Sunday, 24th November 2024

Viral Video: ಸ್ಕೂಟರ್ ಚಲಾಯಿಸಿದ ಬಾಲಕಿ; ನೆಟ್ಟಿಗರು ಆಕ್ಷೇಪಿಸಿದ್ದೇಕೆ?

Viral Video

ತಂದೆಯ ಎದುರು ಕುಳಿತ ಚಿಕ್ಕ ಹುಡುಗಿಯೊಬ್ಬಳು ಸ್ಕೂಟರ್ ಬಿಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದ್ದು, ಸಾಕಷ್ಟು ಮಂದಿಯ ಆಕ್ರೋಶಕ್ಕೆ ಕಾರಣವಾಗಿದೆ. ಅನೇಕ ಬಳಕೆದಾರರು ಇದು ಸರಿಯೇ ಎಂದು ಪ್ರಶ್ನಿಸಿದ್ದಾರೆ. ವಾಹನ ಚಲಾಯಿಸಲು ನಿರ್ದಿಷ್ಟ ವಯಸ್ಸು ಮತ್ತು ಚಾಲನಾ ಪರವಾನಗಿ ಹೊಂದಿರುವುದು ಮುಖ್ಯವಾಗಿದೆ. ಆದರೆ ಇಲ್ಲಿ ತಂದೆಯೊಬ್ಬ ಸಣ್ಣ ವಯಸ್ಸಿನ ಮಗಳು ಸ್ಕೂಟರ್ ಚಲಾಯಿಸಲು ಬಿಟ್ಟಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಚಾಲಕರು ಸುರಕ್ಷಿತವಾಗಿ ವಾಹನವನ್ನು ನಿರ್ವಹಿಸುವ ಹಂತವನ್ನು ತಲುಪಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ವಿಶ್ವದ ಪ್ರತಿಯೊಂದು ದೇಶದಲ್ಲೂ ನಿರ್ದಿಷ್ಟ ವಯಸ್ಸನ್ನು ನಿಗದಿಪಡಿಸಲಾಗುತ್ತದೆ. ಆದರೂ ಈ ಕಾನೂನು ಮುರಿದು ಕೆಲವು ಮಕ್ಕಳು ಬೈಕು ಅಥವಾ ಕಾರುಗಳನ್ನು ಓಡಿಸುತ್ತಾರೆ. ಪೋಷಕರು ಇದಕ್ಕೆ ಅನುಮತಿಯನ್ನೂ ಕೊಡುತ್ತಾರೆ. ಇಂತಹ ಸಂದರ್ಭಗಳಲ್ಲಿ ಅಪಘಾತಗಳಾದರೆ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮಗಳು ಸ್ಕೂಟರ್ ಚಲಾಯಿಸುತ್ತಿರುವುದನ್ನು ತಂದೆ ಹೆಮ್ಮೆ ಎಂದುಕೊಂಡು ಬೀಗಿರುವುದು ನೋಡಿ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಛತ್ರಪತಿ ಸಂಭಾಜಿನಗರದಿಂದ ಆಘಾತಕಾರಿ ದೃಶ್ಯಗಳು ಎಂದು ಪೋಸ್ಟ್ ಮಾಡಲಾದ ವಿಡಿಯೋದಲ್ಲಿ ಶಾಲೆಯ ಸಮವಸ್ತ್ರದಲ್ಲಿರುವ ಹುಡುಗಿ ತನ್ನ ತಂದೆಯೊಂದಿಗೆ ಸ್ಕೂಟರ್ ಓಡಿಸುತ್ತಿರುವುದನ್ನು ಕಾಣಬಹುದು. ತಂದೆ ಮಗಳು ಇಬ್ಬರೂ ಹೆಲ್ಮೆಟ್ ಇಲ್ಲದೆ ಸ್ಕೂಟರ್ ಚಲಾಯಿಸುತ್ತಿರುವುದು ಕಾಣಬಹುದು. ವೈರಲ್ ಆಗಿರುವ ವಿಡಿಯೋ ನೋಡಿದ ಅನೇಕರು ನಿರ್ಲಕ್ಷ್ಯ ತಂದೆ ಎಂದು ಹೇಳಿದ್ದಾರೆ. ಕೆಲವರು ಮಕ್ಕಳ ಬಗ್ಗೆ ನಿರ್ಲಕ್ಷ್ಯ ಬೇಡ, ಜವಾಬ್ದಾರರಾಗಿ ಎಂದಿದ್ದಾರೆ.

ಒಬ್ಬರು ಕಾಮೆಂಟ್ ಮಾಡಿ, ಇದರಿಂದಾಗಿಯೇ ಅನೇಕ ಅಪಘಾತಗಳು ಸಂಭವಿಸುತ್ತಿವೆ. ಇದು ಯಾವ ರೀತಿಯ ಕಾನೂನು ಪಾಲನೆ ಎಂದು ಪ್ರಶ್ನಿಸಿದ್ದರೆ, ಇನ್ನೊಬ್ಬರು ಹೆಲ್ಮೆಟ್ ಎಲ್ಲಿದೆ ಸರ್ ? ನೀವು ಹಾಕಿಲ್ಲ, ಮಗಳಿಗೂ ಹಾಕಿಸಿಲ್ಲ ಎಂದಿದ್ದಾರೆ. ಇನ್ನು ಕೆಲವರು ತಂದೆ ಯಾವುದೇ ತಪ್ಪು ಮಾಡುತ್ತಿಲ್ಲ. ತಂದೆ ಮಗಳ ಮುದ್ದಾದ ದೃಶ್ಯ ಎಂದಿದ್ದಾರೆ. ಪ್ರಪಂಚದಾದ್ಯಂತ ಹಲವಾರು ಮಕ್ಕಳು ತಮ್ಮ ಪೋಷಕರ ಸ್ಕೂಟರ್, ಕಾರುಗಳನ್ನು ತೆಗೆದುಕೊಂಡು ಹೋಗುವಾಗ ಸಂಚಾರಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ಘಟನೆಗಳು ನಡೆದಿವೆ. ಕೆಲವು ಪ್ರಕರಣಗಳಲ್ಲಿ ಅಪಘಾತ ನಡೆದು ಇತರರಿಗೆ ಹಾನಿ ಮಾಡಿರುವುದೂ ಇದೆ.

Uttara Pradesh: 9 ವರ್ಷದ ದ್ವೇಷ; ಚಪ್ಪಲಿ ಹಾರ ಹಾಕಿ ಅವಮಾನ ಮಾಡಿದವನನ್ನೇ ಕೊಂದ!

ದೆಹಲಿಯಲ್ಲಿ ನಡೆದ ಘಟನೆಯೊಂದರಲ್ಲಿ ಚಿಕ್ಕಪ್ಪನ ಕಾರು ಚಲಾಯಿಸುತ್ತಿದ್ದ ಬಾಲಕನೊಬ್ಬ ರಿಕ್ಷಾ ಚಾಲಕನಿಗೆ ಡಿಕ್ಕಿ ಹೊಡೆದು ಆತನ ಸಾವಿಗೆ ಕಾರಣನಾಗಿದ್ದಾನೆ. ಇನ್ನೊಂದು ಘಟನೆಯೊಂದರಲ್ಲಿ 17 ವರ್ಷದ ಯುವಕ ಚಲಾಯಿಸುತ್ತಿದ್ದ ಕಾರು ಬೈಕ್ ಗೆ ಡಿಕ್ಕಿಯಾಗಿ ಇಬ್ಬರು ಸಾಫ್ಟ್‌ವೇರ್ ಎಂಜಿನಿಯರ್‌ಗಳನ್ನು ಸಾವನ್ನಪ್ಪಿದ್ದರು.