ಬೆಂಗಳೂರು : ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ 7 ವಿಕೆಟ್ ಕಬಳಿಸಿದ ಭಾರತ ತಂಡದ ಸ್ಪಿನ್ ಬೌಲರ್ ವಾಷಿಂಗ್ಟನ್ ಸುಂದರ್ಗೆ (Washington Sundar) ಕೋಚ್ ಗೌತಮ್ ಗಂಭೀರ್ ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ. ಮೊದಲ ಪಂದ್ಯದ ವೇಳೆ ವಾಷಿಂಗ್ಟನ್ ಸುಂದರ್ ಭಾರತ ತಂತಡದಲ್ಲಿ ಅವಕಾಶ ಪಡೆದಿರಲಿಲ್ಲ. ಪುಣೆ ಟೆಸ್ಟ್ ಪಂದ್ಯಕ್ಕೆ ಮೊದಲು ಅವರಿಗೆ ಏಕಾಏಕಿ ಕರೆಸಿಕೊಳ್ಳಲಾಗಿತ್ತು. ಬಳಿಕ ಅವರಿಗೆ ಆಡುವ ಬಳಗದಲ್ಲಿ ಅವಕಾಶ ನೀಡಲಾಯಿತು. ತಮ್ಮ ಮೇಲೆ ಟೀಮ್ ಮ್ಯಾನೇಜ್ಮೆಂಟ್ ಇಟ್ಟಿದ್ದ ಭರವಸೆಯನ್ನು ಅವರು ಉಳಿಸಿಕೊಂಡಿದ್ದಾರೆ.
— Kirkit Expert (@expert42983) October 24, 2024
ಭಾರತದ ಪರ ರವಿಚಂದ್ರನ್ ಅಶ್ವಿನ್ ಮೊದಲ ಮೂರು ವಿಕೆಟ್ ಪಡೆದ ನಂತರ ಸುಂದರ್ ತಮ್ಮ ಆಫ್-ಸ್ಪಿನ್ ಮೂಲಕ ಎದುರಾಳಿ ತಂಡದ ಮೇಲೆ ದಾಳಿ ನಡೆಸಲು ಆರಂಭಿಸಿದರು. ಅವರ ಸ್ಪಿನ್ ಪ್ರಭಾವದಿಂದಾಗಿ ನ್ಯೂಜಿಲೆಂಡ್ ತಂಡ ಕೇವಲ 259 ರನ್ಗಳಿಗೆ ಆಲೌಟ್ ಆಯಿತು. ರೋಹಿತ್ ಶರ್ಮಾ ಸುಂದರ್ ಗೆ ಸತತ ಹಲವು ಓವರ್ ನೀಡುವ ಮೂಲಕ ಬೆಂಬಲಿಸಿದರು.
ಇದನ್ನೂ ಓದಿ: Virat Kohli : ಪುಟಾಣಿ ಅಭಿಮಾನಿಗೆ ಆಟೋಗ್ರಾಫ್ ನೀಡಿದ ಕೊಹ್ಲಿ; ವಿಡಿಯೊ ಇದೆ
ಮೊದಲ ಇನಿಂಗ್ಸ್ ಮುಗಿದ ಬಳಿಕ ವಾಷಿಂಗ್ಟನ್ ಸುಂದರ್ ತಮ್ಮ ತಂಡದ ಆಟಗಾರರೊಂದಿಗೆ ಪೆವಿಲಿಯನ್ಗೆ ಮರಳಿದರು. ಎಂಸಿಎ ಪ್ರೇಕ್ಷಕರು ಅವರ ಅದ್ಭುತ ಬೌಲಿಂಗ್ ಪ್ರದರ್ಶನಕ್ಕಾಗಿ ಸುಂದರ್ ಪರವಾಗಿ ಹರ್ಷೋದ್ಗಾರ ಮಾಡಿದರು. ಈ ವೇಳೆ ಪೆವಿಲಿಯನ್ ಮೇಲೆ ನಿಂತಿದ್ದ ಕೋಚ್ ಗೌತಮ್ ಗಂಭೀರ್ ಎದ್ದು ನಿಂತು ಚಪ್ಪಾಳೆ ತಟ್ಟಿದ್ದರು.