ್ಯ ಮಾಡುವಂತೆ ಅವರನ್ನು ಒತ್ತಾಯಿಸಿದ್ದಾನೆ. ಆಗ ಯಾರೋ ಇದನ್ನು ವಿಡಿಯೊ ಮಾಡಿದ್ದಾರೆ. ಕಿರುಕುಳ ನೀಡಿದವ ಸಚಿನ್ ರಾಜ್ ಎಂಬಾತ ಎಂಬುದಾಗಿ ತಿಳಿದುಬಂದಿದೆ.  ವ್ಯಕ್ತಿಯ ಈ ವರ್ತನೆಯಿಂದ ಪ್ರವಾಸಿ ಮಹಿಳೆ ಕೂಡ ಗಾಬರಿಗೊಂಡಿದ್ದು, ಕೊನೆಗೆ ವ್ಯಕ್ತಿಯೊಬ್ಬರು ಅಲ್ಲಿಗೆ ಬಂದು ಆತನನನ್ನು ತಡೆದಿದ್ದಾರೆ.  

ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿರುವ ಈ ವಿಡಿಯೊವನ್ನು ನೋಡಿದವರು  ಜನರ ಅನುಮತಿಯಿಲ್ಲದೆ ಮಹಿಳೆಯ ವಿಡಿಯೊ ಮಾಡಲಾಗಿದ್ದು, ಅದೂ ಅಲ್ಲದೇ ಆತ ತಾನು ಮಾಡಿದ ತಪ್ಪಿಗೆ  ಕ್ಷಮೆಯಾಚಿಸುವ ಬದಲು, ತನ್ನ  ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೊವನ್ನು ಹಂಚಿಕೊಂಡಿದ್ದಾನೆ ಮತ್ತು ಟೀಕೆಗಳನ್ನು ತಪ್ಪಿಸಲು ಕಾಮೆಂಟ್‍ಗಳ ವಿಭಾಗವನ್ನು  ಬ್ಲಾಕ್‍ ಮಾಡಿದ್ದಾನೆ ಎನ್ನಲಾಗಿದೆ. ಈ ಘಟನೆಯಿಂದ ಭಾರತೀಯರ ಬಗ್ಗೆ ಪ್ರವಾಸಿಗರಲ್ಲಿ ಅಸಹ್ಯದ ಭಾವನೆ  ವ್ಯಕ್ತವಾಗಬಹುದು ಎಂಬ ಕಳವಳವನ್ನು ಹುಟ್ಟುಹಾಕಿದೆ.

ಇದನ್ನೂ ಓದಿ:ನಿತ್ಯ ರಾತ್ರಿ ಮೂರು ಬಾರಿ ಲೈಂಗಿಕ ಕ್ರಿಯೆ ನಡೆಸುವಂತೆ ಪತ್ನಿಯ ಕಾಟ; ಪತಿ ಮಾಡಿದ್ದೇನು?

ಇಂಡಿಯಾ ಗೇಟ್‍ನಲ್ಲಿ ಪ್ರವಾಸಿಗರ ಜೊತೆ ನೃತ್ಯ ಮಾಡುತ್ತಿರುವ ಹಲವಾರು ವಿಡಿಯೊಗಳನ್ನು ಸಚಿನ್ ರಾಜ್ ಅಪ್ಲೋಡ್ ಮಾಡಿದ್ದಾನೆ. “ಅವನನ್ನು ಬಂಧಿಸಿ, ಅವನು ವಿದೇಶಿಯರಿಗೆ ಕಿರುಕುಳ ನೀಡುತ್ತಿದ್ದಾನೆ” ಎಂದು ಒಬ್ಬ ಬಳಕೆದಾರರು ವಿಡಿಯೊಗೆ ಕಾಮೆಂಟ್ ಮಾಡಿದ್ದಾರೆ. ಹಲವಾರು ಬಳಕೆದಾರರು ಅವರ ವಿಡಿಯೊಗಳಲ್ಲಿನ ಕಾಮೆಂಟ್‍ಗಳಲ್ಲಿ ದೆಹಲಿ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ.