Thursday, 24th October 2024

assembly bypolls: ಉತ್ತರ ಪ್ರದೇಶ, ರಾಜಸ್ಥಾನ ಉಪಚುನಾವಣೆ: ಬಿಜೆಪಿಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

assembly bypolls

ನವದೆಹಲಿ: ಉತ್ತರ ಪ್ರದೇಶ(Uttar Pradesh) ಮತ್ತು ರಾಜಸ್ಥಾನದಲ್ಲಿ(Rajasthan) ಮುಂಬರುವ ವಿಧಾನಸಭಾ ಉಪಚುನಾವಣೆಗಳಿಗೆ(assembly bypolls) ಭಾರತೀಯ ಜನತಾ ಪಕ್ಷ ( BJP ) ತನ್ನ ಅಭ್ಯರ್ಥಿಗಳ ಪಟ್ಟಿ ಗುರುವಾರ ಬಿಡುಗಡೆ ಮಾಡಿದೆ. ಅಕ್ಟೋಬರ್ 24 ರಂದು ಬಿಡುಗಡೆಯಾದ ಪಟ್ಟಿಯಲ್ಲಿ, ರಾಜಸ್ಥಾನದ ಚೋರಾಸಿ ಮತ್ತು ಉತ್ತರ ಪ್ರದೇಶದ ಕುಂದರ್ಕಿ, ಗಾಜಿಯಾಬಾದ್, ಖೈರ್, ಕರ್ಹಾಲ್, ಫುಲ್ಪುರ್, ಕತೇಹಾರಿ ಮತ್ತು ಮಜವಾನ್‌ ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.

ನವೆಂಬರ್ 23 ರಂದು ರಾಜಸ್ಥಾನದ ಚೋರಾಸಿ ಕ್ಷೇತ್ರಕ್ಕೆ ನಡೆಯಲಿರುವ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಕರಿಲಾಲ್ ನಾನೋಮ ಕಣಕ್ಕಿಳಿಯಲಿದ್ದಾರೆ. ಉತ್ತರ ಪ್ರದೇಶದ ವಿಧಾನಸಭಾ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಕುಂದರ್ಕಿಯಿಂದ ರಾಮ್‌ವೀರ್ ಸಿಂಗ್ ಠಾಕೂರ್, ಗಾಜಿಯಾಬಾದ್‌ನಿಂದ ಸಂಜೀವ್ ಶರ್ಮಾ ಮತ್ತು ಖೇರ್‌ನಿಂದ ಸುರೇಂದ್ರ ದಿಲೇರ್ ಅವರನ್ನು ಕಣಕ್ಕಿಳಿಸಲಿದೆ. ಕರ್ಹಾಲ್ ಕ್ಷೇತ್ರದಿಂದ ಅನುಜೇಶ್ ಯಾದವ್ ಸ್ಪರ್ಧಿಸಲಿದ್ದು, ಫುಲ್ಪುರದಿಂದ ದೀಪಕ್ ಪಟೇಲ್, ಕಾಟೇಹಾರಿಯಿಂದ ಧರ್ಮರಾಜ್ ನಿಶಾದ್ ಮತ್ತು ಮಜ್ವಾನ್ ನಿಂದ ಸುಚಿಸ್ಮಿತಾ ಮೌರ್ಯ ಸ್ಪರ್ಧಿಸಲಿದ್ದಾರೆ. ನಾಮಪತ್ರ ಸಲ್ಲಿಸಲು ಅಕ್ಟೋಬರ್ 25 ಕೊನೆಯ ದಿನವಾಗಿದ್ದು, ನವೆಂಬರ್ 13 ರಂದು ಮತದಾನ ನಡೆಯಲಿದೆ. ನವೆಂಬರ್ 23 ರಂದು ಫಲಿತಾಂಶ ಪ್ರಕಟವಾಗಲಿದೆ.

