Thursday, 24th October 2024

Mevu mela: ಬೆಂಗಳೂರಿನಲ್ಲಿ ಅ.25 ರಂದು ಮೇವು ಮೇಳ

Mevu Mela

ಬೆಂಗಳೂರು: ಮೇವು ಚಟುವಟಿಕೆಗಳ ಕುರಿತು ವಸ್ತು ಪ್ರದರ್ಶನ ಹಾಗೂ ತಜ್ಞರೊಂದಿಗೆ ಸಂವಾದ ನಡೆಸುವ ‘ಮೇವು ಮೇಳ’ (Mevu mela) ಕಾರ್ಯಕ್ರಮವನ್ನು ಅ. 25 ರಂದು ಶುಕ್ರವಾರ ಬೆಳಗ್ಗೆ 10 ಗಂಟೆಗೆ ನಗರದ ಹೆಬ್ಬಾಳದ ಪಶುವೈದ್ಯಕೀಯ ಕಾಲೇಜು, ಬಾಲಕರ ಹಾಸ್ಟೆಲ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಸುದ್ದಿಯನ್ನೂ ಓದಿ | Kannada Pustaka Habba: ಬೆಂಗಳೂರಿನಲ್ಲಿ ಅ.26 ರಿಂದ ಡಿ.1ರವರೆಗೆ ರಾಷ್ಟ್ರೋತ್ಥಾನ ಸಾಹಿತ್ಯದ ‘ಕನ್ನಡ ಪುಸ್ತಕ ಹಬ್ಬ’

ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್‌, ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ ಮತ್ತು ಭಾರತೀಯ ಡೈರಿ ಅಸೋಸಿಯೇಷನ್-ದಕ್ಷಿಣ ವಲಯ ಇವರ ಸಂಯುಕ್ತಾಶ್ರಯದಲ್ಲಿ ಈ “ಮೇವು ಮೇಳ” ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಈ ಸುದ್ದಿಯನ್ನೂ ಓದಿ | The Rajasaab Movie: ‘ದಿ ರಾಜಾ ಸಾಬ್’ ಮೋಷನ್ ಪೋಸ್ಟರ್‌ ರಿಲೀಸ್‌; ಸಿಂಹಾಸನದ ಮೇಲೆ ರೆಬೆಲ್‌ ಸ್ಟಾರ್‌ ಪ್ರಭಾಸ್

ಬೀದರ್‌ನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಸಿ. ವೀರಣ್ಣ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಜಗದೀಶ್, ಐ.ಸಿ.ಎ.ಆರ್-ಅಟಾರಿಯ ನಿರ್ದೇಶಕ ಡಾ.ವಿ. ವೆಂಕಟಸುಬ್ರಮಣಿಯನ್, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಆಯುಕ್ತೆ ಶ್ರೀರೂಪ ಅವರು ಭಾಗವಹಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.