Wednesday, 20th November 2024

Pak vs Eng : ಪಾಕ್‌ ಕ್ರೀಡಾ ವರದಿಗಾರ ಕೇಳಿದ ಪ್ರಶ್ನೆ ಅರ್ಥವಾಗದೆ ತಲೆ ಕೆರೆದುಕೊಂಡ ಸ್ಟೋಕ್ಸ್:‌ ವಿಡಿಯೋ ವೈರಲ್

Pak vs Eng

ಇ‌ಸ್ಲಾಮಾಬಾದ್: ಪಾಕಿಸ್ತಾನ ಹಾಗೂ ಇಂಗ್ಲೆಂಡ್‌(Pak vs Eng) ನಡುವಿನ ಮೂರನೆ ಟೆಸ್ಟ್‌ ಪಂದ್ಯಕ್ಕೂ(Test Cricket Match) ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಾಕಿಸ್ತಾನಿ ವರದಿಗಾರನೊಬ್ಬ (Pakistan Reporter) ಕೇಳಿದ ಪ್ರಶ್ನೆ ಅರ್ಥವಾಗದೆ ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್‌(Ben Stokes) ಗೊಂದಲಕ್ಕೊಳಗಾದ ಹಾಸ್ಯಮಯ ಘಟನೆ ನಡೆದಿದೆ. ಪಾಕಿಸ್ತಾನಿ ವರದಿಗಾರನ ಭಾಷಾ ಸಮಸ್ಯೆಯಿಂದ ನಾಯಕ ಸ್ಟೋಕ್ಸ್‌ ಕೆಲ ಹೊತ್ತು ಗೊಂದಲಕ್ಕೊಳಗಾದರು.

ಮುಲ್ತಾನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ 823 ರನ್‌ಗಳ ಸಾಧನೆ ಮಾಡಿತ್ತು. ಈ ಕುರಿತು ಮಾಧ್ಯಮ ಗೋಷ್ಠಿಯಲ್ಲಿ ಪ್ರಶ್ನೆ ಕೇಳಿದ ಪಾಕಿಸ್ತಾನದ ವರದಿಗಾರನೊಬ್ಬ 3 ನೇ ಟೆಸ್ಟ್‌ ಪಂದ್ಯದಲ್ಲೂ ಈ ಓಟ ಮುಂದುವರಿಯುವುದೇ ಎಂದು ಇಂಗ್ಲಿಷ್‌ನಲ್ಲಿ ಕೇಳಲು ಸ್ವಲ್ಪ ತಡವರಿಸಿದ್ದರು. ವರದಿಗಾರ ತಮಗೆ ಏನು ಕೇಳುತ್ತಿದ್ದಾರೆ ಎಂದು ಅರ್ಥವಾಗದೆ ತಲೆ ಕೆರೆದುಕೊಂಡಿದ್ದಾರೆ. ಸ್ಟೋಕ್ಸ್‌ ಪಾಕ್‌ ವರದಿಗಾರನಿಗೆ ಮೂರು ಬಾರಿ ಪುನರಾವರ್ತಿಸಲು ಹೇಳಿದರೂ ಅವರಿಗೆ ಅರ್ಥವಾಗಲಿಲ್ಲ.

