Sunday, 24th November 2024

E-Shram portal: ಇ ಶ್ರಮ್; ಒಂದೇ ಸೂರಿನಡಿ 12 ಯೋಜನೆಗಳು!

E-Shram portal

ಅಸಂಘಟಿತ ಕಾರ್ಮಿಕರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು (Central Government) ಇ-ಶ್ರಮ್ ಪೋರ್ಟಲ್ ನಲ್ಲಿ (E-Shram portal) 12 ಯೋಜನೆಗಳನ್ನು (welfare schemes) ಒಗ್ಗೂಡಿಸಿ ‘ಇಶ್ರಮ್-ಒನ್ ಸ್ಟಾಪ್ ಪರಿಹಾರ’ ವನ್ನು (eShram-One Stop Solution) ಪ್ರಾರಂಭಿಸಿದೆ. ಇದು ಅಸಂಘಟಿತ ವಲಯದ ಉದ್ಯೋಗಿಗಳನ್ನು (unorganised workers) ಪ್ರೋತ್ಸಾಹಿಸುವ ಪ್ರಯತ್ನಗಳಲ್ಲಿ ಒಂದು ಮೈಲುಗಲ್ಲು ಎಂದು ಪರಿಗಣಿಸಲಾಗಿದೆ.

ಇ-ಶ್ರಮ್ ಪೋರ್ಟಲ್ ನಲ್ಲಿ ‘ಇಶ್ರಮ್-ಒನ್ ಸ್ಟಾಪ್ ಪರಿಹಾರ’ ದ ಮೂಲಕ ಅಸಂಘಟಿತ ವಲಯದ ಕಾರ್ಮಿಕರಿಗೆ ವಿವಿಧ ಕಲ್ಯಾಣ ಯೋಜನೆಗಳ ಪ್ರಯೋಜನ ಪಡೆಯಲು ಸುಲಭ ಪ್ರವೇಶವನ್ನು ಸುವ್ಯವಸ್ಥಿತಗೊಳಿಸುವ ಗುರಿಯನ್ನು ಹೊಂದಿದೆ.

ಒಂದೇ ಪ್ಲಾಟ್‌ಫಾರ್ಮ್‌ನಲ್ಲಿ ಅನೇಕ ಯೋಜನೆಗಳನ್ನು ಸಂಯೋಜಿಸುವುದರಿಂದ ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನವನ್ನು ಪಡೆಯುವುದು ಕಾರ್ಮಿಕರಿಗೆ ಸುಲಭವಾಗಲಿದೆ.

ಅಸಂಘಟಿತ ಕಾರ್ಮಿಕರು ಅನೇಕ ವೇಳೆ ವಿವಿಧ ವಲಯ, ಪ್ರದೇಶಗಳಲ್ಲಿ ಚದುರಿ ಹೋಗಿರುತ್ತಾರೆ. ಅರಿವಿನ ಕೊರತೆ ಹಾಗೂ ವಿವಿಧ ಕಾರಣಗಳಿಂದ ಸರ್ಕಾರದ ಪ್ರಯೋಜನಗಳನ್ನು ಪಡೆಯುವಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಾರೆ.

ಆದರೆ ಇ ಶ್ರಮ್ ಪೋರ್ಟಲ್ ಎಲ್ಲ ಯೋಜನೆಗಳನ್ನು ಕ್ರೋಢೀಕರಿಸುವ ಮೂಲಕ ಕಾರ್ಮಿಕರು ಸುಲಭವಾಗಿ ಮಾಹಿತಿ ಪಡೆಯಬಹುದು. ಜೊತೆಗೆ ಬಳಕೆಗೆ ಸ್ನೇಹಿಯಾಗಿರುವ ವೆಬ್ ಸೈಟ್ ಮೂಲಕ ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದು.

ಇದು ನೋಂದಣಿ, ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಸರಳಗೊಳಿಸುವುದಲ್ಲದೆ ಕಾರ್ಮಿಕರಿಗೆ ಅರ್ಹವಾದ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಇ-ಶ್ರಮ ಪೋರ್ಟಲ್‌ನಲ್ಲಿ ಯೋಜನೆಗಳ ಏಕೀಕರಣವು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮತ್ತು ಪರಿಶೀಲನೆ ಪ್ರಕ್ರಿಯೆಗಳನ್ನು ತ್ವರಿತಗೊಳಿಸುತ್ತದೆ. ವಿವಿಧ ಸೌಲಭ್ಯ ಪಡೆಯಲು ಅನೇಕ ಸರ್ಕಾರಿ ಇಲಾಖೆಗಳಿಗೆ ಕಾರ್ಮಿಕರು ಅಲೆದಾಡುವುದನ್ನು ತಪ್ಪಿಸುತ್ತದೆ. ಆಡಳಿತಾತ್ಮಕ ಕಾರ್ಯವಿಧಾನಗಳನ್ನು ಸುಲಭಗೊಳಿಸಿ ಸಮಯ, ಸಂಪನ್ಮೂಲಗಳ ಉಳಿತಾಯಕ್ಕೆ ಕೊಡುಗೆಯನ್ನು ನೀಡುತ್ತದೆ. ಈ ಪೋರ್ಟಲ್‌ನ ವಿನ್ಯಾಸವು ಪ್ರಾದೇಶಿಕ ಭಾಷೆಗಳಲ್ಲಿ ಸೇವೆಗಳನ್ನು ನೀಡಲಿದ್ದು, ಇದು ಎಲ್ಲರಿಗೂ ಸುಲಭವಾಗಿ ಪ್ರವೇಶಿಸಲು ಸಾಧ್ಯವಾಗುವಂತೆ ಮಾಡುತ್ತದೆ.

ಇಶ್ರಮ್ ಪೋರ್ಟಲ್‌ನಲ್ಲಿ ವಿವಿಧ ಯೋಜನೆಗಳ ಏಕೀಕರಣವು ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಗೆ ಹೆಚ್ಚು ಒತ್ತು ನೀಡಲಾಗಿದೆ. ಈ ಯೋಜನೆಗಳು ಆರೋಗ್ಯ ವಿಮೆ, ಪಿಂಚಣಿ ಯೋಜನೆ, ತುರ್ತು ಸಂದರ್ಭಗಳಲ್ಲಿ ಹಣಕಾಸಿನ ನೆರವು ಸೇರಿದಂತೆ ವ್ಯಾಪಕ ಪ್ರಯೋಜನಗಳನ್ನು ನೀಡುತ್ತವೆ.

Indian Army: ಭಾರತೀಯ ಸೇನೆ ತಾಂತ್ರಿಕ ಪ್ರವೇಶ ಯೋಜನೆಗೆ ಅರ್ಜಿ ಆಹ್ವಾನ

ಔಪಚಾರಿಕ ಉದ್ಯೋಗ ಒಪ್ಪಂದ, ಉದ್ಯೋಗ ಭದ್ರತೆ ಇಲ್ಲದಿರುವ ಕಾರ್ಮಿಕರಿಗೆ ಇದು ಸಾಕಷ್ಟು ಪ್ರಯೋಜನವನ್ನು ಒದಗಿಸಲಿದೆ. ಇಶ್ರಮ್ ಪೋರ್ಟಲ್‌ನಲ್ಲಿ ಈಗಾಗಲೇ 30 ಕೋಟಿಗೂ ಹೆಚ್ಚು ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ.