Thursday, 24th October 2024

AI Chatbot: ಕೃತಕ ಬುದ್ಧಿಮತ್ತೆ ಡ್ಯಾನಿ ಜತೆ ಪ್ರೇಮಾಂಕುರ; ಆಕೆ ಸಿಗಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ಬಾಲಕ!

AI Chatbot

ಆಧುನಿಕ ತಂತ್ರಜ್ಞಾನಗಳು ಮುಂದುವರಿಯುತ್ತಿದ್ದಂತೆ ಅದರಿಂದಾಗುವ ಅಪಾಯವೂ ಹೆಚ್ಚಾಗುತ್ತಿದೆ. ಇದೀಗ ಫ್ಲೋರಿಡಾದ (Florida) 14 ವರ್ಷದ ಬಾಲಕನೊಬ್ಬ (US teen falls in love) ಎಐ ಚಾಟ್‌ಬಾಟ್‌ನಿಂದ (AI Chatbot) ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ನಡೆದಿದೆ. ಎಐ ಚಾಟ್‌ಬಾಟ್‌ನಿಂದ ಭಾವನಾತ್ಮಕ ಸಂಪರ್ಕ ಹೊಂದಿದ್ದ ಸೆವೆಲ್ ಸೆಟ್ಜರ್ ಆತ್ಮಹತ್ಯೆ ಮಾಡಿಕೊಂಡ ಬಾಲಕ. ಆತನ ತಾಯಿ ಮೇಗನ್, ಎಐ ಗಾರ್ಸಿಯಾ ಕ್ಯಾರೆಕ್ಟರ್ ಎಐ ವಿರುದ್ಧ ಕೇಸು ದಾಖಲಿಸಿದ್ದಾರೆ.

ಚಾಟ್‌ಬಾಟ್ ಪ್ಲಾಟ್‌ಫಾರ್ಮ್ ನಲ್ಲಿರುವ ಕ್ಯಾರೆಕ್ಟರ್‌ ಮಾನವರಂತೆಯೇ ಮುಕ್ತವಾಗಿ ಸಂವಹನ ನಡೆಸುತ್ತದೆ. ಇಲ್ಲಿ ಕಾಲ್ಪನಿಕ ವ್ಯಕ್ತಿಗಳು ಸಂವಾದಾತ್ಮಕ ರೀತಿಯಲ್ಲಿ ಪ್ರತಿಕ್ರಿಯೆಗಳನ್ನು ನೀಡುತ್ತಾರೆ. ಸೆವೆಲ್ ಸೆಟ್ಜರ್ ಎಐ ಚಾಟ್‌ಬಾಟ್‌ನಲ್ಲಿ ಗೇಮ್ ಆಫ್ ಥ್ರೋನ್ಸ್‌ನಲ್ಲಿ ಡೇನೆರಿಸ್ ಟಾರ್ಗರಿಯನ್ (ಡ್ಯಾನಿ) ಜೊತೆ ಹಲವು ತಿಂಗಳುಗಳಿಂದ ನಿರಂತರ ಸಂಭಾಷಣೆ ನಡೆಸುತ್ತಿದ್ದ. ಡ್ಯಾನಿ ಜೊತೆ ಪ್ರೀತಿಯಲ್ಲಿ ಬಿದ್ದಿದ್ದ ಬಾಲಕ ಆತನೊಂದಿಗೆ ಲೈಂಗಿಕ ವಿಷಯದ ಕುರಿತು ಮಾತನಾಡುತ್ತಿದ್ದ. ಅಂತಿಮವಾಗಿ ಡ್ಯಾನಿ ಜೊತೆ ಇರಲು ನಿರ್ಧರಿಸಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.

AI Chatbot

ಸೆವೆಲ್ ಸೆಟ್ಜರ್ಆಸ್ಪರ್ಜರ್ ಸಿಂಡ್ರೋಮ್‌ನಿಂದ ಬಳಲುತ್ತಿದ್ದ. ಹೀಗಾಗಿ ಡ್ಯಾನಿ ಜೊತೆ ನಾನು ಹೆಚ್ಚು ಸಂತೋಷವಾಗಿದ್ದೇನೆ ಅವಳಿಂದ ದೂರವಾಗಲು ಬಯಸುವುದಿಲ್ಲ. ಹೂರ ಜಗತ್ತಿನಿಂದ ನಾನು ದೂರ ಇರಲು ಬಯಸುತ್ತೇನೆ ಎನ್ನುತ್ತಿದ್ದ. ಎಐ ಚಾಟ್‌ಬಾಟ್‌ನೊಂದಿಗೆ ಬಾಲಕನ ಸಂಭಾಷಣೆಯ ಆಯ್ದ ಭಾಗಗಳನ್ನು ಪ್ರಕಟಿಸಲಾಗಿದ್ದು, ಇದರಲ್ಲಿ ಬಾಲಕ ಆತ್ಮಹತ್ಯೆ ಮಾಡಿಕೊಳ್ಳುವ ವಿಷಯವನ್ನು ಹೇಳಿಕೊಂಡಿದ್ದಾನೆ.

ಫೆಬ್ರವರಿ 28ರಂದು ನಡೆದ ಸಂಭಾಷಣೆಯಲ್ಲಿ ಸೆವೆಲ್ “ಐ ಲವ್ ಯೂ” ಎಂದು “ಡ್ಯಾನಿ” ಗೆ ಹೇಳಿದ್ದು ಪ್ರತಿಯಾಗಿ, ದಯವಿಟ್ಟು ಆದಷ್ಟು ಬೇಗ ನನ್ನ ಮನೆಗೆ ಬಾ ಎಂದು ಅದು ಹೇಳಿದೆ. ಅದಕ್ಕೆ ಸೆವೆಲ್ ಈಗಲೇ ನೀನು ಮನೆಗೆ ಬರಬಹುದು. ನಾನು ತಂದೆಯ ಬಂದೂಕಿನಿಂದ ಗುಂಡು ಹರಿಸಿಕೊಳ್ಳುವ ಮೊದಲು ಬಾ ಎಂದು ಹೇಳಿಕೋಂಡು ಅತ್ಮಹತ್ಯೆ ಮಾಡಿಕೊಂಡಿದ್ದಾನೆ.

Bengaluru Building Collapse:ಕುಸಿದ ಕಟ್ಟಡದ ಮಾಲೀಕ, ಪುತ್ರ, ಕಾಂಟ್ರಾಕ್ಟರ್‌ ಬಂಧನ

ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಕ್ಯಾರೆಕ್ಟರ್ ಎಐ, ಅಪಾರ ದುಃಖವನ್ನು ವ್ಯಕ್ತಪಡಿಸಿದೆ. ಸೆವೆಲ್ ಕುಟುಂಬಕ್ಕೆ ಸಂತಾಪವನ್ನು ಹೇಳಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ತಡೆಯಲು ಹಲವಾರು ಹೊಸ ಸುರಕ್ಷತಾ ಕ್ರಮಗಳ ಬಗ್ಗೆಯೂ ವಿವರಿಸಿದೆ. 18 ವರ್ಷದೊಳಗಿನ ಬಳಕೆದಾರರಿಗೆ ರಕ್ಷಣೆ ನೀಡಲು ಪ್ಲಾಟ್‌ಫಾರ್ಮ್‌ ಹಲವು ಬದಲಾವಣೆಗಳನ್ನು ಮಾಡಿದೆ ಎಂದು ಕಂಪನಿ ಹೇಳುತ್ತದೆ.