Thursday, 24th October 2024

Deepavali Special Trains : ಪ್ರಯಾಣಿಕರೇ ಗಮನಿಸಿ, ದೀಪಾವಳಿ ಹಿನ್ನೆಲೆಯಲ್ಲಿ ಸಂಚರಿಸುವ ವಿಶೇಷ ರೈಲುಗಳ ವಿವರ ಇಲ್ಲಿದೆ

Deepavali Special Trains

ಬೆಂಗಳೂರು: ದೀಪಾವಳಿ ಮತ್ತು ಛತ್‌ ಹಬ್ಬದ ಹಿನ್ನೆಲೆಯಲ್ಲಿ (Deepavali Special Trains) ಪ್ರಯಾಣಕರ ದಟ್ಟಣೆಯನ್ನಿ ನಿಭಾಯಿಸಲು ನೈರುತ್ಯ ರೈಲ್ವೆ ಯಿಂದ ಹೆಚ್ಚುವರಿ ರೈಲುಗಳ ವ್ಯವಸ್ಥೆಮಾಡಿದೆ. ಈ ವೇಳೆ ತಮ್ಮ ಊರಿಗೆ ತೆರಳಲು ನಗರವಾಸಿಗಳು ಮುಂದಾಗುವ ಕಾರಣ ರೈಲುಗಳಲ್ಲಿ ದಟ್ಟಣೆ ಹೆಚ್ಚಾಗುತ್ತವೆ. ಅದನ್ನು ನಿಯಂತ್ರಿಸಲು ಹೆಚ್ಚುವರಿ ರೈಲುಗಳ ಸೇವೆಯನ್ನು ಆರಂಭಿಸಲಾಗಿದೆ.
ಹುಬ್ಬಳ್ಳಿ-ಕೊಲ್ಲಂ ವಿಶೇಷ ರೈಲು ಸಂಚಾರ: ಅಕ್ಟೋಬರ್ 26ರಂದು ಹುಬ್ಬಳ್ಳಿಯಿಂದ ಮಧ್ಯಾಹ್ನ 3.15ಕ್ಕೆ ಹೊರಟು ಮರುದಿನ ಸಂಜೆ 5.10 ಕೊಲ್ಲಂ ತಲುಪಲಿದೆ. ಅಕ್ಟೋಬರ್ 27ರಂದು ಕೊಲ್ಲಂನಿಂದ ರಾತ್ರಿ 8.30 ಕ್ಕೆ ಹೊರಟು, ಮರುದಿನ ರಾತ್ರಿ 8.45 ಕ್ಕೆ ಹುಬ್ಬಳ್ಳಿ ತಲುಪಲಿದೆ. ಹಾವೇರಿ, ರಾಣಿಬೆನ್ನೂರು, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು, ಚಿಕ್ಕಬಾಣಾವರ, ಎಸ್‌ಎಂವಿಟಿ ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಕರೂರ್, ದಿಂಡಿಗಲ್, ಮಧುರೈ, ವಿರುಡುನಗರ, ಶಿವಕಾಶಿ, ರಾಜಪಾಳ್ಯಮ್, ಶ್ರೀವಿಲ್ಲಿಪುತ್ತೂರು, ಕಡಯನಲ್ಲೂರು, ತೆಂಕಾಶಿ, ಸೆಂಗೋಟ್ಟೈ , ತೆನಮಲೈ , ಪುನಲೂರು, ಆವನೀಶ್ವರಂ, ಕೊಟ್ಟಾರಕರ ಮತ್ತು ಕುಂದರ ನಿಲ್ದಾಣಗಳಲ್ಲಿ ಈ ರೈಲಿಗೆ ನಿಲುಗಡೆ ಇದೆ

ಬೆಂಗಳೂರು-ಸಂತ್ರಗಾಚಿ ವಿಶೇಷ ರೈಲು ಸಂಚಾರ : ಅಕ್ಟೋಬರ್ 26 ರಂದು ಬೆಳಿಗ್ಗೆ 10.15 ಕ್ಕೆ ಎಸ್ಎಂವಿಟಿ ಬೆಂಗಳೂರಿನಿಂದ ಹೊರಟು ಮರುದಿನ ಸಂಜೆ 7.45ಕ್ಕೆ ಸಂತ್ರಗಾಚಿ ತಲುಪಲಿದೆ. ಅಕ್ಟೋಬರ್ 27 ರಂದು ಸಂತ್ರಗಾಚಿಯಿಂದ ರಾತ್ರಿ 11.30ಕ್ಕೆ ಹೊರಟು, ಮರುದಿನ ಎಸ್ಎಂವಿಟಿ ಬೆಂಗಳೂರು ನಿಲ್ದಾಣಕ್ಕೆ ಮಧ್ಯಾಹ್ನ 12.30 ಕ್ಕೆ ಆಗಮಿಸಲಿದೆ. ಈ ರೈಲು ಕೃಷ್ಣರಾಜಪುರಂ, ಕಟ್ಪಾಡಿ, ರೇಣಿಗುಂಟಾ, ಗುಡೂರು, ನೆಲ್ಲೂರು, ಓಂಗೋಲ್, ವಿಜಯವಾಡ, ರಾಜಮಂಡ್ರಿ, ದುವ್ವಾಡ, ಕೊತ್ತವಲಸ, ವಿಜಯನಗರಂ, ಶ್ರೀಕಾಕುಳಂ ರೋಡ್, ಪಲಾಸ, ಬ್ರಹ್ಮಪುರ, ಖುರ್ದಾ ರೋಡ್, ಭುವನೇಶ್ವರ, ಕಟಕ್, ಭದ್ರಕ್, ಬಾಲೇಶ್ವರ ಮತ್ತು ಖರಗ್ಪುರ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.