ಉತ್ತರಪ್ರದೇಶದಲ್ಲಿ ಚುನಾವಣಾ ಕಾವು ಜೋರಾಗಿದ್ದು, ರಾಜಕೀಯ ಪಕ್ಷಗಳು ಚುನಾವಣಾ ತಯಾರಿಯಲ್ಲಿ ತೊಡಗಿದ್ದಾರೆ. ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್‌ ಯಾದವ್‌ ಮಾತನಾಡಿ ” ಇಂಡಿಯಾ ಮೈತ್ರಿ ಕೂಟದ ಅಭ್ಯರ್ಥಿಗಳು ಉತ್ತರ ಪ್ರದೇಶದ ಉಪಚುನಾವಣೆಯಲ್ಲಿ ಎಲ್ಲಾ ಒಂಬತ್ತು ಕ್ಷೇತ್ರಳಲ್ಲಿಯೂ ಸಮಾಜವಾದಿ ಪಕ್ಷದ ಸೈಕಲ್‌ ಚಿನ್ಹೆಯ ಗುರುತಿನೊಂದಿಗೆ ಸ್ಪರ್ಧಿಸಲಿದ್ದಾರೆ ಎಂದು ಹೇಳಿದರು. ಉಪ ಚುನಾವಣೆಯಲ್ಲಿ ಗೆಲ್ಲುವ ಭರವಸೆಯನ್ನು ವ್ಯಕ್ತಪಡಿಸಿದ ಅವರು ಯೇ ʼಸೀಟ್‌ ಕಿ ಬಾತ್‌ ನಹಿ ಯೇ ಜೀತ್‌ ಕಿ ಬಾತ್‌ ಹೇʼ( ಇದು ಸೀಟುಗಳ ಬಗ್ಗೆ ಅಲ್ಲ ಇದು ಗೆಲುವಿನ ಬಗ್ಗೆ) ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಒಗ್ಗಟ್ಟಾಗಿದ್ದು, ದೊಡ್ಡ ಗೆಲುವಿಗಾಗಿ ಹೆಗಲಿಗೆ ಹೆಗಲು ಕೊಟ್ಟು ನಿಂತಿವೆ. ಈ ಉಪಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಗೆಲುವಿನ ಹೊಸ ಅಧ್ಯಾಯ ಬರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: Channapatna By Election: ಚನ್ನಪಟ್ಟಣದಲ್ಲಿ ‘ಕೈ’ಗೊಂಬೆಯಾಟ; ಬಿಜೆಪಿ-ದಳಕ್ಕೆ ಪೀಕಲಾಟ!

“ನಿಮ್ಮ ಅಭೂತಪೂರ್ವ ಸಹಕಾರ ಮತ್ತು ಬೆಂಬಲ ಇದ್ದರೆ ಎಲ್ಲಾ ಒಂಬತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ‘ಇಂಡಿಯಾ ಮೈತ್ರಿ ಕೂಟದ ಅಭ್ಯರ್ಥಿ ಗೆಲ್ಲುತ್ತಾರೆ. ಇದು ದೇಶದ ಸಂವಿಧಾನ, ಸೌಹಾರ್ದತೆ ಹಾಗೂ ಪಿಡಿಎ ಗೌರವ ಉಳಿಸುವ ಚುನಾವಣೆ. ಎಲ್ಲರಿಗೂ ನಾನು ಮನವಿ ಮಾಡುತ್ತಿದ್ದೇನೆ ಒಂದೇ ಒಂದು ಮತವೂ ಕಡಿಮೆಯಾಗಬಾರದುಮತ್ತು ಒಂದು ಮತವೂ ವಿಭಜನೆಯಾಗಬಾರದು ಎಂದು ಅಖೀಲೇಶ್‌ ಯಾದವ್‌ ಹೇಳಿದ್ಧಾರೆ.

ಕರ್ನಾಟಕದಲ್ಲೂ ಉಪಚುನಾವಣೆ ಕಾವು ಜೋರಾಗಿದ್ದು, ನ.13 ರಂದು ನಡೆಯಲಿರುವ ಚನ್ನಪಟ್ಟಣ ಉಪಚುನಾವಣೆಗೂ ಮುನ್ನವೇ ಐದು ಬಾರಿ ಶಾಸಕರಾಗಿದ್ದ ಹಾಗೂ ಬಿಜೆಪಿ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.  ಕೆಲ ದಿನಗಳ ಹಿಂದೆಯಷ್ಟೇ, ಯೋಗೇಶ್ವರ್ ನಾನು ಯಾವುದೇ ಪಕ್ಷಕ್ಕೆ ಸೇರಲು ಬಯಸುವುದಿಲ್ಲ ಮತ್ತು ಬಿಜೆಪಿ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಲು ಬಯಸುವುದಾಗಿ ಹೇಳಿದ್ದರು.