ಭಾಷಾ ಸಂವಹನದ ಬಗ್ಗೆ ಕ್ಷಮೆ ಕೇಳಿದ ಇಂಗ್ಲೆಂಡಿನ ನಾಯಕ ಎರಡನೇ ಟೆಸ್ಟ್‌ ಪಂದ್ಯದ ಸೋಲಿನ ಬಳಿಕ 3ನೇ ಪಂದ್ಯವನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. “ರಾವಲ್ಪಿಂಡಿಯ ಮೈದಾನ ಸ್ಪಿನ್‌ ಸ್ನೇಹಿಯಾಗಿದೆ. ಈ ಪಂದ್ಯ ಎರಡೂ ತಂಡಕ್ಕೂ ನಿರ್ಣಾಯಕ ಪಂದ್ಯವಾಗಿದ್ದು ನಮ್ಮ ಸ್ಪಿನ್ನರ್‌ಗಳ ಬಗ್ಗೆ ಭರವಸೆಯಿದೆ ಎಂದರು . ಎರಡು ವರ್ಷಗಳ ಹಿಂದೆ ಆತಿಥೇಯರನ್ನು 3-0 ಅಂತರದಿಂದ ಸೋಲಿಸಿದ ನಂತರ ಇಂಗ್ಲೆಂಡ್ ಪಾಕಿಸ್ತಾನದಲ್ಲಿ ಸತತ ಎರಡನೇ ಟೆಸ್ಟ್ ಸರಣಿ ಗೆಲುವಿಗಾಗಿ ಹಣಾಹಣಿ ನಡೆಸುತ್ತಿದೆ.

ಇದನ್ನೂ ಓದಿ : R Ashwin : ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ ಆರ್. ಅಶ್ವಿನ್‌

ಕೆಲ ದಿನಗಳ ಹಿಂದೆಯಷ್ಟೇ ಪಾಕಿಸ್ತಾನ ಹೊಸ ಆಯ್ಕೆ ಸಮಿತಿ ಬಾಬರ್‌ ಅಜಮ್‌ ಹಾಗೂ ಶಾಹೀನ್‌ ಆಫ್ರೀದಿನ್ನು ಕೈ ಬಿಟ್ಟಿತ್ತು. ನಂತರ ಮುಲ್ತಾನ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಜಯಗೊಳಿಸಿ ಸಮ ಬಲ ಸಾಧಿಸಿದೆ.

ಭಾರತ- ಕಿವೀಸ್‌ ಪಂದ್ಯ

ಒಂದೆಡೆ ಭಾರತ ಹಾಗೂ ನ್ಯೂಜಿಲೆಂಡ್ ಪುರುಷ ತಂಡಗಳ ನಡುವೆ ಮೂರು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದ್ದರೆ ಇನ್ನೊಂದೆಡೆ ಇದೇ ಭಾರತ ಹಾಗೂ ನ್ಯೂಜಿಲೆಂಡ್ ಮಹಿಳಾ ತಂಡಗಳ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ಇಂದಿನಿಂದ ಅಹಮದಾಬಾದ್‌ನಲ್ಲಿ ಆರಂಭವಾಗಿದೆ. ಉಭಯ ತಂಡಗಳ ನಡುವೆ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ಟೀಂ ಇಂಡಿಯಾ, ಹಾಲಿ ಟಿ20 ವಿಶ್ವಕಪ್ ಚಾಂಪಿಯನ್ ನ್ಯೂಜಿಲೆಂಡ್ ತಂಡವನ್ನು ಬರೋಬ್ಬರಿ 59 ರನ್​ಗಳಿಂದ ಮಣಿಸಿದೆ.

ಈ ಮೂಲಕ ಟಿ20 ವಿಶ್ವಕಪ್ ಲೀಗ್​ ಸುತ್ತಿನ ಮೊದಲ ಪಂದ್ಯದಲ್ಲಿನ ಸೋಲಿಗೆ ಸೇಡು ತೀರಿಸಿಕೊಂಡಿದೆ. ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಮೊದಲದಿನದ ಏಕ ದಿನ ಪಂದ್ಯದ ಹೊರಗಿರುವ ನಾಯಕಿ ಹರ್ಮನ್‌ ಪ್ರೀತ್‌ ಕೌರ್‌ ಅನುಪತ್ಯದಲ್ಲಿ ಸೃತಿ ಮಂಧಾನ ತಂಡವನ್ನು ಮುನ್ನೆಡೆಸಿದ್ದು, ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಡಿಕೊಂಡರು. ಆರಂಭದಲ್ಲಿ ಕಳಪೆ ಫಾರ್ಮ್‌ ತೋರಿದ್ದ ಭಾರತ ತಂಡ ನಂತರ ಗೆಲುವನ್ನು ಸಾಧಿಸಿದೆ.