ಬೆಂಗಳೂರು: ಶ್ರೀ ರಾಮ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಸಿ.ಎಸ್. ವೆಂಕಟೇಶ ಅವರ ನಿರ್ಮಾಣದ, ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ “ಬಡವ್ರ ಮಕ್ಕಳು ಬೆಳಿಬೇಕು ಕಣ್ರಯ್ಯ” ಚಿತ್ರದ (Kannada New Movie) ಚಿತ್ರೀಕರಣ ಮುಕ್ತಾಯಗೊಂಡಿದ್ದು, ನವಂಬರ್ 10 ರಂದು ಟ್ರೇಲರ್ ಬಿಡುಗಡೆಯಾಗುತ್ತಿದೆ. ಚಿತ್ರದ ಮುಖ್ಯ ಭೂಮಿಕೆಯಲ್ಲಿ ಸುಚೇಂದ್ರ ಪ್ರಸಾದ್ ಹಾಗೂ ಸಂಗೀತ ಕಾಣಿಸಿಕೊಂಡಿದ್ದಾರೆ. ಮಂಜು ಕವಿ ಅವರು ಸಾಹಿತ್ಯ, ಸಂಭಾಷಣೆ ಬರೆದು ಸಂಗೀತ ಸಂಯೋಜನೆಯೊಂದಿಗೆ ನಿರ್ದೇಶನವನ್ನೂ ಮಾಡಿದ್ದು, ಎಸ್.ಜೆ. ಸಂಜಯ್, ಗಿರೀಶ್ ಸಾಕಿ, ಸಂಗೀತ ಶೆಟ್ಟಿ ನಿರ್ದೇಶನ ತಂಡದಲ್ಲಿದ್ದಾರೆ.
ರೇಣು ಕುಮಾರ್ ಛಾಯಾಗ್ರಹಣ, ಕರಣ್ ಕುಮಾರ್ ಹಾಗೂ ವೆಂಕಿ ಯುಡಿಐ ಸಂಕಲನವಿರುವ ಈ ಚಿತ್ರಕ್ಕೆ ನಂದ ಮಾಸ್ಟರ್ ಹಾಗೂ ಮೈಸೂರು ರಾಜು ಅವರ ನೃತ್ಯ ನಿರ್ದೇಶನವಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ರವೀಂದ್ರ ಸೊರಗಾವಿ, ಅನುರಾಧ ಭಟ್, ಕೈಲಾಶ್ ಕೇರ್ ಹಾಡುಗಳಿಗೆ ದನಿ ನೀಡಿದ್ದಾರೆ. ಹಿನ್ನೆಲೆ ಸಂಗೀತ ವಿನು ಮನಸು ಅವರದು.
ಈ ಸುದ್ದಿಯನ್ನೂ ಓದಿ | Deepavali Party Fashion: ತಾರೆಯರ ದೀಪಾವಳಿ ಪಾರ್ಟಿಯಲ್ಲಿ ಮಿನುಗಿದ ಎಥ್ನಿಕ್ ವೇರ್ಸ್!
ಚಿತ್ರದ ಮುಖ್ಯ ಭೂಮಿಕೆಯಲ್ಲಿ ಸುಚೇಂದ್ರ ಪ್ರಸಾದ್ ಹಾಗೂ ಸಂಗೀತ ಕಾಣಿಸಿಕೊಂಡಿದ್ದಾರೆ. ಅವರ ಮಕ್ಕಳ ಪಾತ್ರದಲ್ಲಿ ರಾಜವರ್ಧನ್, ಲಾವಣ್ಯ, ವೈಭವಿ ಅಭಿನಯಿಸಿದ್ದಾರೆ. ಚಂದ್ರಪ್ರಭ, ವಿನೋದ್ ಗೊಬ್ಬರಗಾಲ, ಟೆನ್ನಿಸ್ ಕೃಷ್ಣ ರೇಖಾ ದಾಸ್, ಮೂಗು ಸುರೇಶ್, ವಿನೋದ್, ಜಗದೀಶ್ ಕೊಪ್ಪ, ಚೈತ್ರ ಕೊಟ್ಟೂರು, ಶಿವಾರೆಡ್ಡಿ, ಮುಖೇಶ್, ಮಂಜು ಪಾವಗಡ, ಸಿಲ್ಲಿ ಲಲ್ಲಿ ಚಿದಾನಂದ್, ಶ್ರೀನಿವಾಸ್ ಗೌಡ ಯಶೋಧ ನಾಗರಾಜ್, ಸುರೇಶ್ ಉದ್ಬೂರ್ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಈ ಸುದ್ದಿಯನ್ನೂ ಓದಿ | Kannada Pustaka Habba: ಬೆಂಗಳೂರಿನಲ್ಲಿ ಅ.26 ರಿಂದ ಡಿ.1ರವರೆಗೆ ರಾಷ್ಟ್ರೋತ್ಥಾನ ಸಾಹಿತ್ಯದ ‘ಕನ್ನಡ ಪುಸ್ತಕ ಹಬ್ಬ’
ಬಡ ಕುಟುಂಬದಲ್ಲಿ ಹುಟ್ಟಿದ ಮಕ್ಕಳ ಪರಿಸ್ಥಿತಿ, ಮಕ್ಕಳಿಗಾಗಿ ತಂದೆ ತಾಯಿ ಪಡುವ ಕಷ್ಟ, ಬಡತನವನ್ನು ಹೇಗೆ ನಿಭಾಯಿಸಬೇಕು, ಬಡತನದ ಕುಟುಂಬಕ್ಕೆ ಸಮಾಜ ಯಾವ ರೀತಿ ಬೆಲೆ ಕೊಡುತ್ತದೆ ಎಂಬ ವಿಷಯಗಳನ್ನು ಈ ಚಿತ್ರದಲ್ಲಿ ನಿರ್ದೇಶಕ ಮಂಜು ಕವಿ ಅರ್ಥಪೂರ್ಣವಾಗಿ ವಿವರಿಸಿದ್ದಾರೆ. ಚಿತ್ರ ಪ್ರೇಕ್ಷಕರ ಗಮನ ಸೆಳೆಯುವಂತೆ ಮೂಡಿಬಂದಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.