Friday, 25th October 2024

Accident in Canada : ಡಿವೈಡರ್‌ಗೆ ಟೆಸ್ಲಾ ಕಾರು ಡಿಕ್ಕಿ; ಭಾರತೀಯ ಮೂಲದ ನಾಲ್ವರ ಸಾವು

Accident in Canada

ಟೊರೆಂಟೋ: ಡಿವೈಡರ್‌ಗೆ ಟೆಸ್ಲಾ(Tesla Car) ಕಾರು ಡಿಕ್ಕಿಯಾಗಿ ಕಾರಿಗೆ ಬೆಂಕಿ ತಗುಲಿದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಭಾರತೀಯರು ಮೃತಪಟ್ಟ ಘಟನೆ ಕೆನಡಾದ( Canada) ಟೊರೆಂಟೋ(Toronto) ಬಳಿ ನಡೆದಿದೆ. ಮೃತರ ಭಾರತೀಯ ಮೂಲದವರಾಗಿದ್ದು, ಮೃತರ ಪೈಕಿ ಇಬ್ಬರನ್ನು ಗೋಧ್ರಾದ ಕೇತಿ ಗೋಹಿಲ್‌ (30) ಹಾಗೂ ನಿಹಿಲ್‌ ಗೋಹಿಲ್‌ (26) ಎಂದು ಗುರುತಿಸಲಾಗಿದೆ. ಮೃತಪಟ್ಟ ಮತ್ತಿಬ್ಬರ ವಿವರಗಳು ಇನ್ನೂ ತಿಳಿದು ಬಂದಿಲ್ಲ. ಕೆನಡಾದ ಟೊರೆಂಟೋ ಬಳಿ ಈ ಅಪಘಾತ ನಡೆದಿದೆ. ಕಾರು ಡಿವೈಡರ್‌ಗೆ ಡಿಕ್ಕಿ ಹೊಡಿದ ಪರಿಣಾಮ ಕಾರಿನಲ್ಲಿ ಬೆಂಕಿ ತಗುಲಿ ಕಾರಿನ ಒಳಗಿದ್ದ ಪ್ರಯಾಣಿಕರು ಮೃತಪಟ್ಟಿದ್ದಾರೆ. ಇವರು ಚಲಾಯಿಸುತ್ತಿದ್ದ ಕಾರು ಸ್ವಯಂ ಚಾಲಿತವೇ ಎಂಬುದು ಇನ್ನು ತಿಳಿದು ಬರಬೇಕಿದೆ.

ಇತ್ತೀಚೆಗೆ ಟೆಸ್ಲಾ ಕಂಪನಿಯ ಕಾರಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದು, ಕೆಲ ದಿನಗಳ ಹಿಂದೆಯಷ್ಟೇ ಕೆನಡಾ ಪ್ರಜೆ ಪ್ರಯಾಣಿಸುತ್ತಿದ್ದ ಟೆಸ್ಲಾ ಕಾರು ಅಪಘಾತಕ್ಕೆ ಒಳಗಾಗಿತ್ತು. ನಂತರ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಬ್ಯಾಟರಿಗೆ ಬೆಂಕಿ ತಗುಲಿ ಕಾರು ಹತ್ತಿ ಉರಿದು ಕಾರಿನಲ್ಲಿದ್ದವರು ಮೃತಪಟ್ಟಿದ್ದರು. ಇನ್ನೊಂದು ಘಟನೆಯಲ್ಲಿ ಪ್ರಯಾಣಿಸುತ್ತಿರುವ ಕಾರಿಗೆ ಬೆಂಕಿ ತಗುಲಿ ಕಾರು ಚಾಲನೆ ಮಾಡುತ್ತಿದ್ದ ಮಹಿಳೆಗೆ ಬೆಂಕಿ ಹತ್ತಿಕೊಂಡಿತ್ತು. ನಂತರ ಕಾರ್‌ನಿಂದ ಹೊರ ಬಂದ ಮಹಿಳೆ ಸಹಾಯಕ್ಕಾಗಿ ಸಾರ್ವಜನಿಕರ ಬಳಿ ಅಂಗಲಾಚಿದ್ದಾರೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರಿಂದ ಪ್ರಾಣಾಪಾಯದಿಂದ ಬಚಾವ್‌ ಆಗಿದ್ದರು .

ಇದನ್ನೂ ಓದಿ: Nagamangala News: ಅಪಘಾತದಲ್ಲಿ ಯುವಕನ ಮೆದುಳು ನಿಷ್ಕ್ರಿಯ; ಅಂಗಾಂಗ ದಾನ ಮಾಡಿ ಮಾದರಿಯಾದ ಪೋಷಕರು

ಕಾರಿನಲ್ಲಿ ಪದೇ ಪದೆ ಬೆಂಕಿ ಕಾಣಿಸಿಕೊಳ್ಳುವುದರ ಬಗ್ಗೆ ಮಾತನಾಡಿದ ಟೊರೆಂಟೊದ ಅಗ್ನಿಶಾಮಕ ದಳದ ಮುಖ್ಯ ಅಧಿಕಾರಿ ವಿದ್ಯುತ್ ವಾಹನದ ಬೆಂಕಿಯನ್ನು ನಂದಿಸಲು ಹೆಚ್ಚಿನ ಪ್ರಮಾಣದ ನೀರಿನ ಅಗತ್ಯವಿದೆ. ಬೆಂಕಿಯನ್ನು ನಂದಿಸಿದ ನಂತರ, ಕಾರಿನ ಬ್ಯಾಟರಿ ಸೆಲ್ ಅನ್ನು ಡಂಪ್‌ಸ್ಟರ್‌ನಲ್ಲಿ ವಿಲೇವಾರಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

 ಈ ವರ್ಷದ ಜುಲೈನಲ್ಲಿ ಕೆನಡಾದಲ್ಲಿ ಪಂಜಾಬ್‌ನ ಮೂವರು ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಕಾರು ಹೆದ್ದಾರಿಯಿಂದ ಆಚೆಗೆ ಪಲ್ಟಿಯಾಗಿ ಮೃತ ಪಟ್ಟಿದ್ದರು.