Friday, 25th October 2024

Viral Video: ಸಿನಿಮಾ ನೋಡಿ ರೊಚ್ಚಿಗೆದ್ದ ಮಹಿಳೆ; ಖಳನಾಯಕ ಎದುರಿಗೆ ಸಿಗುತ್ತಿದ್ದಂತೆ ಮಾಡಿದ್ದೇನು ಗೊತ್ತಾ? ಇಲ್ಲಿದೆ ವಿಡಿಯೋ

Viral video

ಹೈದರಾಬಾದ್‌: ಕೆಲವೊಂದು ಪ್ರೇಕ್ಷಕರು ಸಿನಿಮಾಗಳನ್ನು ಎಷ್ಟು ಗಂಭೀರವಾಗಿ ಪರಿಗಣಿಸುತ್ತಾರೆಂದರೆ ಅಲ್ಲಿ ಬರುವ ಪಾತ್ರಗಳನ್ನು ನಿಜವೆಂದೇ ನಂಬಿರುತ್ತಾರೆ. ಇದರಿಂದ ಕೆಲವೊಂದು ಅನಾಹುತಗಳೇ ನಡೆಯುತ್ತದೆ. ಅಂತಹದ್ದೇ ಒಂದು ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಕನ್ನಡ ಮತ್ತು ತೆಲುಗು ನಟ ಎನ್‌ಟಿ ರಾಮಸ್ವಾಮಿ(NT Ramaswamy) ಅವರಿಗೆ ಮಹಿಳೆಯೊಬ್ಬಳು ಕಪಾಳಮೋಕ್ಷ ಮಾಡಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌(Viral Video) ಆಗಿದೆ.

ತೆಲುಗಿನ ಲವ್‌ ರೆಡ್ಡಿ ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ತೊಡಗಿದ್ದರು. ಈ ವೇಳೆ ರಾಮಸ್ವಾಮಿ ಅವರ ತಮ್ಮ ಚಿತ್ರತಂಡದ ಜೊತೆ ಹೈದರಾಬಾದ್‌ನಲ್ಲಿರುವ ಚಿತ್ರಮಂದಿರಕ್ಕೆ ಭೇಟಿ ನೀಡಿ ಅಲ್ಲಿ ಪ್ರೇಕ್ಷಕರಿಗೆ ಸರ್ಪ್ರೈಸ್‌ ಕೊಟ್ಟಿದ್ದರು. ಆನಂತರ ವೇದಿಕೆಯಲ್ಲಿ ರಾಮಸ್ವಾಮಿಯವರು ತಮ್ಮ ತಂಡದೊಂದಿಗೆ ವೇದಿಕೆಯಲ್ಲಿ ನಿಂತಿದ್ದಾಗ ಏಕಾಏಕಿ ವೇದಿಕೆಗೆ ಓಡಿ ಬಂದ ಮಹಿಳೆ ರಾಮಸ್ವಾಮಿ ಮೇಲೆ ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಕೊನೆಗೆ ಆಕೆಯನ್ನು ಅಲ್ಲಿದ್ದವರು ತಡೆದಿದ್ದು, ರಾಮಸ್ವಾಮಿಯನ್ನು ರಕ್ಷಿಸಿದ್ದಾರೆ.

ಈ ಕೃತ್ಯಕ್ಕೆ ಕಾರಣ ಏನು?

ಇನ್ನು ವಿಡಿಯೋದಲ್ಲಿ ಮಹಿಳೆ, ರಾಮಸ್ವಾಮಿಗೆ ಕಪಾಳಮೋಕ್ಷ ಮಾಡುವುದನ್ನು ಮಾತ್ರವಲ್ಲದೆ ಆತನ ಕಾಲರ್‌ನಿಂದ ಹಿಡಿದು ತಳ್ಳುವುದನ್ನು ಕಾಣಬಹುದಾಗಿದೆ. ಮಹಿಳೆ ಏಕಾಏಕಿ ದಾಳಿ ನಡೆಸುತ್ತಿದ್ದಂತೆ ರಾಮಸ್ವಾಮಿ ಆತಂಕಕ್ಕೀಡಾಗಿದ್ದರು. ಇನ್ನು ಮಹಿಳೆ ಈ ರೀತಿ ವರ್ತಿಸಲು ಕಾರಣ ಏನೆಂದು ಕೇಳಿದಾಗ ಚಿತ್ರದಲ್ಲಿ ರಾಮಸ್ವಾಮಿ ಖಳನಾಯಕನ ಪಾತ್ರ ಮಾಡಿದ್ದಾರೆ. ಆ ಪಾತ್ರಕ್ಕೆ ರಾಮಸ್ವಾಮಿ ಬಹಳ ಚೆನ್ನಾಗಿ ಜೀವ ತುಂಬಿದ್ದರು. ಆ ಪಾತ್ರ ನೋಡುವವರಿಗೆ ಕ್ರೋಧವುಂಟಾಗುವುದು ಸಹಜ. ಈ ಕಾರಣಕ್ಕಾಗಿಯೇ ಮಹಿಳೆ ಕೋಪದಿಂದ ಆತನ ಮೇಲೆ ಹಲ್ಲೆ ನಡೆಸಿದ್ದಾಳೆ ಎನ್ನಲಾಗಿದೆ.

ರಾಮಸ್ವಾಮಿ ಮೇಲೆ ಮಹಿಳೆ ಹಲ್ಲೆನಡೆಸುತ್ತಿದ್ದಂತೆ ನಟರಾದ ಅಂಜನ್ ರಾಮಚಂದ್ರ ಮತ್ತು ಶ್ರಾವಣಿ ಕೃಷ್ಣವೇಣಿ ಒಂದು ಕ್ಷಣಕ್ಕೆ ಶಾಕ್‌ ಆಗಿದ್ದಾರೆ. ಕೊನೆಗೆ ಮಹಿಳೆಯನ್ನು ಅಲ್ಲೇ ಇದ್ದ ಭದ್ರತಾ ಸಿಬ್ಬಂದಿ ಚಿತ್ರಮಂದಿರದಿಂದ ಹೊರಗೆಳೆದುಕೊಂಡು ಹೋಗಿದ್ದಾರೆ.

ಲವ್‌ ರೆಡ್ಡಿ ಚಿತ್ರ ಬಗ್ಗೆ

ಸ್ಮರಣ್ ರೆಡ್ಡಿ ಬರೆದು ನಿರ್ದೇಶಿಸಿದ ಮತ್ತು ಮೈತ್ರಿ ಮೂವೀ ಮೇಕರ್ಸ್ ನಿರ್ಮಿಸಿದ ಸಿನಿಮಾವು ಹಳೆಯ ಪ್ರೇಮಕಥೆಯ ಹಂದರ ಹೊಂದಿದೆ. ಕಥಾವಸ್ತುವು ತನ್ನ ಅನಿಶ್ಚಿತ ಪ್ರಣಯ ಜೀವನದಲ್ಲಿ ಸಂಕೀರ್ಣ ಭಾವನೆಗಳನ್ನು ಹುಡುಕುವ ಮಾಡುವ ನಾರಾಯಣ ರೆಡ್ಡಿಯ ಸುತ್ತ ಕೇಂದ್ರೀಕೃತವಾಗಿದೆ. ಎನ್‌ಟಿ ರಾಮಸ್ವಾಮಿ ಅವರ ಖಳನಾಯಕನ ಪಾತ್ರವು ನಾಯಕ ದಂಪತಿ ಬದುಕಿನಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಿನಿಮಾ ಅಕ್ಟೋಬರ್ 18, 2024 ರಂದು ಬಿಡುಗಡೆಯಾದಾಗಿನಿಂದ ಸಕಾರಾತ್ಮಕ ವಿಮರ್ಶೆಗಳನ್ನು ಗಳಿಸಿದೆ, ಪ್ರೇಕ್ಷಕರು ತಾಜಾ ಜೋಡಿಗಳು ಮತ್ತು ನವೀನ ನಿರೂಪಣೆಯನ್ನು ಮೆಚ್ಚಿದ್ದಾರೆ. ಆದಾಗ್ಯೂ, ಈ ಘಟನೆಯು ಆನ್-ಸ್ಕ್ರೀನ್ ಪಾತ್ರಗಳು ವೀಕ್ಷಕರ ಮೇಲೆ ಬೀರಬಹುದಾದ ತೀವ್ರವಾದ ಪರಿಣಾಮವನ್ನು ಎತ್ತಿ ತೋರಿಸಿದೆ.

ಈ ಸುದ್ದಿಯನ್ನೂ ಓದಿ:Kerebete Movie: ಪ್ರತಿಷ್ಠಿತ ಅಂತಾರಾಷ್ಟ್ರೀಯ ಗೋವಾ ಫಿಲ್ಮ್ ಫೆಸ್ಟಿವಲ್‌ಗೆ ಕನ್ನಡದ ‘ಕೆರೆಬೇಟೆ’ ಸಿನಿಮಾ ಆಯ್ಕೆ