ರೈತ ಬೆಳೆದ ಕಬ್ಬಿಗೆ ಬೆಲೆ ನೀಡಿ ಸಾಗಿಸಿ
ಖುದ್ದು ಜಿಲ್ಲಾಧಿಕಾರಿಗಳು ಬಂದು ಮನವಿ ಸ್ವೀಕರಿಸುವವರೆಗೆ ಪ್ರತಿಭಟನೆ ನಿಲ್ಲುವುದಿಲ್ಲ
ಚಿಂಚೋಳಿ: ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಒಡೆತನದ ಚಿಂಚೋಳಿ ಸಿದ್ದಸಿರಿ ಎಥಿನಾಲ್ ಸಕ್ಕರೆ ಕಾರ್ಖಾನೆಗೆ ನಂಬಿಕೊಂಡು ಚಿಂಚೋಳಿ, ಕಾಳಗಿ ಮತ್ತು ಸೇಡಂ ಭಾಗದ ಕಬ್ಬು ಬೆಳೆದ ರೈತರು ಸಂಕಷ್ಟದಲ್ಲಿದ್ದಾರೆ. ಬೆಳೆದ ಕಬ್ಬಿಗೆ ಸಾಗಿಸುವ ಪರಿಯಾಯ ಮಾರ್ಗ ಕಲ್ಪಿಸಿ, ರೈತರ ಹಿತಕಾಪಾಡಬೇಕೆಂದು ಚಿಂಚೋಳಿ ತಾಲೂಕು ರೈತ ಹಿತರಕ್ಷಣೆ ಸಮಿತಿ ಅಧ್ಯಕ್ಷ ಅಬ್ದುಲ್ ಬಾಶೀದ್ ಒತ್ತಾಯಿಸಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಚಿಂಚೋಳಿ, ಕಾಳಗಿ, ಸೇಡಂ ಭಾಗದ ರೈತರು ಸಿದ್ದಸಿರಿ ಕಾರ್ಖಾನೆಗೆ ನಂಬಿಕೊಂಡು 6 ಸಾವಿರ ಎಕರೆಕ್ಕಿಂತಲೂ ಹೆಚ್ಚಿನ ಕಬ್ಬು ಬೆಳೆಗಾರರು ಈಗಾಗಲೇ ಕಬ್ಬು ಬೆಳೆದಿದ್ದಾರೆ. ಬೆಳೆದ ಕಬ್ಬು ಕಟಾವು ಹಂತಕ್ಕೆ ಬಂದು ನಿಂತಿದೆ. ಆದರೆ ಲಕ್ಷಾಂತರ ರು ಬಂಡವಾಳ ಹಾಕಿ ಬೆಳೆದ ಕಬ್ಬು ಕಟಾವು ಮಾಡಿಕೊಂಡು ಹೋಗುವವರು ಯಾರು? ಎಂಬ ಪ್ರಶ್ನೆ ಮತ್ತು ಆತಂಕದ ದುಗುಡು ಕಬ್ಬು ಬೆಳೆಗಾರ ರೈತ ಹಣೆಗೆ ಕೈ ಇಟ್ಟುಕೊಂಡು ಚಿಂತೆಯಲ್ಲಿ ರೈತರು ಕುತ್ತಿದ್ದಾರೆ.
ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಅವರ ಒಡೆತನದ ಸಿದ್ದಸಿರಿ ಎಥಿನಾಳ ಸಕ್ಕರೆ ಕಾರ್ಖಾನೆಯು ಸ್ಥಾಪನೆಗೆ ಮುಂಚಿತವಾಗಿ ಬೇಕಾಗಿರುವ ಸರಕಾರದ ಅನುಮತಿಗಳು ಪಡೆಯದೇ ಕಾರ್ಖಾನೆ ಕಾಮಗಾರಿ ಪ್ರಾರಂಭಿಸಿ, ಸ್ಥಾಪಿಸಿದ್ದರಿಂದ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯವರು ಕಾರ್ಖಾನೆಯ ಎಥಿನಾಲ್ ಉತ್ಪಾದ ನೆಯ ಕಾರ್ಯ ಚಟುವಟಿಕೆಗಳು ಸ್ಥಗಿತಗೊಳಿಸಲಾಗಿದೆ.
