ನವದೆಹಲಿ: ರಾಷ್ಟ್ರೀಯವಾದಿ ಕಾಂಗ್ರೆಸ್ (NCP) ಪಕ್ಷದ ಗಡಿಯಾರ(Clock) ಚಿಹ್ನೆಯನ್ನುಅಜಿತ್ ಪವಾರ್( Ajit Pawar) ಬಣ ಬಳಸಿಕೊಳ್ಳಬಹುದು ಎಂದು ಗುರುವಾರ ಸುಪ್ರೀಂ ಕೋರ್ಟ್(Supreme Court) ಆದೇಶ ನೀಡಿದೆ. ಕೋರ್ಟಿನ ಈ ತೀರ್ಪಿನಿಂದಾಗಿ ಹಿರಿಯ ನಾಯಕ ಶರದ್ ಪವಾರ್(Sharad Pawar) ಬಣಕ್ಕೆ ಹಿನ್ನಡೆಯಾಗಿದೆ. ಅಜಿತ್ ಪವಾರ್ ಬಣವು ತನ್ನ ಹಿಂದಿನ ಆದೇಶವನ್ನು ಅನುಸರಿಸಬೇಕು ನ್ಯಾಯಾಲಯವು ಹೇಳಿದೆ.
“ನಮ್ಮ ಆದೇಶವನ್ನು ಉಲ್ಲಂಘಿಸಲು ಉದ್ದೇಶಪೂರ್ವಕ ಪ್ರಯತ್ನ ನಡೆಯುತ್ತಿದೆ ಎಂದು ನಮಗೆ ಭಾವಿಸಿದರೆ, ನಾವು ಸ್ವಯಂ ಪ್ರೇರಿತವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ದೀಪಂಕರ್ ದತ್ತಾ ಹಾಗೂ ಉಜ್ಜಲ್ ಭುಯಾನ್ ಒಳಗೊಂಡ ಪೀಠ ಹೇಳಿದೆ.
2023ರ ಜು. 3ರಂದು ಅಜಿತ್ ಪವಾರ್ ಅವರು ಎನ್ಸಿಪಿಯ ತನ್ನ 24 ಶಾಸಕರೊಂದಿಗೆ ಆಡಳಿತಾರೂಢ ಶಿವಸೇನೆ – ಬಿಜೆಪಿ ಸರ್ಕಾರವನ್ನು ಸೇರಿಕೊಂಡಿದ್ದರು. ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅವರೊಂದಿಗೆ ಬಂದಿದ್ದ ಕೆಲವರಿಗೆ ಸರ್ಕಾರದಲ್ಲಿ ಸಚಿವ ಸ್ಥಾನಗಳನ್ನೂ ನೀಡಲಾಗಿತ್ತು. ಆಗಲೇ, ಪವಾರ್ ಎನ್ ಸಿಪಿಯ ಮೂರನೇ ಎರಡರಷ್ಟು ಶಾಸಕರು ತಮ್ಮೊಂದಿಗಿದ್ದಾರೆ ಎಂದು ಹೇಳಿದ್ದರು. ಆದ್ದರಿಂದ ಪಕ್ಷದ ಹೆಸರು ಹಾಗೂ ಚಿಹ್ನೆ ಎರಡೂ ತಮ್ಮ ಬಣಕ್ಕೇ ಸಿಗಲಿವೆ ಎಂದು ಅಜಿತ್ ಪವಾರ್ ವಾದಿಸಿದ್ದರು.
ಅಜಿತ್ ಪವಾರ್ ಬಣವೇ ನಿಜವಾದ ಎನ್ಸಿಪಿ ಎಂದು ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ನೀಡುವಂತೆ ಚುನಾವಣಾ ಆಯೋಗ ಮಹತ್ವದ ತೀರ್ಪನ್ನು ನೀಡಿತ್ತು. ಆಯೋಗವು , ಪಕ್ಷದ ಶಾಸಕರು, ಸಂಸದರು ಹಾಗೂ ಪಕ್ಷದ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಯಾವ ಬಣಕ್ಕೆ ಬೆಂಬಲ ಸೂಚಿಸುತ್ತಾರೆ ಎಂಬ ಮಾರ್ಗವನ್ನು ಅನುಸರಿಸಿ ಈ ತೀರ್ಪನ್ನು ನೀಡಲಾಗಿತ್ತು. ಎನ್ಸಿಪಿಯ ಪದಾಧಿಕಾರಿಗಳು, ಶಾಸಕರು ಹಾಗೂ ಸಂಸದರಲ್ಲಿ ಬಹುತೇಕ ಮಂದಿ ಅಜಿತ್ ಪವಾರ್ ಅವರಿಗೇ ತಮ್ಮ ಬೆಂಬಲ ವ್ಯಕ್ತಪಡಿಸಿದ್ದರಿಂದಾಗಿ ಪಕ್ಷದ ಚಿಹ್ನೆ ಹಾಗೂ ಹೆಸರು ಅವರ ಬಣಕ್ಕೇ ನೀಡಲಾಗಿದೆ ಎಂದು ಆಯೋಗವು ತನ್ನ ಪ್ರಕಟಣೆಯಲ್ಲಿ ತಿಳಿಸಿತ್ತು.
ಚುನಾವಣಾ ಆಯೋಗದ ಈ ತೀರ್ಪನ್ನ ಪ್ರಶ್ನಿಸಿ ಶರದ್ ಪವಾರ್ ಬಣ ಸುಪ್ರೀಂ ಕೋರ್ಟ್ಗೆ ಮೊರೆ ಹೋಗಿದ್ದರು. ಇದೀಗ ಅದರ ತೀರ್ಪು ಹೊರಬಿದ್ದಿದ್ದು ಶರತ್ ಪವಾರ್ ಬಣ ಹಿನ್ನಡೆ ಅನುಭವಿಸಿದ್ದಾರೆ. ಶರತ್ತು ಬದ್ಧವಾಗಿ ಪಕ್ಷದ ಚಿಹ್ನೆ ಬಳಸುವಂತೆ ಅಜಿತ್ ಪವಾರ್ ಬಣಕ್ಕೆ ಕೋರ್ಟ್ ತಾಕೀತು ಮಾಡಿದೆ. ಇನ್ನೇನು ಮಹಾರಾಷ್ಟ್ರದ ಚುನಾವಣೆ ಹತ್ತಿರವಾಗುತ್ತಿದ್ದಂತೆ ಈ ತೀರ್ಪು ಹೊರ ಬಿದ್ದಿದ್ದು ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ ಎಂದು ಕಾದು ನೋಡ ಬೇಕಿದೆ. ಶರದ್ ಪವಾರ್ ಅವರು 1999 ರಲ್ಲಿ ಕಾಂಗ್ರೆಸ್ನಿಂದ ಹೊರ ಬಂದ ನಂತರ ಮಾಜಿ ಲೋಕಸಭಾ ಸ್ಪೀಕರ್ ಪೂರ್ಣೋ ಸಂಗ್ಮಾ ಮತ್ತು ತಾರಿಕ್ ಅನ್ವರ್ ಅವರೊಂದಿಗೆ ಸೇರಿ ಎನ್ಸಿಪಿ ಸ್ಥಾಪಿಸಿದ್ದರು.