Friday, 22nd November 2024

Nisha Yogeshwar : ಕಾಂಗ್ರೆಸ್‌ ಸೇರಿದ ಯೋಗೇಶ್ವರ್ ವಿರುದ್ಧ ತಿರುಗಿ ಬಿದ್ದ ಪುತ್ರಿನಿಶಾ; ಎಲ್ಲವೂ ಬಯಲು ಮಾಡುವ ಬೆದರಿಕೆ

Nisha Yogeshwar

ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆಯಲ್ಲಿ ತಮಗೆ ಮೈತ್ರಿ ಪಕ್ಷದ ಟಿಕೆಟ್‌ ಸಿಗುವುದಿಲ್ಲ ಎಂದು ಗೊತ್ತಾದ ತಕ್ಷಣ ಬಿಜೆಪಿಗೆ ಕೈಕೊಟ್ಟಿರುವ ಸಿ.ಪಿ ಯೋಗೇಶ್ವರ್‌ ಕಾಂಗ್ರೆಸ್‌ ಸೇರಿ ಅಭ್ಯರ್ಥಿಯಾಗಿದ್ದಾರೆ. ಅವರು ಕಾಂಗ್ರೆಸ್ ಸೇರಿದ ಗಳಿಗೆಯಲ್ಲೇ ಪುತ್ರಿ ಪುತ್ರಿ ನಿಶಾ (Nisha Yogeshwar) ಅಪ್ಪನ ವಿರುದ್ಧ ಸೋಶಿಯಲ್ ಮೀಡಿಯಾದ ಮೂಲಕ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲ್ಲವನ್ನೂ ಬಯಲು ಮಾಡಿ ಮರ್ಯಾದೆ ಕಳೆಯುವೆ ಎಂದು ಗುಡುಗಿದ್ದಾರೆ. ವಿಡಿಯೊ ಪೋಸ್ಟ್ ಮಾಡಿರುವ ಅವರು ಅಪ್ಪ ಯೋಗೇಶ್ವರ್ ಹೆಸರು ಹೇಳದೆಯೇ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನನಗೆ ರಾಜಕೀಯಕ್ಕೆ ಬರಲು ಮನಸ್ಸು ಇತ್ತು. ಅದಕ್ಕೂ ಅಡ್ಡಗಾಲು ಹಾಕಿದರು. ಸಮಾಜ ಸೇವೆಗೆ ಇಳಿಯದಂತೆ ತಡೆದರು. ವಿದ್ಯಾಭ್ಯಾಸ ಮುಂದುವರಿಸದಂತೆ ತಡೆದರು. ಯಾವ ಕ್ಷೇತ್ರದಲ್ಲೂ ಮುಂದೆ ಬರಲು ಅವರು ಬಿಡುತ್ತಿಲ್ಲ. ಜೀವನದಲ್ಲಿ ನೆಮ್ಮದಿಯಾಗಿರುವುದಕ್ಕೂ ಬಿಡುತ್ತಿಲ್ಲ. ನನ್ನ ಜೀವನದ ಕಹಿ ಸತ್ಯವನ್ನು ಹೊರತರುತ್ತೇನೆ’ ಎಂದು ನಿಶಾ ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ.

ನನ್ನಿಂದ ಏನು ಸಮಸ್ಯೆ ಆಗಿದೆ ಮತ್ತು ನನ್ನ ವಿರುದ್ಧ ಏಕೆ ದ್ವೇಷ ಎಂಬುದೇ ತಿಳಿಯುತ್ತಿಲ್ಲ. ವಾಸ್ತವ ಕಥೆ ಬೇರೆಯೇ ಇದೆ ಎಂಬುದು ಸತ್ಯ, ಅದರ ಎಲ್ಲ ಕತೆಯನ್ನುಹೊರಗಡೆ ಬಯಲು ಮಾಡುತ್ತೇನೆ ಎಂಬುದಾಗಿ ನಿಶಾ ಹೇಳಿದ್ದಾರೆ.

ಇದನ್ನೂ ಓದಿ: R Ashok: ಯೋಗೇಶ್ವರ್‌ ತುಳಿಯಲು ಡಿ.ಕೆ. ಶಿವಕುಮಾರ್‌ ಪ್ಲಾನ್‌; ಆರ್‌. ಅಶೋಕ್‌

ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಯೋಗೇಶ್ವರ್ ಹಾಗೂ ಪುತ್ರಿ ನಿಶಾ ಮಧ್ಯೆ ಕಳೆದ 4-5 ತಿಂಗಳಿಂದ ವೈಮನಸ್ಸು ಮೂಡಿದೆ ಎನ್ನಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ನಿಶಾ ಅವರು ತಂದೆ ಪರ ಪ್ರಚಾರ ನಡೆಸಿದರು. ಬಳಿಕ ಅವರ ನಡುವೆ ಮುನಿಸು ಉಂಟಾಗಿತ್ತು. ಬಳಿಕ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ ಸೇರಲು ಪ್ರಯತ್ನ ನಡೆಸಿದ್ದರು. ಆದರೆ, ಸಾಧ್ಯವಾಗಿರಲಿಲ್ಲ.

ಸಿಪಿ ಯೋಗೇಶ್ವರ್ ಹೇಳದ್ದೆನು?

ಕಾಂಗ್ರೆಸ್‌ ಸೇರ್ಪಡೆ ಬಳಿಕ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಅವರು ಮಾತನಾಡಿ, ನನ್ನ ರಾಜಕೀಯ ಜೀವನವನ್ನು ನಾವು ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಆರಂಭಿಸಿದ್ದೆ. ಕಾಂಗ್ರೆಸ್ ಪಕ್ಷ ತೊರೆದಿದ್ದೆ. ಈಗ ಮತ್ತೆ ಬಂದಿದ್ದೇನೆ. ನನ್ನ ಮುಂದಿನ ರಾಜಕೀಯ ಭಾಗ ಮತ್ತೆ ಕಾಂಗ್ರೆಸ್‌ ಮೂಲಕ ಮುಂದುವರಿಯಲಿದೆ. ಕಳೆದ ಮೂರ್ನಾಲ್ಕು ತಿಂಗಳಲ್ಲಿ ನಡೆದಿರುವ ರಾಜಕೀಯ ಬೆಳವಣಿಗೆಯಲ್ಲಿ ಬೇಸರವಾಗಿದೆ. ಕೆಲವೊಮ್ಮೆ ನಮಗಾಗಿ ನಾವು ಕಟ್ಟಿದ ಮನೆಯಲ್ಲಿ ನಾವು ವಾಸ ಮಾಡಲು ಆಗುವುದಿಲ್ಲ. ಅದೇ ಸಂದರ್ಭ ನನಗೆ ಬಂದಿದೆ ಎಂದು ಕಾಂಗ್ರೆಸ್ ಸೇರ್ಪಡೆ ಬಳಿಕ ಯೋಗೇಶ್ವರ್ ಹೇಳಿದ್ದಾರೆ.