Friday, 22nd November 2024

Zeeshan Siddique: ಬಾಬಾ ಸಿದ್ದಿಕಿ ಪುತ್ರ ಅಜಿತ್‌ ಪವಾರ್‌ ನೇತೃತ್ವದ NCPಗೆ ಸೇರ್ಪಡೆ

zeeshan

ಮುಂಬೈ: ಇತ್ತೀಚೆಗಷ್ಟೇ ಲಾರೆನ್ಸ್‌ ಬಿಷ್ಣೋಯ್‌(Baba Siddique) ಗ್ಯಾಂಗ್‌ನಿಂದ ಹತ್ಯೆಗೀಡಾಗಿದ್ದ ಮಹಾರಾಷ್ಟ್ರ ಮಾಜಿ ಸಚಿವ ಬಾಬಾ ಸಿದ್ದಿಕಿ ಪುತ್ರ ಜೀಶನ್‌ ಸಿದ್ದಿಕಿ(Zeeshan Siddique) ಅವರು ಶುಕ್ರವಾರ ಬೆಳಗ್ಗೆ ಅಜಿತ್‌ ಪವಾರ್‌ ನೇತೃತ್ವದ ನ್ಯಾಷನಲ್‌ ಕಾಂಗ್ರೆಸ್‌ ಪಕ್ಷ(NCP)ಗೆ ಸೇರ್ಪಡೆಗೊಂಡಿದ್ದಾರೆ. ಚುನಾವಣೆಗೆ ಇನ್ನೇನು ಕೆಲವೇ ದಿನಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇದಕ್ಕೂ ಮುನ್ನ ಜೀಶನ್‌ ಎನ್‌ಸಿಪಿ ಸೇರ್ಪಡೆಗೊಂಡಿದ್ದಾರೆ.

ಜೀಶನ್‌ ಸಿದ್ದಿಕಿಯನ್ನು ಕೆಲವೇ ದಿನಗಳ ತಿಂಗಳ ಹಿಂದೆಯಷ್ಟೇ ಕಾಂಗ್ರೆಸ್‌ನಿಂದ ಉಚ್ಛಾಟಿಸಲಾಗಿತ್ತು. ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಅಡ್ಡ ಮತದಾನದ ವರದಿಯ ನಂತರ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು. ಅವರು 2019ರಲ್ಲಿ ಗೆದ್ದ ವಂಡ್ರೆ (ಪೂರ್ವ) ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಸೋದರಳಿಯ ವರುಣ್ ಸರ್ದೇಸಾಯಿ ಅವರನ್ನು ಸೋಲಿಸಿದ್ದರು. ಅವರ ಶಿವಸೇನೆ ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿ ಮೈತ್ರಿಯ ಭಾಗವಾಗಿ ಬಣವು ಕಾಂಗ್ರೆಸ್ ಮತ್ತು ಶರದ್ ಪವಾರ್ ಎನ್‌ಸಿಪಿಯೊಂದಿಗೆ ಮೈತ್ರಿ ಮಾಡಿಕೊಂಡಿತ್ತು.

ಇದೀಗ ಎನ್‌ಸಿಪಿಗೆ ಸೇರ್ಪಡೆಗೊಂಡ ನಂತರ ಈ ಬಗ್ಗೆ ಪ್ರತಿಕ್ರಿಯಿಸಿದ ಜೀಶನ್‌ ಸಿದ್ದಿಕಿ, ನನಗೆ ಮತ್ತು ನನ್ನ ಕುಟುಂಬಕ್ಕೆ ಭಾವನಾತ್ಮಕ ದಿನವಾಗಿದೆ. ಈ ಕಷ್ಟದ ಸಮಯದಲ್ಲಿ ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಅಜಿತ್ ಪವಾರ್, ಪ್ರಫುಲ್ ಪಟೇಲ್ ಮತ್ತು ಸುನಿಲ್ ತಟ್ಕರೆ ಅವರಿಗೆ ನಾನು ಕೃತಜ್ಞನಾಗಿದ್ದೇನೆ. ನಾನು ಬಾಂದ್ರಾ ಪೂರ್ವದಿಂದ ನಾಮನಿರ್ದೇಶನವನ್ನು ಪಡೆದಿದ್ದೇನೆ, ಎಲ್ಲಾ ಜನರ ಪ್ರೀತಿ ಮತ್ತು ಬೆಂಬಲದೊಂದಿಗೆ, ನಾನು ಖಂಡಿತವಾಗಿಯೂ ಬಾಂದ್ರಾ ಪೂರ್ವವನ್ನು ಮತ್ತೆ ಗೆಲ್ಲುತ್ತೇನೆ ಎಂದು ನನಗೆ ಖಾತ್ರಿಯಿದೆ ಎಂದು ತಿಳಿಸಿದರು.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು ರಾಜಕೀಯ ಚಟುವಟಿಕೆ ಗರಿಗೆದರಿವೆ. ಪಕ್ಷಗಳು ಒಂದೊಂದಾಗಿ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಿವೆ.‌ ಗುರುವಾರ (ಅ. 24) ಎನ್‌ಸಿಪಿ (ಎಸ್‌ಪಿ) ತನ್ನ ಮೊದಲ ಪಟ್ಟಿ ರಿಲೀಸ್‌ ಮಾಡಿದ ಬೆನ್ನಲ್ಲೇ ಕಾಂಗ್ರೆಸ್‌ ತನ್ನ 48 ಅಭ್ಯರ್ಥಿಗಳನ್ನು ಘೋಷಿಸಿದೆ.

ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿ (Maha Vikas Aghadi) 85-85-85 ಸ್ಥಾನ ಹಂಚಿಕೆ ಸೂತ್ರವನ್ನು ಘೋಷಿಸಿದ ಒಂದು ದಿನದ ನಂತರ ಕಾಂಗ್ರೆಸ್‌ ತನ್ನ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ಒಪ್ಪಂದದ ಪ್ರಕಾರ ಮಹಾ ವಿಕಾಸ್ ಅಘಾಡಿಯ ಮೈತ್ರಿ ಪಕ್ಷಗಳಾದ ಶಿವಸೇನೆ (ಯುಬಿಟಿ), ಕಾಂಗ್ರೆಸ್‌ ಮತ್ತು ಶರದ್‌ ಪವಾರ್‌ ಅವರ ಎನ್‌ಸಿಪಿ (ಶರದ್‌ಚಂದ್ರ ಪವಾರ್‌) ಬಣ ತಲಾ 85 ಸೀಟುಗಳಲ್ಲಿ ಸ್ಪರ್ಧಿಸಲಿದೆ. ಇನ್ನುಳಿದ 33 ಕಡೆ ಮಹಾ ವಿಕಾಸ್ ಅಘಾಡಿಯ ಸಣ್ಣ ಮಿತ್ರಪಕ್ಷಗಳು ಕಣಕ್ಕಿಳಿಯಲಿವೆ.

ಕಾಂಗ್ರೆಸ್‌ನ ಮೊದಲ ಪಟ್ಟಿಯಲ್ಲಿ 25 ಹಾಲಿ ಶಾಸಕರಿಗೆ ಮಣೆ ಹಾಕಿದೆ. ನಾನಾ ಪಟೋಲೆ ಸಕೋಲಿಯಿಂದ, ಶಾಸಕಾಂಗ ಪಕ್ಷದ ನಾಯಕ ಬಾಳಾಸಾಹೇಬ್ ಥೋರತ್ ಸಂಗಮ್ನರ್‌ನಿಂದ, ಪ್ರತಿಪಕ್ಷದ ನಾಯಕ ವಿಜಯ್ ವಾಡೆಟ್ಟಿವಾರ್ ಬ್ರಹ್ಮಪುರಿಯಿಂದ, ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಕರಡ್ ದಕ್ಷಿಣದಿಂದ ಮತ್ತು ಸಿಡಬಬ್ಲ್ಯುಸಿ ಸದಸ್ಯ ಮತ್ತು ಪ್ರಾದೇಶಿಕ ಕಾರ್ಯಕಾರಿ ಅಧ್ಯಕ್ಷ ನಸೀಮ್ ಖಾನ್ ಚಾಂದಿವಲಿಯಿಂದ ಸ್ಪರ್ಧಿಸಲಿದ್ದಾರೆ.

ಆರಂಭದಲ್ಲಿ ಕಾಂಗ್ರೆಸ್‌ 125 ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದರೆ, ಶಿವಸೇನೆ (ಯುಬಿಟಿ) 100 ಸ್ಥಾನಗಳನ್ನು ಕೋರಿತ್ತು. ಶರದ್ ಪವಾರ್ ಅವರ ಎನ್‌ಸಿಪಿ 88 ಸ್ಥಾನಗಳನ್ನು ಕೇಳಿತ್ತು. ಆದರೆ ಕೊನೆಗೆ ಶರದ್‌ ಪವಾರ್ ಮಧ್ಯ ಪ್ರವೇಶಿಸಿ, ಚರ್ಚೆ ನಡೆಸಿ 85-85-85 ಸೂತ್ರವನ್ನು ರೂಪಿಸಿದರು. ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶಿವಸೇನೆ (ಯುಬಿಟಿ)ಯ ನಾಯಕ ಸಂಜಯ್ ರಾವತ್ 288 ಸ್ಥಾನಗಳಲ್ಲಿ 270 ಸ್ಥಾನಗಳ ಬಗ್ಗೆ ಒಮ್ಮತಕ್ಕೆ ಬರಲಾಗಿದೆ ಎಂದು ತಿಳಿಸಿದ್ದರು.

ಈ ಸುದ್ದಿಯನ್ನೂ ಓದಿ: Maharashtra Election: ಮಹಾರಾಷ್ಟ್ರ ಚುನಾವಣೆ; ಕಾಂಗ್ರೆಸ್‌ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