ಹೀಗಾಗಿ ಈ ಪ್ರಕರಣವು ಸುಪ್ರೀಂ ಕೋರ್ಟ್ ಹಂತದಲ್ಲಿದಲ್ಲಿ ನಡೆಯುತ್ತಿದೆ. ಹೀಗಾಗಿ ರೈತರು ಬೆಳೆದ ಕಬ್ಬಿಗೆ ತುಕ್ಕದ ಬೆಲೆಯನ್ನು ನೀಡಿ, ಬೇರೊಂದು ಕಾರ್ಖಾನೆಗೆ ಸಾಗಿಸುವ ಕೆಲಸ ಜಿಲ್ಲಾಧಿಕಾರಿಗಳು ಸರಕಾರದಿಂದಾಗಲಿ ಅಥವಾ ಕಾರ್ಖಾನೆಯಿಂದಾಗಲಿ ರೈತರ ಕಬ್ಬು ಕಟ್ಟಾವು ಮಾಡಿಕೊಂಡು ಸಾಗಿಸುವ ಸೂಕ್ತ ಕ್ರಮ ಕೈಗೊಳಬೇಕೆಂದು ಆಗ್ರಹಿಸಿ ಇದೇ ಅ. 29 ರಂದು ಬೃಹತ್ ಪ್ರತಿಭಟನೆಯನ್ನು ನಡೆಸಲು ತಾಲೂಕು ರೈತ ಹಿತರಕ್ಷಣೆ ಸಮಿತಿ ಅಧ್ಯಕ್ಷ ಅಬ್ದುಲ್ ಬಾಶೀದ್ ಕರೆ ನೀಡಿದ್ದಾರೆ. ಈ ಪ್ರತಿಭಟನೆಯ ಬೇಡಿಕೆಗಳ ಮನವಿ ಪತ್ರವು ಸ್ವತಃ ಜಿಲ್ಲಾಧಿಕಾರಿಗಳೇ ಬಂದು ಮನವಿ ಸ್ವೀಕರಿಸಿ, ರೈತರು ಬೆಳೆದ ಕಬ್ಬಿಗೆ ಸಾಗಿಸುವ ನ್ಯಾಯ ಒದಗಿಸಿ ಕೊಡುವ ಭರವಸೆ ಕೊಡುವವರೆಗೂ ಪ್ರತಿಭಟನೆಯನ್ನು ಕೈ ಬಿಡುವುದಿಲ್ಲವೆಂದು ಸಮಿತಿ ತಿಳಿಸಿದೆ.
ಶರಣು ಪಾಟೀಲ್ ಮೋಟಕಪಳ್ಳಿ, ಬಸವರಾಜ ಸಜ್ಜನ ಶೆಟ್ಟಿ ಸುಲೇಪೇಟ, ಲಕ್ಷ್ಮಣ ಆವಂಟಿ, ಸಂಘಟಕ ಮಾರುತಿ ಗಂಜಗಿರಿ ಅವರು ಮಾತನಾಡಿದರು.
ಈ ಸಂಧರ್ಭದಲ್ಲಿ ಜಗನ್ನಾಥ ಗುತ್ತೇದಾರ, ಶ್ರೀನಿವಾಸ ಬಂಡಿ, ನಾಗೇಶ ಗುಣಾಜಿ, ಫರೀದ್, ಶಬ್ಬೀರ, ಆರ್ ಗಣಪತರಾವ್, ವಿಠಲ್ ರೆಡ್ಡಿ, ನಂದಿಕುಮಾರ ಪಾಟೀಲ್, ಗುಂಡಯ್ಯಸ್ವಾಮಿ, ಮಲ್ಲಿಕಾರ್ಜುನ್ ಭೂಶೆಟ್ಟಿ, ರೇವಣಸಿದ್ಧ ಅಣಕಲ್, ನೀಲಕಂಠ ಸಿಳ್ಳಿನ, ಅಲ್ಲಾವುದ್ದಿನ್ ಅನ್ಸಾರಿ ಸೇರಿ ಹಲವು ರೈತರು ಉಪಸ್ಥಿತರಿದ್ದರು.
ಇದನ್ನೂ ಓದಿ: Kalaburagi Breaking: ತುಮಕುಂಟಾ: ಅಪರಿಚಿತ ವ್ಯಕ್ತಿಯ ಶವ ಪತ್ತೆ