ಯಶವಂತಪುರ-ಕೊಟ್ಟಾಯಂ ವಿಶೇಷ ರೈಲು: ಅಕ್ಟೋಬರ್ 29ರಂದು ಸಂಜೆ 6.30ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಬೆಳಿಗ್ಗೆ 8.10 ಕ್ಕೆ ಕೊಟ್ಟಾಯಂ ತಲುಪಲಿದೆ. ಅಕ್ಟೋಬರ್ 30ರಂದು ಬೆಳಿಗ್ಗೆ 11.10 ಕ್ಕೆ ಕೊಟ್ಟಾಯಂನಿಂದ ಹೊರಟು ಮರುದಿನ ಅಂದರೆ ಅಕ್ಟೋಬರ್ 31ರಂದು ಮಧ್ಯಾಹ್ನ 1.15 ಕ್ಕೆ ಯಶವಂತಪುರಕ್ಕೆ ಆಗಮಿಸಲಿದೆ. ಈ ರೈಲು ಕೃಷ್ಣರಾಜಪುರಂ, ವೈಟ್‌ಫೀಲ್ಡ್, ಬಂಗಾರಪೇಟೆ, ಸೇಲಂ, ಈರೋಡ್, ತಿರುಪ್ಪೂರ್, ಕೊಯಮತ್ತೂರು, ಪಾಲಕ್ಕಾಡ್, ತ್ರಿಶೂರ್, ಆಲುವಾ ಮತ್ತು ಎರ್ನಾಕುಲಂ ಟೌನ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುತ್ತದೆ.

ಬೆಂಗಳೂರು-ಕಲಬುರಗಿ ವಿಶೇಷ ರೈಲು ಸಂಚಾರ: ಅಕ್ಟೋಬರ್ 31ರಂದು ಎಸ್‌ಎಂವಿಟಿ ಬೆಂಗಳೂರಿನಿಂದ ರಾತ್ರಿ 9.15 ಕ್ಕೆ ಹೊರಟು ಮರುದಿನ ಬೆಳಿಗ್ಗೆ 7.40 ಕ್ಕೆ ಕಲಬುರಗಿ ತಲುಪಲಿದೆ. ನವೆಂಬರ್ 1ರಂದು ಕಲಬುರಗಿಯಿಂದ ಬೆಳಿಗ್ಗೆ 9.35 ಕ್ಕೆ ಹೊರಟು ಅದೇ ದಿನ ರಾತ್ರಿ 8 ಗಂಟೆಗೆ ಎಸ್‌ಎಂವಿಟಿ ಬೆಂಗಳೂರು ತಲುಪಲಿದೆ. ಈ ರೈಲು ಯಲಹಂಕ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯ ರೋಡ್, ರಾಯಚೂರು, ಕೃಷ್ಣಾ, ಯಾದಗಿರಿ ಮತ್ತು ಶಹಾಬಾದ್ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ಇದನ್ನೂ ಓದಿ: BBMP Health Guidelines : ಮಳೆ ಬಂದ ಮೇಲೆ ಚುರುಕಾದ ಬಿಬಿಎಂಪಿ; ಪರಿಹಾರ ಕಾರ್ಯ ಆರಂಭ

ಹುಬ್ಬಳ್ಳಿ-ಮುಜಾಫರ್‌ಪುರ ವಿಶೇಷ ರೈಲು ಸಂಚಾರ: ನವೆಂಬರ್ 4 ರಂದು ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಸಂಜೆ 5:20ಕ್ಕೆ ಹೊರಟು, ನವೆಂಬರ್ 6 ರಂದು ಸಂಜೆ 4 ಗಂಟೆಗೆ ಮುಜಾಫರ್‌ಪುರ ನಿಲ್ದಾಣವನ್ನು ತಲುಪಲಿದೆ.
ನವೆಂಬರ್ 9 ರಂದು ಮುಜಾಫರ್‌ಪುರ ನಿಲ್ದಾಣದಿಂದ ಮಧ್ಯಾಹ್ನ 1:15 ಕ್ಕೆ ಹೊರಟು, ನವೆಂಬರ್ 11 ರಂದು ಬೆಳಿಗ್ಗೆ 10:30 ಕ್ಕೆ ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಲಿದೆ. ಈ ರೈಲು ಧಾರವಾಡ, ಬೆಳಗಾವಿ, ಘಟಪ್ರಭಾ, ಮೀರಜ್, ಸಾಂಗ್ಲಿ, ಕರಾಡ್, ಸತಾರಾ, ಪುಣೆ, ದೌಂಡ್ ಕಾರ್ಡ್ ಲೈನ್, ಅಹ್ಮದ್‌ನಗರ, ಕೋಪರ್‌ಗಾಂವ್, ಮನ್ಮಾಡ್, ಭೂಸಾವಲ್, ಖಾಂಡ್ವಾ, ಇಟಾರ್ಸಿ, ನರಸಿಂಗ್‌ಪುರ, ಜಬಲ್‌ಪುರ, ಕಟ್ನಿ, ಸತ್ನಾ, ಮಾಣಿಕ್‌ಪುರ, ಪ್ರಯಾಗ್‌ರಾಜ್ ಛೋಇಕಿ, ಪಂಡಿತ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್‌.