ಚೆನ್ನೈ: ಧನುಷ್ ಮತ್ತು ಸಾಯಿಪಲ್ಲವಿ ಅಭಿನಯದ ‘ಮಾರಿ 2’ ಚಿತ್ರದ ‘ರೌಡಿ ಬೇಬಿ’ ಹಾಡು ಸೂಪರ್ ಹಿಟ್ ಆಗಿರುವುದಲ್ಲದೆ, ಹೊಸ ದಾಖಲೆ ಬರೆದಿದೆ.
ಯೂಟ್ಯೂಬ್ನಲ್ಲಿ ಒಂದು ಬಿಲಿಯನ್ಗೂ ಹೆಚ್ಚು ವೀಕ್ಷಣೆಗೆ ಒಳಪಡುವುದರ ಜತೆಗೆ ಅತೀ ಹೆಚ್ಚು ವೀಕ್ಷಣೆಗೊಳಗಾದ ದಕ್ಷಿಣ ಭಾರತದ ಮೊದಲ ಹಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಾಡನ್ನು ಧನುಷ್ ಮತ್ತು ಧೀ ಹಾಡಿದ್ದಾರೆ. ಈ ಖುಷಿ ವಿಚಾರ ವನ್ನು ಚಿತ್ರತಂಡ ಸಂಭ್ರಮಿಸಿದ್ದು, ಧನುಷ್ ಅವರ ವಿಶೇಷ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ.
ಧನುಷ್ ಅವರ ಹೊಸ ಸಿಡಿಪಿ ಅವರ ಅಭಿಮಾನಿಗಳಿಗೆ ಸಂತಸ ನೀಡಿದರೆ, ಸಾಯಿ ಪಲ್ಲವಿ ಅಭಿಮಾನಿಗಳು ಮಾತ್ರ ಅಸಮಾ ಧಾನಗೊಂಡಿದ್ದಾರೆ.
ಪೋಸ್ಟರ್ನಲ್ಲಿ ಅವರ ಫೋಟೋ ಇಲ್ಲದಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣ ವಾಗಿದೆ. ಹಾಡು ಅಷ್ಟೊಂದು ಯಶಸ್ಸು ಸಾಧಿಸುವುದರ ಹಿಂದೆ ಸಾಯಿ ಪಲ್ಲವಿ ಶ್ರಮವು ಇದೆ. ಅವರ ನೃತ್ಯದಿಂದಲೇ ಹಾಡು ಅಷ್ಟೊಂದು ಪ್ರಸಿದ್ಧಿ ಪಡೆದಿದೆ. ಹೀಗಾಗಿ ಪೋಸ್ಟರ್ನಲ್ಲಿ ಸಾಯಿ ಪಲ್ಲವಿ ಫೋಟೋ ಬೇಕು ಎಂದು ಪಟ್ಟು ಹಿಡಿದಿದ್ದಾರೆ.
2015ರಲ್ಲಿ ತೆರೆಕಂಡ ಮಾರಿ ಚಿತ್ರ ಯಶಸ್ಸು ಗಳಿಸಿದ ಬಳಿ ಅದರ ಮುಂದುವರಿದ ಸರಣಿ ಮಾರಿ 2 ಅನ್ನು ಬಾಲಾಜಿ ಮೋಹನ್ ನಿರ್ದೇಶಿಸಿದರು. ಚಿತ್ರವನ್ನು ಧನುಷ್ ತಮ್ಮ ಬ್ಯಾನರ್ ವಂಡರ್ಬಾರ್ ಫಿಲ್ಮ್ಸ್ ಅಡಿಯಲ್ಲಿ ನಿರ್ಮಾಣ ಮಾಡಿದರು.